Sunday, 26 February 2017

Quick Pickle from Mango(ದಿಢೀರ್ ಉಪಿ಼ನಕಾಯಿ)


Immediate pickle (ದಿಢೀರ್ ಉಪಿ಼ನಕಾಯಿ

ಮೊದಲಿಗೆ  ಹುಳಿ ಮಾವಿನ ಕಾಯಿ ಅಥವಾ ಮಿಡಿಗಳನ್ನ  ಸಣ್ಣಕೆ ಕತ್ತರಿಸಿ  ,ಉಪು಼ನೀರನು಼ ಕುದಿಸಿ (ಸ್ವಲ್ಪ ಹೆಚ್ಚಾಗಿ  )ಉಪ್ಪು ನೀರಿಗೆ ಅರಶಿನ ಹಾಕಿ ಕತ಼ರಿಸಿದ ಮಾವಿನ ಮಿಡಿಗಳನ಼. ಹಾಕಿ ಅರ್ಧ ಗಂಟೆ ಹಾಗೆಯೇ ಇಡಿ. ತಣ್ಣಗಾದ ಮೇಲೆ ಕೆಂಪು ಮೆಣಸಿನ ಕಾಯಿಯನ್ನ ಉಪು಼ನೀರಿನಲಿ಼ (ಬ್ಯಾಡಗಿ) ಹಾಕಿ ಮಿಕ್ಶಿಯಲ್ಲಿ ಅರೆದು ಅದಕ್ಕೆ ಮಾವಿನ ಮಿಡಿಯನ್ನು ಹಾಕಿ ಸಾಸಿವೆ ,ಮೆಂತೆಯನ್ನ ಹುರಿದು ಪುಡಿಯನ್ನ ಮಾಡಿ ಆ ಮಿಶ್ರಣಕ್ಕೆ ಹಾಕಿ. ಒಂದು ಸಾಸಿವೆ ಮತ್ತು ಇಂಗಿನ ಒಗ್ಗರಣೆಯನ್ನ ಕೊಡಿ.
ನಿಮ್ಮ ಧಿಡೀರ್ ಉಪ್ಪಿನ ಕಾಯಿ ತೈಯ್ಯಾರ್.

ಇದಕ್ಕೆ ಸಲಹೆಗಳನ್ನ ಕೊಟ್ಟವರು, ಪಿ.ವೈ ಸುಶೀಲಮ್ಮ, ಶಕುಂತಲ ಹೊಳ್ಳ, ಪಿ.ಆರ್ ಮನೋರಮ
26/2/2017

By P S Upadhya

Saturday, 11 February 2017

PSUKichen Vedeos From You Tube

https://www.youtube.com/playlist?list=PLoVEC5b5JA49Fvbc_Rz_kpsqChoXzM0SP
https://www.youtube.com/playlist?list=PLoVEC5b5JA49k54wF0_pDTCl-QPZHEVRb

Wednesday, 21 December 2016

ಪಾಸುಕಿಚನ್–ಭಾಗ೩


ಪಾಸುಕಿಚನ್ –ಭಾಗ೩



ನಿಮಗೆಲ್ಲರಿಗೂ ನಾಳಿನ ಮಕರ  ಸಂಕ್ರಾಂತಿಯ (ಪೊಂಗಲ್ಲಿಗೆ) ಶುಭಾಶಯವನ್ನ ಕೋರುತ್ತ, ಇಂದಿನ ನಮ್ಮ ಖಾರಾ ಪೊಂಗಲ್ಲನ್ನ ನಿಮ್ಮ ಮುಂದೆ, ದೇವರ ಮುಂದೆ ನೈವೇದ್ಯಕ್ಕೆ ಇಟ್ಟಂತೆ ಪ್ರಸ್ತುತ ಪಡಿಸುತ್ತೇನೆ. ಆದರೆ ಇಲ್ಲೊಂದು ಚಿಕ್ಕ ಬದಲಾವಣೆಯನ್ನ ನಾನು ಮಾಡಿಕೊಂಡಿದ್ದೇನೆ. ಅದು ಏನೆಂದರೆ, ನೊ ನಾನು  ತಿಂದು , ಆಮೇಲೆ

ಅದನ್ನ, ನಾನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇನೆ ಅಷ್ಟೆ.

ಎರಡು ಚಿಕ್ಕ ಬೆಳ್ಳೀ ಲೋಟದಲ್ಲಿ ಹೆಸರು ಬೇಳೆ
ಒಂದು ಚಿಕ್ಕ ಅದೇ ಬೆಳ್ಳಿ ಲೋಟದಲ್ಲಿ ಉಣ್ಣುವ ₹52, ಕಿಲೋ ಒಂದರ ಬೆಲೆಬಾಳುವ ಅಕ್ಕಿ
ಗೋಡಂಬಿ, ಉಪ್ಪು,ಚೀಸ್, ಸೂಪಿಗಾಗಿ ಬೇಸಿ,ಸೋಸಿ ಉಳಿದಂತಹ ಸೋರೇಕಾಯಿ, ನವಿಲ್ ಕೋಸಿನ ತುಂಡುಗಳು, 
ಅರಶಿನ ಪುಡಿ
ಶುಂಠಿ  ತುರಿದು ಹಾಕಿ
ಕಾಯಯನ್ನ ತುರಿದು ಹಾಕಿ
ಬೇಕೆಂದರೆ ಒಣಾ ದ್ರಾಕ್ಷಿ ತಳಿಯಿರಿ
 ಆಮೇಲೆ ಮೈಕ್ರೋವೇವ್ ಓವನ್ನಿನಲ್ಲಿ  ಸುಮಾರು 7 ಲೋಟ ನೀರನ್ನ ನಿಮ್ಮ ಮಿಶ್ರಣಕ್ಕೆ ಹಾಕಿ, 25 ನಿಮಿಷ ಇಟ್ಟು ಆಮೇಲೆ ಮೊಸರು, ದಾಳಿಂಬ್ರೆ ಹಾಗೂ ಚಿಟಿಕೆ ಉಪ್ಪಿನೊಂದಿಗೆ ತಿಂದೀರೋ ನೀವೆಲ್ಲಾ ನಾಳೆ ಡೈರೆಕ್ಟ್ ಸ್ವರ್ಗದ ಬಾಗಿಲಿನವರೆಗೆ ಹೋಗಿ ಮತ್ತೆ  ಉಳಿದಂತಹ ಪ್ರಾರಾಬ್ಧ ಕರ್ಮವನ್ನ ತೀರಿಸಲು ಈ ಭೂಲೋಕಕ್ಕೆ ಮರಳೀ ಬಾರದಿದ್ದರೆ, ನನ್ನ ಹೆಸರು ಸುರೇಂದ್ರನೇ ಅಲ್ಲಾ ಅಂತ ತಿಳಿದುಕೊಳ್ಳಿ

ಎಲ್ಲರಿಗೂ ನಾಳಿನ ಮಕರ ಸಂಕ್ರಮಣಕ್ಕೆ ಮತ್ತೊಮ್ಮೆ ಶುಭಾಶಯಗಳು
ಇತೀ ನಿಮ್ಮವನೇ ಆದ
ಸದಿಯ ಮಾಸ್ಟ್ರ ಕಿರೀ ಮಗ, ಮಗ ಹೊಡೀ ಮಗ,ಹೊಡಿ ಮಗ ಸುರೇಂದ್ರ
13/1/2017




ತಾರೀಕು ೧೨/೦೧/೨೦೧೭ ಬೆಳಿಗ್ಗೆ ೮.೩೦ ನಿಮಿಷ
ಧನುರ್ಮಾಸದ ಕೊನೆಯ ೨ ದಿನಗಳು ಮಾತ್ರ,
ಗುರುವಾರ.
1. ಪನ್ನೀರ್ ಪಾಲಕ್
2. ನಮ್ಮ ಊಡುಪಿಯ ಮಟ್ಟೀ ಗುಳ್ಳದ ಮೊಸರು ಬಜ್ಜಿ
3. ನನ್ನ ಸೋರೇಕಾಯಿ, ಟೊಮ್ಯಾಟೋ ಮತ್ತು ನವಿಲ್ ಕೋಸಿನ ಸೂಪಿಗೆ ೨೦ ನಿಮಿಷ ಮೈಕ್ರೋವೇವ್ ಓವನ್ನಿನಲ್ಲಿ ಬೇಸಿ ಸೂಪಿಗೋಸ್ಕರ ತೈಯ್ಯಾರಾದ ತರಕಾರಿಗಳು
4. ಬೆಳಿಗ್ಗೆ ಮಗಳು ಸುಷ್ಮ ಮತ್ತು ನನ್ನ ಮೊಮ್ಮಗ ಸಿಧ್ಧಾಂತನಿಗೋಸ್ಕರ ತೈಯ್ಯಾರು ಮಾಡಿದ ಕೆಸುವಿನ ಸೊಪ್ಪಿನ ದೋಸೇಕಲ್ಲಿನ ಪತ್ರೂಡಿ. ಫೋಟೋದಲ್ಲಿ ನಮ್ಮಿಬ್ಬರ ಪೋರ್ಷನ್ ಮಾತ್ರ ತೋರಿಸಲಾಗಿದೆ.
5. ಇನ್ನು ಒಲೆಯಮೇಲೆ ಹಾಲಿನ ಕೆನೆಯನ್ನ ಒಟ್ಟುಗೂಡಿಸಿಟ್ಟದ್ದು ಅದನ್ನ ಚರ್ನಿಂಗ್ ಮೆಷಿನ್ನಲ್ಲಿ ಕಡೆದು (೪ ಲೋಟ ತಣ್ಣೀರನ್ನ ಹಾಕಿ) ಬೆಣ್ಣೆಯನ್ನ ಮಾಡಿ, ತುಪ್ಪಕ್ಕಾಗಿ ಕುದಿಸುತ್ತಿರುವುದು ನೀವು ನೋಡಬಹುದು.
ಮಾಡುವ ವಿಧಾನವನ್ನ ಪದೇ ಪದೇ ಹೇಳುವ ಅಗತ್ಯವಿಲ್ಲ. ಇವತ್ತಿನ ಹೊಸ ಅಡುಗೆ ಏನೆಂದರೆ, ಪನ್ನೀರ್ ಪಾಲಕ್ ಬೆಳಿಗ್ಗೆ ಬೆಳಿಗ್ಗೆ.
ಇದನ್ನ ಕೇವಲ ೩/೪ ಗಂಟೆಯಲ್ಲಿ ಮಾಡಿದವರು , (ಕೊನೆಗೆ ನನ್ನ ಹೆಸರನ್ನೇ ಮುಕ್ಕಾಲು ಗಂಟೆಯ ಉಪಾಧ್ಯರೆಲ್ಲಿ? ಇವತ್ತು ಅಡುಗೆಯನ್ನ ಹಾಕಲೇ ಇಲ್ವಲ್ಲಾ ಅಂತ ಕರೆಯಬೇಡಿರಿ. ಇದನ್ನ ಯಾತಕ್ಕೆ ಹೇಳುತ್ತಿದ್ದೇನೆಂದರೆ, ಅಡುಗೆ ಮಾಡುವುದೊಂದು ಮಹಾ ಘನ ಕಾರ್ಯಾ ಅಂತ ಕೆಲವರು ಅದನ್ನ ಹೇಳುವುದುಂಟು (ಮನೆಯಲ್ಲಿ ಕೇಳುವ ಜನರಿದ್ದಲ್ಲಿ) ಅವರಿಗಾಗಿ ಒಂದು ಸೂಚನೆ ಕೊಡುತ್ತಿರುವುದು. ಇಲ್ಲಿ ಬೇಕಾಗಿರುವುದು ನಿಮ್ಮ ಚುರುಕುತನ, ಧಿಮಾಕು ಸರಿಯಾಗಿ ಕುದುರೆಯಂತೆ ಓಡಬೇಕು. ನಾನೀಗ ೨ ಗಂಟೆಯಲ್ಲಿ, ಸಂಸ್ಕೃತವನ್ನ ಬರೆದೆ. ಎರಡು ಜಾತಕಗಳನ್ನ (೧) ಡಿವೋರ್ಸ್ ಆಗಿದ್ದು ಈಗ ಹೆಂಡತಿಯಾದವಳಿಗೆ ಗಂಡನ ಹತ್ತಿರ ಹೋಗುವ ಆಸೆಯನ್ನ ತೋರಿಸುವಂತಹ ಜಾತಕದ ಪರಿಪೂರ್ಣ ಶೋಧನೆ. (೨) ಇನ್ನೊಂದು ಅವರ ಮಗನೇ ಆಗಿರುವ, ಅಪ್ಪನ ಜೊತೆಯಲ್ಲಿ ಬಿಟ್ಟು ಈಗ ಮಗನಿಗೆ ೧೯ ವರ್ಷಗಳಾದಾವಾಗ, ಆಗ ಅವರ ಹತ್ತಿರ ಮಗನನ್ನ ಬಿಟ್ಟು ಈಗ ಮರುಗುತ್ತಿರುವ ಕರುಣಾಜನಕ ತಾಯಿಯ ಮರುಳುತನ., ಅದನ್ನ ಮಗನ ಜಾತಕದ ಶೋಧನೆಯಿಂದ ಹೇಳಿದ್ದು (೩) ಮಹಾಲಕ್ಷ್ಮೀ ಮಂದಿರಕ್ಕೆ ಹೋಗಿ ಮಹಾಲಕ್ಷ್ಮಿಗೆ ನಮಃಸ್ಕರಿಸಿ, ಸಿಹಿ ಪೊಂಗಲ್ಲನ್ನ ತಿಂದು ಬಂದಿರುವುದು (೪) ಮನೆಯ ಮಡದಿಗೆ ಹಾಗೂ ದೆಹಲಿಯತ್ತ ಪ್ರಯಾಣವನ್ನ ಬೆಳೆಸಿದಂತಹ ಮಗಳಾದ ಸುಷ್ಮಾ ಅರುಣ್ ರಾವಿಗೂ ಕಾಫಿಯನ್ನ ಮಾಡಿ ಕೊಟ್ಟಿದ್ದು. ಈಗ ಸ್ವಲ್ಪ ಹಾಸಿಗೆಯ ಮೇಲೆ ವಿಶ್ರಾಂತಿಯನ್ನ ತೆಗೆದುಕೊಳ್ಳಬೇಕೆಂದಿರುವೆ. ಆದರೆ ನಿಮಗೆಲ್ಲಾ ಮಾಡಿದ್ದನ್ನ ಹೇಳಿ, ಫೋಟೋಗಳನ್ನ upload ಮಾಡಿ, ಆಮೇಲೆ ಹಾಸಿಗೆಯತ್ತ ಹೆಜ್ಜೆಯನ್ನ ಹಾಕೋಣವೆಂದು ಮಾಡಿರುವೆ. ಏನು ಹೇಳುತ್ತೀರಾ?
ಪಾರಂಪಳ್ಳೀ ಸುರೇಂದ್ರ ಉಪಾಧ್ಯ
ಹವ್ಯಾಸೀ ಜ್ಯೋತಿಷೀ.

Today's Special :-

1. Palak Pannir
2. Bengan and Curd gojju.(Chatney)
3. For bottle guard, Navil kosu and Tomyato soup, boiled vegetables
4. Kesu Leaves Patrudi. (Even Bengali People will prepare this)
5. After churning Malayi from Milk, preparation of ghee from it.
Total time taken is just 3/4 hours.
After posting this I will be free. Within that I already analysed two horoscopes and posted it.
I also prepared coffee for all the members of the family




ದಿವ್ಸಾ ಈ ಉಪಾಧ್ಯರಿಗೇನೂ ಕೆಲಸವೇ ಇಲ್ಲವೇ ಅಂತ ನೀವೆಲ್ಲಾ ಕೇಳಿಬಿಟ್ಟೀರಿ .ಹೌದು. ನಿವೃತ್ತ ಆದ ಮೇಲೆ ನಮಗೇನು ಕೆಲಸಾ ಹೇಳಿ.? ಬೇರವರಂತೆ ಪಾರ್ಕಿನಲ್ಲಿ ಸುತ್ತು ಹಾಕಿ ಹಾಳು ಹರಟೆ ಮಾಡಿಕೊಂಡು ಗಂಟೆ  1 ರವರೆಗೆ ಟೈಮ್ ಪಾಸ್ ಮಾಡಿ ಕೊಂಡು ಮಧ್ಯಾಹ್ನ ಊಟಕ್ಕೆ ಮಾತ್ರ ಬರುವರು ಇದ್ದಾರೆ. ಆದರೆ ನಾನು ಆರೀತಿಯ ಮನುಷ್ಯನಲ್ಲ ಅನ್ನಿ .
ಅದಕ್ಕೆಂದೇ ಸ್ವಲ್ಪ ಅಡುಗೆಗೆ ಸಹಾಯ ಮಾಡೋಣವೆಂದು ಇಂದು ಈ ಕೆಳಗಿನ ಐಟಮ್ಸ್ ಮಾಡಿರುತ್ತೇನೆ.

1. ಕಡಿಗೆ ಹುಳಿ.
2.ಬೀನ್ಸ್ ಪಲ್ಯ
3.ಮಟ್ಟಿ ಗುಳ್ಳದ ಮೊಸರು ಬಜ್ಜಿ.
4. ಗಣೇಶ ಹಪ್ಪಳ ರುಚಿಗಾಗಿ.

ಇದರ ರಿಸಿಪೆಯನ್ನ ಹಲವರಿಗೆ ಬಾರಿ ಹಾಕಿರುತ್ತೇನೆ.




ಇದನ್ನೆಲ್ಲಾ ಮಾಡಿದವರು
ಪಾರಂಪಳ್ಳಿ ಸುರೇಂದ್ರ ಉಪಾಧ್ಯ.
10/01/2017


ಇವತ್ತು ಸೋಮವಾರ,9/1/2017. ಈಗ ಊಟಕ್ಕೆ ಅಂಡ್ ಸುಟ್ಟ ಸೌತೇಕಾಯಿ ಹುಳಿ, ಕೆಂಪು ಹರಿವೆ ಸೊಪ್ಪಿನ ಪಲ್ಯ ಹಾಗೂ ಕೆಸುವಿನ ದೋಸೇಕಲ್ಲಿನ ಪತ್ರೂಡಿ.
ಇದಕ್ಕೆ ನಮ್ಮ ಮೊಮ್ಮಗನಾದ ಸಿಧ್ಧಾಂತನು ಕೆಸುವಿನ ಮೇಲೆ ಹಿಟ್ಟನ್ನ ಹರಡಿ ಎಲೆಯನ್ನೂ ಮಡಚಿ,ಆದನ್ನ ರೋಲ್ ಮಾಡುವಲ್ಲಿ ತನ್ನ ತಾಯಿಗೆ ಸಹಾಯ ಮಾಡಿತ್ತಿರುವುದು ನೀವೆಲ್ಲಾ ನೋಡಬಹುದು. ಇನ್ನೊಂದು ಬಾಕಿಬುಂಟು. ಅದೇನೆಂದರೆ ಗಣೇಷ ಮಾರ್ಕಿನ, ಉಂಬೂ ಹಪ್ಪಳವನ್ನ ಮೈಕ್ರೋವೇವ್ ಓವನ್ನಿನಲ್ಲಿ ಸುಡುವುದು.
ಹೋಯ್ ಒಟ್ಟಾರೇ ಜೀವನವನ್ನ ಗಮ್ಮತ್ತಾಗಿ ಕಾಲ ಕಳೆಯಲು ನಿಮ್ಮ ಆರೋಗ್ಯ ಸರಿ ಇರಬೇಕಂತೆ. ನಿಮ್ಮ ಆರೋಗ್ಯ ಸರಿ ಇದ್ದರೇ ತಾನೆ, ನೀವು ಹೊಟ್ಟೆ ತುಂಬ ತಿನ್ನಬಹುದಂತೆ. ಏಲಮಿತೆ. ಎಲ್ಲವುದಕ್ಕೂ ಆ ಗುರುನರಸಿಂಹನ ಆಶಿರ್ವಾದ  ಬೇಕೇ ಬೇಕು.

ಮಾಡಿದವರು,
ಸುಶ್ಮಾ ಆರುಣ ರಾವ್
ಬ್ರಿಟಿಷ್ ಏರ್ವೇಸ್
ಹಾಗೂ ನನ್ನ ಮಗಳು.
ಸಹಾಯ ಅವಳ ಮಗ, ನನ್ನ
ಮೊಮ್ಮಗನಾದ
ಚಿ. ಸಿದ್ಧಾಂತ ರಾವ್

There are three items. 1. Yellow cocumber sambar. 2. Red leaves curry and 3. Kesuvina leaves "patrUDi".









ಇವತ್ತು ಭಾನುವಾರ. ವೈಕುಂಟಕ್ಕೆ ಎಲ್ಲರೂ ಹೋಗುವ ಧನುರ್ಮಾಸದ ವೈಕುಂಟ ಏಕಾದಶಿಯ ಡಿನ.
ನಮ್ಮಲ್ಲಿ  ಇಂದು ಯಥಾ ಪ್ರಕಾರ ತರ ತರಹದ ಪದಾರ್ಥಗಳು.

1.ಬೆಂಡೇ ಕಾಯಿ ಫ್ರೈ. ಬೆಂಡೇ ಕಾಯಿಯನ್ನ ನಾಲ್ಕು ಭಾಗ ಸೀಳಿ, ಕಡಲೇ ಹಿಟ್ಟು, ಅಕ್ಕಿಹಿಟ್ಟು, ಒಣ ಮಾವಿನಕಾಯಿ ಪೌಡರ್, (ಅಮ್ಚೂರ್) ಉಪ್ಪು, ಖಾರದ ಪುಡಿ ಹಾಕಿ ಕಲಸಿ ಕಾದಿರುವ ಎಣ್ಣೆಯಲ್ಲಿ ಬಿಡಿರಿ.

2. ಯಥಾಪ್ರಕಾರ ನವಿಲ್. ಕೋಸು,ಟೊಮ್ಯಾಟೊ, ಪಾಲಕ್, ಹಸೀ ಮೆಣಸಿನ ಕಾಯಿ, ಸ್ವಲ್ಪ ಶುಂಠಿ ಹಾಕಿ 5 ಲೋಟ ನೀರನ್ನ ಹಾಕಿ, ಅರಶಿನ, ಹಿಂಗ್ ಹಾಗೂ ಉಪ್ಪನ್ನ ಹಾಕಿ 20 ನಿಮಿಷ ಮೈಕ್ರೋವೇವ್ ಓವನ್ನಿನಲ್ಲಿ ಬೇಸಲು ಇಡಿ. ಆಮೇಲೆ ಆ ನೀರನ್ನ ಸೊಸಿ ಅದಕ್ಕೆ ಲಿಂಬೇ ಹಣ್ಣನ್ನ ಹಿಂಡಿ, ಕೊತ್ತುಂಬರೀ ಸೊಪ್ಪನ್ನ ಕತ್ತರಿಸಿ  ಎಲ್ಲರಿಗೂ ಹಾಟ್ ಸೂಪನ್ನ ಸರ್ವ್ ಮಾಡಿ.

3. ಉಳಿದಿರುವ ಘನ ಪದಾರ್ಥವನ್ನ ಒಗ್ಗರಿಸಿ ಪಲ್ಯವನ್ನ ಮಾಡಿ.





4. ಅ ಬೆಂದ ಪದಾರ್ಥದಲ್ಲಿ ಪಾಲಕ್ ಸೊಪ್ಪನ್ನ ಎಲ್ಲಾ ಮಿಕ್ಷಿಯಲ್ಲಿ ಅರೆದು ನಿಮ್ಮ ಸೂಪನ್ನ ಇನ್ನಷ್ಟು ಪುಶ್ಟೀಕರಿಸಿ ನೋಡುವಾ.

5. ಮೆಂತ್ಯ ಸೊಪ್ಪು, ಟೊಮ್ಯಾಟೋ, 2 ಹಸೀ ಮೆಣಸು, ಉಪ್ಪು, ಹಿಂಗ್ ಹಾಕಿ ಮೈಕ್ರೋವೇನಲ್ಲಿ 15 ನಿಮಿಷ ಬೇಸಿ. ಆಮೇಲೆ ಬೆಂದ ತೊಗರೀ ಬೇಳೆಯೊಡನೆ ದಾಲ್ ಫ್ರೈ ಮಾಡಿ ನೋಡುವಾ.

6.8 ಉಂಬೂ ಹಪ್ಪಳವನ್ನ ಮಕ್ರೋವೇವ್ ಓವನ್ನಿನಲ್ಲಿ 1 ನಿಮಿಷದಲ್ಲಿ ಸುಟ್ಟು ಊಟದಲ್ಲಿ ಉಪಯೋಗಿಸೀ ಕಾಂಬೊ.



ನಾನು ಫೋಟೋದಲ್ಲಿ ತೋರಿಸಿದಂತಹ  ಘನ ಪದಾರ್ಥದ  ಚಟ್ನಿ ನಿಮ್ಮ ಮುಂದೆಯೇ ಪ್ರಸ್ತುತಪಡಿಸಿದ್ದೇನೆ

ಹೋಯ್ ಊಟ ಹೇಗುಂಟು? ಗಮ್ಮತ್ತಿಲ್ಲವೋ? ಈ ಎಲ್ಲಾ ಐಟಮ್ಸ್ ಕತ್ತರಿಸಿ ಬೇಸಿ ಕೊಟ್ಟವರು ಪಿ ಎಸ್ ಉಪಾಧ್ಯ. ಆದನ್ನ ಫಿನಲ್ ಫಿನಿಷ್ಡ್ ಪ್ರೊಡಕ್ಟ್  ಮಾಡಿದವರು ನನ್ನ ಪ್ಯಾರೀ ಮಗಳೂ ಸುಸ್ಮಾ ಅರುಣ್ ರಾವ್

8/1/2017




ಹಾಗಲಕಾಯಿ ಪಲ್ಯ,(Bitter guard curry) ಕಲ್ಲಂಗಡೀ ಹಣ್ಣಿನ ಸಿಪ್ಪೆಯ ಪಲ್ಯ,(Water Milan's husk curry)ಯ (ಇದು ನಮ್ಮ ದಕ್ಷಿಣ ಕನ್ನಡದವರು ಮಾತ್ರ ಮಾಡುವ ಪಲ್ಯ) . ಸಾಮಾನ್ಯವಾಗಿ ಸಿಪ್ಪೆಯನ್ನೂ ಬಿಸಾಕದೆ  ಕಸದಿಂದ ರಸವಾಗುವ ಕಲೆ ಈ ನಮ್ಮ ದಕ್ಷಿಣ ಕನ್ನಡದವರಿಗೆ ಮಾತ್ರ ಗೊತ್ತೂ ಅಂತ ತಿಳಿಯುತ್ತೇನೆ. ಉಳಿದ ಸಮುದಾಯದವರಿಗೆ ಸಖೇದಾಷ್ಚರ್ಯವಾಗುವುದುಂಟು. ಇವರುಗಳು ಯಾವುದನ್ನೂ ಬಿಡುವುದಿಲ್ಲವಲ್ಲಾ ಅಂತ. ಇರಲi

ಇನ್ನೊಂದು ಮೇಲೋಗರ ಬೆಂಡೇಕಾಯಿ (Sambar from lady finger )ಹುಳಿ. ಮತ್ತೊಂದು ಸೌತೇಕಾಯಿ ಸಾಸಿವೆ. (Cocumber with curd, corriander leaves, green mirchi, adrsk, salt)
ಇನ್ನೊಂದು ಹೆಸರು ಬೇಳೆ ಪಾಯಸ.(pAyasavinnU from green gram)
ತಗುಲಿದ ಸಮಯ ಕೇವಲ  ಒಂದೂಕಾಲು ಗಂಟೆ.
ಮಾಡಿದವರು ನನ್ನ ಸುಪುತ್ರಿ, ಸುಷ್ಮಾ ಅರುಣ್ ರಾವ್ (Sushma Arun Rao)
ಅವರು ಕೆಲಸ ಮಾಡುವ ಸ್ಥಳ
ಬ್ರಿಟಿಷ್ ಏರ್ವೇಸ್, ಹೊಸ ದೆಹಲಿ

ಪಾಯಸವಿನ್ನೂ ಆಗುವ ಹಂತದಲ್ಲಿರುವುದರಿಂದ ಅದರ ಫೋಟೋ ಮಾತ್ರ ಹಾಕಲಿಲ್ಲ.
7/1/2017





Rice noodle prepared by Mr.Siddhanth Rao,
S/O of Arun Kumar Rao and Mrs. Sushma Arun Rao on date 6/1/2017.Assisted by the director and the composer Mr P Surendra Upadhya, Retd.Principal of Dena Bank, Staff Training College, Karolbagh, New Delhi.






ಪ್ರತಿದಿನವು ಅಡುಗೆ ಮಾಡಲು ಒದ್ದಾಡುವ ಜನರನ್ನ ನೋಡಿ ಐಯ್ಯೋ ಪಾಪ ಅನ್ನಿಸುತ್ತೆ ನನಗೆ.ಕಾರಣ ಇಲ್ಲಿ ತೋರಿಸುವಂತಹ ಅಡುಗೆ ಇದೆಯಲ್ಲ,ಅದನ್ನ ಕೇವಲ ೩/೪ ಗಂಟೆಯಲ್ಲಿ ಮಾಡಿ ಈಗ ಜ್ಯೋತಿಷ್ಯದ ಬಗ್ಗೆ ಬರೆಯಲು ಕುಳಿತೆ.
1. ಐಟಮ್ ಸಂಖೆ ೧. ಬಿಸಿ, ಬಿಸೀ ಪಾಲಕ್, ಟೊಮ್ಯಾಟೊ, ಹಸೀ ಸೌತೇಕಾಯಿ, ಶುಂಠಿ, ಪೆಪ್ಪರ್ ಪೌಡರ್, ಉಪ್ಪು ಹಾಕಿದಂತಹ ಸೂಪ್. ಅದರಲ್ಲಿಯ ಘನ ಪದಾರ್ಥವನ್ನ ಇನ್ನೊಂದು ಪಾತ್ರೆಗೆ ಸೋಸಿ, ಅರ್ಧ ಘನಪದಾರ್ಥವನ್ನ ಗುಂಬಳಕಾಯಿ ಹುಳಿಗೆ ಮೀಸಲಾಗಿಡಿಸಿ, ಇನ್ನರ್ಧವನ್ನ ಮಿಕ್ಷಿಯಲ್ಲಿ ಹಾಕಿ ಅರೆದು ನುಣ್ಣಗೆ ಮಾಡಿ ಸೋಸಿದಂತಹ ತರಕಾರೀ ನೀರಿನೊಂದಿಗೆ ಮಿಕ್ಸ್ ಮಾಡಿ ಕುಡಿಯಲು ಮುಚ್ಚಿಟ್ಟೆ ನೋಡೀ.
2. ಇನ್ನೊಂದು ಗುಂಬಳಕಾಯಿ ಅಜ್ಜಿ ಹಾಗೂ ಸಿಪ್ಪೆಯನ್ನ ಹುಣಿಸೇ ಹಣ್ಣಿನ ನೀರು, ಕೊತ್ತುಂಬರೀ ಬೀಜ, ಉಪ್ಪು ಹಾಗೂ ಅರಶಿನ ಮತ್ತು ಹಿಂಗ ಹಾಕಿ ಬೇಯಿಸಿ, ಕಾಯಿಯ ತುರಿಯೊಂದಿಗೆ ಮಿಕ್ಷಿಯಲ್ಲಿ ಹಾಕಿ ಅರೆದು ಮಾಡಿದಂತಹ ಗೊಜ್ಜು. ಅದಕ್ಕೊಂದು ಒಗ್ಗರಣೆಯನ್ನ ಹಾಕಿ ಇಟ್ಟೆ.
3. ಇನ್ನೊಂದು ಗುಂಬಳಕಾಯಿ ಬೀಜ ಮತ್ತು ಸೌತೇಕಾಯಿ ಬೀಜವನ್ನ ೩ ಹಸೀಮೆಣಸಿನಕಾಯಿಯೊಂದಿಗೆ ಮೊಸರನ್ನ ಹಾಕಿ ಅರೆದು ಸೋಸಿದಂತಹ ನೀರಿನಂತಿರುವ ತಂಬುಳಿಗೆ ಕಾಯಿ ಮತ್ತು ಕೊತ್ತುಂಬರೀಸೊಪ್ಪು ಹಾಗೂ ಉಪ್ಪಿನೊಂದಿಗೆ ಅರೆದು ಮಿಕ್ಸ್ ಮಾಡಿ, ಒಗ್ಗರಣೆಯನ್ನ ಕೊಟ್ಟು ಮಧ್ಯಾಹ್ನ ಊಟಕ್ಕೆ ಮುಚ್ಚಿಟ್ಟೆ. ಇದನ್ನ ನಾವು ತಂಬುಳೀ ಅಂತ ಕರೆಯುತ್ತೇವೆ.
4. ೪ನೆಯದ್ದು ಗುಂಬಳ ಲಾಯಿ ಹುಳಿ. ಗುಂಬಳ ಕಾಯಿಯ ಸಿಪ್ಪೇ ತೆಗೆದು, ಬೀಜ ಮತ್ತು ಅದರ ಅಜ್ಜಿಯನ್ನ ತೆಗೆದು ಹುಳಿಯ ಹೋಳಿಗಂತಲೇ ಕತ್ತರಿಸಿ, ಸ್ವಲ್ಪ ತೊಗರೀ ಬೇಳೆ ಹಾಗೂ ಬೆಳಿಗ್ಗೆ ದೋಸೆಯೊಂದಿಗೆ ತಿನ್ನಲು ಮಿಕ್ರೋವೇವಿನಲ್ಲಿ ಬರೇ ೨೦ ನಿಮಿಷ ಬೇಸಿದಂತಹ ಅಲಸಂಡೇ ಹಾಗೂ ಬಟಾಣಿ ಬೀಜವನ್ನೂ ಹಾಕಿ, ಒಂದು ದೊಡ್ಡ ತುಂಡೂ ಬೆಲ್ಲವನ್ನೂ ಸೇರಿಸಿ, ಉಪ್ಪನ್ನ ಸ್ವಲ್ಪ ಬೆರೆಸಿ, ಅರ್ಧ ಚಮಚ ಅರಶಿನವನ್ನೂ ಹಾಕಿ ಕುಕ್ಕರಿನಲ್ಲಿ ಬೇಸಲು ಇಟ್ಟೆ. ಎರಡು ವಿಸಿಲ್ ಬಂದ ಏಲೆ ಬೆಂಕಿಯನ್ನ ಆರಿಸಿದೆ.
5. ಇದಕ್ಕೆ ಮಸಾಲೆಗಾಗಿ, ೧೦ ಒಣ ಘಾಟೀಮೆಣಸನ್ನೂ, ೨ ದೊಡ್ಡ ಚಮಚ ಕೊತ್ತುಂಬರೀ ಬೀಜವನ್ನೂ , ಹಿಂಗ್ ಸ್ವಲ್ಪ, ಸ್ವಲ್ಪ ಹುಣಿಸೇ ಹಣ್ಣನ್ನೂ ಹಾಕಿ ಬಾಣಲೆಯಲ್ಲಿ ತೆಂಗಿನ ಎಣ್ಣೆ (೪ ದೊಡ್ಡ ಚಮಚ) ಹಾಕಿ ಹೊರಿದು ಆಮೇಲೆ ಅದನ್ನ ಮಿಕ್ಷಿಗೆ ಹಾಕಿ ಕಾಯಿತುರಿ ಮತ್ತು ಸ್ವಲ್ಪ ನೀರಿನೊಂದಿಗೆ ಅರೆದು ಹುಳಿ ಹೋಳಿಗೆ ಮಿಕ್ಶ್ ಮಾಡಿದೆ. ಅದಕ್ಕೆ ಕಾದಿರಿಸಿದಂತಹ ಸೂಪಿಗಾಗಿ ಬೇಸಿದಂತಹ ಘನ ಪದಾರ್ಥವನ್ನೂ ಸೇರಿಸಿ ಒಂದು ಕುದಿ ಬರಿಸಿ ಸಾಸಿವೆ ಮತ್ತು ಜೀರಿಗೆ, ಹಿಂಗಿನ ಒಗ್ಗರಣೆಯನ್ನ ಹಾಕಿ ಮುಚ್ಚಿಟ್ಟೆ.
6. ಇದಿಷ್ಟಕ್ಕೆ ತಗಲಿದ ಸಮಯ ಬರೇ ೩/೪ ಗಂಟೆ. ಈ ೩/೪ ಗಂಟೆಯೊಳಗೆ ನನ್ನ ಗಾಯಿತ್ರೀ ಮಂತ್ರ, ಅಷ್ತಾಕ್ಷರೀ ಮಂತ್ರ, ಪಂಚಾಕ್ಷರೀ ಮಂತ್ರ ಹಾಗೂ ತ್ರ್ಯಂಬಕಂ ಯಜಾಮಹೇ ಎನ್ನುವ ಮೃತ್ಯುಂಜಯ ಮಂತ್ರವೂ ಜಪಿಸಿ ಆಯಿತು. ನೀವೆಲ್ಲಾದರೂ ಊಟಮಾಡಿದೆಯಾದರೆ, ನಿಮಗೆ ಎಲ್ಲಾ ಪುಣ್ಯಗಳೂ ಲಭಿಸಿ, ಊಟವಾದಮೇಲೆ, ಬಟ್ಟಲ ಬದಿಯಲ್ಲಿ ರೂಪಾಯಿ ಕಡಿಮೆಯೆಂದರೆ ೧೦೧.೦೦ ನ್ನ ಇಟ್ಟೇ ಹೋದೀರಿ.
7. ಇವುಗಳನ್ನ ಮಾಡಿ, ನಿಮಗಾಗಿ ಬರೆದು ಫೋಟೋದೊಂದಿಗೆ ಪ್ರಸ್ತುತ ಪಡಿಸಿದವರು
8. ಪಾರಂಪಳ್ಳೀ ಸುರೇಂದ್ರ ಉಪಾಧ್ಯ
9. ಎಲ್ಲರಿಗೂ ಹೊಸವರುಷ ೨೦೧೭ ಹರುಷವನ್ನೇ ತರಲಿ
10. ಆ ಭಗವಂತ ನಿಮಗೆಲ್ಲಾ ಆಯುರ್ ಆರೋಗ್ಯವನ್ನೇ ದಯಪಾಲಿಸಲೀ ಎಂದು ಹಾರೈಸುತ್ತೇನೆ








ನಾನು ಹೇಳಿದಂತೆ ಈಗ ತಾನೇ ಅಕ್ಕಿ ದೊಡ್ಣ ಮಾಡಿ ತಿಂದು ನಿಮಗೆ ಪ್ರಸ್ತುತ ಪಡಿಸುತ್ತೇನೆ. ಇನ್ನೂ ನಮಗೆ ರಾತ್ರಿ ಊಟವಿಲ್ಲ
ಇದನ್ನ ತೈಯ್ಯಾರು ಮಾಡಿದವರು
ಇನ್ಯಾರು
ಪಾರಂಪಳ್ಳೀ ಸುರೇಂದ್ರ
28/12/2016




ಇವತ್ತು ಹಲಸಿನ ಕಾಯಿ ಹುಳಿಗೆ,ಅಕ್ಕಿ ದೊಡ್ಣಕ್ಕೆ ಈವಾಗಲೇ ರೆಡಿ. ಹಾಗೂ ಬೇಸಿದ ಅಲಸಂಡೆ ಮತ್ತು ಕಡಲೆ ಕಾಳು
ದೊಡ್ಣಕ್ಕೆ ನೀವು ಏನು ಮಾಡಬೇಕೆಂದರೆ, 5 ಅಕ್ಕಿಗೆ ಒಂದು ಓರ್ಗ್ಯಾನಿಕ್ ಕೆಂಪು ಅಕ್ಕಿಯನ್ನ ನಿನ್ನೆ ಮಧ್ಯಾಹ್ನ ನೆನಸಿದೆ,ಇವತ್ತು ಬೆಳಿಗ್ಗೆ ನುಣ್ಣಗೆ ಅರೆದಿದ್ದನಲ್ಲಾ ಅದಕ್ಕೆ 2 ಲೋಟ ಬಿಸೀ ನೀರನ್ನ ಹಾಕಿ, ಮಧ್ಯಾಹ್ನ 4 ಗಂಟೆಗೆ ಕುಕ್ಕರಿನಲ್ಲಿ ಪಟಪಟನೆ ದೊಡ್ಣವನ್ನ ಮಾಡುವಿರಂತೆ
ಇದನ್ನ ತೈಯ್ಯಾರು ಮಾಡಿದವರು
Jackfruit Sambar Ready to eat in Afternoon. We already ate. It is SUPER SE UPER
ಇನ್ಯಾರು
ಪಾರಂಪಳ್ಳೀ ಸುರೇಂದ್ರ
28/12/2016





Ft


ಇವತ್ತಿನ ಮಧ್ಯಾಹ್ನದ ಊಟಕ್ಕೆ1.ಕಡಿಗೆ ಪಲ್ಯ2 .ಕೆಂಪು ಹರಿವೆ ಹುಳಿ.




ಯಾರಿಗೆ ಗೊತ್ತುಂಟು, ಯಾರಿಗೆ ಗೊತ್ತಿಲ್ಲ ಹೇಳಿ. ನಿಮಗೆಲ್ಲಾ ತಿಳಿದ ವಿಷಯವೇ.
ಮತ್ತೆ ನಾನು ಯಾಕೆ ಈ ಅಡುಗೆ ಕಲಂನಲ್ಲಿ, ನಿಮಗೆಲ್ಲಾ ಪೊಸ್ಟ್ ಮಾಡುತ್ತೇನೆ ಹೇಳಿ?
ಅದೇ ನಿಮಗೆ ಗೊತ್ತಿಲ್ಲಾ ಅಂತ ಹೇಳುವುದು.
ನಮ್ಮ ಹಿರಿಯರು ಏನು ಹೇಳಿದ್ದಾರೆಂದರೆ, ನೀವು ಏನೇ ಮಾಡಿ, ಬೇರವರಿಗೆ ಹಂಚಿದ ಮೇಲೆ ತಿನ್ನೀ ಅಂತ ಬಾರಿ ಬಾರಿ, ಸಾರಿ ಸಾರಿ ಹೇಳಿದ್ದಾರೆಂದರೆ ನಿಮಗೆಲ್ಲಾ ಮರೆತು ಹೋಯಿತೇನು?. ಆವಾಗಲೇ ನಿಮಗೆ ಮಾಡಿದಂತಹ ಪುಣ್ಯ ಸಿಗುತ್ತೇ ಅಂತ!
ಅದಕ್ಕೇ ನಾನು ನಿಮಗೆಲ್ಲಾ ಪೋಸ್ಟ್ ಮಾಡಿದ ಮೇಲೆಯೇ ಕರೆಕ್ಟ್ ಒಂದು ಗಂಟೆಗೆ ಊಟವನ್ನ ಮಾಡುವುದು.











ಇದನ್ನ ಮಾಡಿದವರು
ಫೀ. ಎಷ್ಟು ಉಪಾಧ್ಯ
ಕ್ಷಮಿಸಿ
ಪಿ.ಎಸ್.ಉಪಾಧ್ಯ
26/12/2016


ಇವತ್ತು ನಮ್ಮ ಮನೆಯಲ್ಲಿ ಗ್ರೀನ್ ಬಣ್ಣದ ಬರೀ ಅಕ್ಕಿಯ ದೋಸೆ
ಮಾಡುವ ವಿಧಾನ:--
ಸುಮಾರು 6 ಗಂಟೆಯ ಕಾಲ 3 ಲೋಟ ಅಕ್ಕಿಯನ್ನ ನೆನೆಸಿದ ಮೇಲೆ, 4 ಹಸೀ ಮೆಣಸು, ಸ್ವಲ್ಪ ಹಸಿ ಶುಂಠಿ, ತುರಿದ ಹಸಿ ಕಾಯಿ ಮತ್ತು ಕೊತ್ತುಂಬರೀ ಸೊಪ್ಪನ್ನ ಹಾಕಿ ನುಣ್ಣಗೆ ಅರೆಯಿರಿ. ನಿಮ್ಮ ಶೀತಲಾಗಾರದಲ್ಲಿ ಎಲ್ಲಿಯಾದರೂ ಒಂದಗಲದ (ಉರಗದ) ಸೊಪ್ಪಿನ ತಂಬುಳಿಗೆ ಅರೆದಂತಹ ಚಟ್ನಿ ಇದ್ದಲ್ಲಿ ಈ ಹಿಟ್ಟಿಗೆ ಮಿಕ್ಷ್ ಮಾಡಿ 2 ಲೋಟ ಬಿಸೀ ನೀರನ್ನೂ ಮಿಶ್ರಣಕ್ಕೆ ಹಾಕಿ ದೋಸೆ ಮಾಡಿ ತಿಂದೇ ನೋಡೀ. ಆಹಾ ಎಂತಹ ರುಚಿ ಅಂತೀರಾ? ಹೊಗಳಲು ಎರಡು ಬಾಯಿ ಸಾಲದೇ?



ಮಾಡಿದವರು
ಇನ್ಯಾರು? ಅಂತೀರ್?
P.S. ಉಪಾಧ್ಯ
ಕೆಲಸ ಕಾರ್ಯ ಇಲ್ಲದ, ಭರಿ ಕೈ ಭಂಟನೇ






ಇವತ್ತಿನ ಬೆಳಿಗ್ಗಿನ ತಿಂಡಿ:-

ಅಕ್ಕಿ ಶೇಮಿಗೆ :-
a.    ಮಾಡುವ ವಿಧಾನ:- ೫ ಸಣ್ಣ ಲೋಟ ಬೆಳ್ತಿಗೆ ಅಕ್ಕಿ, ಒಂದು ಸಣ್ಣ ಲೋಟ ಆರ್ಗೇನಿಕ್ ಅಂಗಡಿಯಿಂದ ತಂದಂತಹ ಕೆಂಪು ಅಕ್ಕಿ. ಇವುಗಳನ್ನ ಬೆಳಿಗ್ಗೆ ೮ ಗಂಟೆಗೆ ನೆನಸಿಟ್ಟು, ಸಾಯಂಕಾಲ ೮ ಗಂಟೆಗೆ ಹೊತ್ತಿಗೆ ನಿಮ್ಮ ಮನೆಯಲ್ಲಿರುವ ಗ್ರೈಂಡರಿನಲ್ಲಿ ಅರೆದಿಡಿ. ಅದಕ್ಕೆ ಒಂದು ಚಮಚ ಉಪ್ಪನ್ನು ಬೆರೆಸಿಡಲು ಮರೆಯಬಾರದು.
b.   ಮರು ದಿನ ಬೆಳಿಗ್ಗೆ ೮ ಗಂಟೆಗೆ ಅದನ್ನ ಒಂದು ಇಡ್ಲಿ ಅಟ್ಟದಲ್ಲಿ ಲೋಟದಲ್ಲಿ ಹಾಕಿ ಬೇಸಿಟ್ಟು, ಆ ಮೇಲೆ ಅದನ್ನ ಸೇಮಿಗೆ ಒರಳಿನಿಂದ ಒಂದೊಂದಾಗಿ ಶೇಮಿಗೆಯನ್ನ ಮಾಡಿ. ಕೈ ಸುಡದಿರುವಂತೆ ತಣ್ಣಗಿನ ನೀರನ್ನ ಉಪಯೋಗಿಸಿ. ಶೇಮಿಗೆಯನ್ನ ಹರಡಿ ಇಡಲು ನಿಮ್ಮ ಮನೆಯಲ್ಲಿರುವ ಸ್ಟೀಲಿನ ಪಾತ್ರೆಗಳನ್ನ ತೊಳೆದು ಜೋಡಿಸಿಡುವಂತಹ ಒಂದು ಸಿಬ್ಲಿನಾಕಾರದ ಆಯತಾಕಾರದ ಪಾತ್ರೆಯಲ್ಲಿ ಒಂದು ಪಾಣೀ ಪಂಚೆಯನ್ನ ತೊಳೆದು ಹರಡಿ ಹಾಕಿದ್ದು ಅದರ ಮೇಲೆ ಒಂದೊಂದಾಗಿ ಹಾಕುತ್ತಾ ಬನ್ನಿ. ನೀವೊಬ್ಬರೇ ಮಾಡಬಹುದು.ಬೇರವರ ಸಹಕಾರವೂ ಅಗತ್ಯವಿಲ್ಲಾ ಅನ್ನಿ. ನಾನು ಸುಮಾರಿಗೆ ೧೪ ಸಣ್ಣ ಮುದ್ದೆಗಳನ್ನ ಮಾಡಿದ್ದು ಅವುಗಳಲ್ಲಿ ಅರ್ಧ ಭಾಗವನ್ನ ನನ್ನ ಮಗಳ ಮನೆಗೂ ಕೊಟ್ಟಿರುತ್ತೇನೆ.
c.    ನಿಮಗೆ ಬೇಕಿದ್ದರೆ ಶೇಮಿಗೆ ಉಪ್ಪಿಟ್ಟನ್ನೂ ಮಾಡಬಹುದು.
2.   ಅದಕ್ಕೆ ನೆಂಚಿಕೊಳ್ಳಲು ಮಾವಿನಕಾಯಿಯ ಚಟ್ನಿ:-
a.    ಮಾವಿನ ಕಾಯಿಯನ್ನ ಸಣ್ಣಗೆ ಕತ್ತರಿಸಿ, ಅದರ ಜೊತೆಗೆ ದನಿಯಾ ೧ ಚಮಚ, ಹಿಂಗ್ ಸ್ವಲ್ಪ, ಉಪ್ಪು ಮತ್ತು ಕಾಯಿಯನ್ನ ತುರಿದು ಹಾಕಿ ಮಿಕ್ಷಿಯಲ್ಲಿ ಅರೆಯಿರಿ. ಅರೆದಂತಹ ಗೊಜ್ಜಿಗೆ ಬೇಕಿದ್ದಲ್ಲಿ ಸಾಸಿವೆ ಒಗ್ಗರಣೆಯನ್ನ ಕೊಡಬಹುದು.
3.   ಹಾಗೂ ಬೇಸಿದ ಅಲಸಂಡೆ ಮತ್ತು ಬಟಾಣೆಕಾಳುಗಳು
4.   ಸ್ವಲ್ಪ ಗ್ರೀನ್ ಸಲಾಡನ್ನೂ ಕತ್ತರಿಸಿ, ಇವುಗಳ ಜೊತೆಗೆ ತಿನ್ನಬಹುದು.





೨೦/೧೨/೨೦೧೬

ಮದ್ದೂರ್ ವಡಾ, ನನ್ನ ಸ್ಟೈಲಿನಲ್ಲಿ:-

ಹೋಯ್ ಮದ್ದೂರ್ ವಡಾ ಎಲ್ಲಿಯಾದರೂ ನಿಮ್ಮ ಹೆಂಗಸರು ಬೆಳಿಗ್ಗೆ ಬೆಳಿಗ್ಗೆ ಮಾಡಿದ್ದು ನಿಮ್ಮ ಜ್ನಾಪಕಕ್ಕೇನಾದರೂ ಬರುತ್ತಾ ಕಾಂಬೊ. ಇಲ್ಲಾ ಖಂಡಿತಾ ಇಲ್ಯೇ.
ನಾನು ನೋಡಿ ಇವತ್ತು ಬೆಳಿಗ್ಗೆ 1/2 ಗಂಟೆಯಲ್ಲಿ 8 ಮದ್ದೂರ್ ವಡೆ ಮಾಡಿರುತ್ತೇನೆಯೇ. ಮಂಟಪ ನಟರಾಜ ಹೇಳಿದ ನೆನಪು. ಮೈದಾಹಿಟ್ಟನ್ನ ಮಾತ್ರ ಹಾಕ್ಬೇಡೀ ಅಂತ. ಅದಕ್ಕೆ ನಾನು ಒಂದು ಸಣ್ಣ ಲೋಟ ಗೋಧೀ ಹಿಟ್ಟು 2 ಸಣ್ಣ ಕೀಸ್ ಲೋಟ ಅಕ್ಕಿ ಹಿಟ್ಟು 1/2 ಸಣ್ಣ ಲೋಟ ಅಕ್ಕಿ ರವೆ ಆಮೇಲೆ ಫೋಟೋದಲ್ಲಿ ತೋರಿಸಿದಂತಹ ಸಾಮುಗ್ರಿಹ್ಗಳನ್ನ ಹಿಟ್ಟನ್ನ 2 ಚಮಚ ಬಿಸೀ ಎಣ್ಣೆಯ ಜೊತೆಗೆ ತಣ್ಣೀರನ್ನ ಹಾಕಿ ಕಲಸಿದಂತಹ ಹಿಟ್ಟಿಗೆ ಹಾಕಿ ಹಪ್ಪಳದಂತೆ ಕೈಯಲ್ಲಿಯೇ ತಟ್ಟಿ ಒಂದು ಉರುಟಾದ ಡಬ್ಬದಿಂದ ಕತ್ತರಿಸಿ ಬಿಸೀ ಎಣ್ಣೆಯಲ್ಲಿಕಾಸಿ ಮಾಡಿದಂತಹ ಮದ್ದೂರ್ ವಡೆಗೆ ನೀವು ಎಲ್ಲಿಯಾದರೂ ತಿಂದಲ್ಲಿ ನನಗೆ ಖಂಡಿತ ಬಹುಮಾನ ರೂಪದಲ್ಲಿ 2000 ನೋಟನ್ನ ಬಿಸಾಕದೇ ಇರುವುದೇ ಇಲ್ಲ ನೋಡಿ.






ಪಿ ಎಸ್ ಉಪಾಧ್ಯ
19/12/2016
ನವಣೆಯಿಂದ ಮಾಡಿದಂತಹ ಕೆಸುವಿನ ಸೊಪ್ಪಿನ ದೋಸೇಕಲ್ಲಿನ ಪತ್ರೂಡಿ

This is very delicious item for all Karnataka, Andhra, Tamilnadu, Bengal, Maharastra, Gujarat, Punjab  etc. This leaves is available everywhere. Only type of preparation is different. Here I put ingredients as :-
1. Two small tumblers of akka chana with husk,
2. Two same tumblers of Navane (Millets),
3. One small tumbler of red rice available in organic shop.
You can use white rice instead of Navane, chana daal instead of Akka Chana and boiled rice if you want in the same proportion of one small tumbler. Soak it for 8 hours.
In the night at 8 o’ clock grind it with
1. 2 tea spoons of coriander seeds,
2. 2 tea spoons of Jeera,
3. hing,
4. Grated coconut one big cup(here I forgot to put),
For tamarind I used Mango pulp and 10 red chilies. Bengali may use 15 to twenty also as they want species.
Then procedure I have shown what you have to do in early in the morning as per photo and video attached. My breakfast of today, 16th Dec, 2016









P S Upadhya
16/12/2016
2nd Day of Dhanurmasa



ಬಿಸೀ ಬಿಸೀ ರೊಟ್ಟೀ
ಇಂದು ಯಾವ ವಾರವೆಂದೇ ತಿಳಿಯದು. ಈಗ ತಾನೇ ಬಿಸೀ ಬಿಸೀ ಊದ್ಲ,ಸಾಮೆ ಹಾಗೂ ಅರ್ಕದ ಜೊತೆಗೆ ಮೂರೇ ಮೂರು ಹಸೀ ಮೆಣಸು,ಹಸೀ ಶುಂಠಿ,ಕರ್ವೇರ್ ಸೊಪ್ಪು, ಉಪ್ಪು ಒಂದು ದೊಡ್ಡ ಚಮಚ ಕೋರ್ನ್ ಫ್ಲವರ್, ನಾಲ್ಕೇ ನಾಲ್ಕು ಬೇಬೀ ಕೋರ್ನ್,ಮತ್ತು ಜೋಳದ ಬುಟ್ಟದ ಹಸೀ ಕಾಳು ಒಂದು ಮುಷ್ಟಿ ಎಲ್ಲಾ ಹಾಕಿ ಸ್ವಲ್ಪವೇ ಸ್ವಲ್ಪ ನೀರನ್ನ ಹಾಕಿ ಮಿಕ್ಷಿಯಲ್ಲಿ ಅರೆದು, ಬಟರ್ ಹಂಚಿಗೆ ಹಚ್ಚಿ ಮಾಡಿದಂತಹ ಉಪಾಧ್ಯರ ಬಿಸೀ ಬಿಸೀ ರೊಟ್ಟೀ
ಯಾರಿಗೆ ಬೇಕೂ, ಯಾರಿಗೆ? ಪೆಟ್ರೋಲ್ ಖರ್ಚು ಮಾಡಿ ಬರುವವರಿದ್ದರೆ ಮೊದಲೇ ಕೈ ಎತ್ತಿ. ನೀವು ಬರ್ತೀರೆಂದರೆ ಕೊತ್ತುಂಬರೀ ಸೊಪ್ಪು ಮತ್ತು ಈರುಳ್ಳಿಅನ್ನ ತಂದು ಹಾಕಬೇಕಾಗುತ್ತೆ ನೋಡಿ.





ಇದನ್ನ ಮಾಡಿದಂತಹ ಭೂಪ
ಪಡುಕೆರೆಯ
ಸುರೇಂದ್ರ
15/12/2016
ಓಹೋ ಮರೆತೇ ಬಿಟ್ಟೆ. ನೀವು ಪಕ್ಕದಲ್ಲಿಯೃ ನೋಡುತ್ತಿದ್ದ ಪಾತ್ತ್ರೆಯಲ್ಲಿ ಟೊಮ್ಯಾಟೋ,(10)ಒಂದು ಇಡೀ ದೊಂಡೆ ಮೆಣಸು, ಅರ್ಧ ಕೇಬೇಜು ,ಜೋಳದ ಕಾಳು,ಉಪ್ಪು,ಪೆಪ್ಪರ್ ಪೌಡರ್, ಲವಂಗದ ಹುಡಿ ಮತ್ತು ಗರಂ ಮಸಾಲದ ಪೌಡರಿನ ಸೂಪ್. ಒಂದೇ ಒಂದು ಚಮಚ ಕೋರ್ನ್ ಪೌಡರನ್ನ ಹಾಕಿರಿತ್ತೇನೆ

ಇವತ್ತಿನ ಮಧ್ಯಾಹ್ನದ ಊಟಕ್ಕೆ
1. ಕೆಂಪು ಹರಿವೆ ಸೊಪ್ಪಿನ ಹುಳಿ
2. ಮಾವಿನ ಕಾಯಿಯ ಗೊಜ್ಜು
ಗೊಜ್ಜು ಮಾತ್ರ ಬೆಳಗ್ಗಿನ ಕಡುಬಿಗೆ ಒಳ್ಳ್ಯದಾಗುತ್ತೆ.





ಇಂದು ಸೋಮವಾರ. ನಮ್ಮಲ್ಲಿ ಅಕ್ಕಿ ರವೆ ಹಾಕಿದಂತಹ ಉದ್ದಿನ ಬೇಳೆಯ ಕಡುಬು.
ಬರ್ವವರು ಬರಬಹುದು. ಆದರೆ ಆತಿಥ್ಯ ಬರೇ ಇಬ್ಬರಿಗೇ ಮಾತ್ರ. ಕಾರಣ ನಾನು ಮಾಡಿದ್ದೇ ಬರೇ ಐದೇ ಐದು ಲೋಟ ಕಡುಬುಗಳು ಮಾತ್ರ




ಪಿ.ಎಸ್.ಉಪಾಧ್ಯಾಯ 12/12/2016