Sunday, 30 October 2016

ಪಾಸುಕಿಚನ್-ಭಾಗ ೧


ಪಾಸುಕಿಚನ್-ಭಾಗ-೧

೧. ನಿಮಗಿದು ಗೊತ್ತಾ? ನವಣೆಯ ಆಮ್ಲೆಟ್.ಹೌದೇ ಅದೇ ತರಾ ಮಹಾರಾಯರೆ.

ನರಕಚತುರ್ದಷಿಯಂದು ದೋಸೆ ತಿನ್ನಲೇಬೇಕೆಂಬ ರೂಢಿ ನಮ್ಮ ಹಿರಿಯರು ಮಾಡಿಟ್ಟಿದ್ದಾರಲ್ಲಾ. ಅದಕ್ಕೆ ಬೆಳಿಗ್ಗೆ ಬೆಳಿಗ್ಗೆ ಸುಮಾರು ೪ ಗಂಟೆಗೇ 2 ಲೋಟ ನವಣೆಯನ್ನ ನೆನಸಿದೆ. ಆದರ ಪಕ್ಕಕ್ಕೆ ಬಟಾಣಿಯನ್ನೂ ನೆನಸಿದೆ ಅನ್ನಿ. ಈಗ, ಬೆಳಿಗ್ಗೆ 8 ಗಂಟೆಗೆ ದನ್ನ ಉಪ್ಪು ಮತ್ತು ಮೊಸರಿನೊಂದಿಗೆ ಅರೆದು ದೋಸೆ ಮಾಡಿದರೆ ಆಮ್ಲೆಟ್ ತರಾನೇ ಬಂದಿತು. ಆಹಾ ಎಷ್ಟು ರುಚೀ ಅಂತೀರಾ, ಆದನ್ನ ನೀವು ವಾಟ್ಸೇಪ್ ಮುಖಾಂತರ ಕೇಳುವುದೇ ಬೇಡ. ಅದಕ್ಕೆ ಸ್ವಲ್ಪಾ ಕೊತ್ತುಂಬರಿ ಸೊಪ್ಪು, ಹಸೀ ಶುಂಠಿ ಹಾಕಿದಲ್ಲಿ ಅದರ ಮಜಾನೇ ಬೇರೆಯೇ.
ಅದರ ಪಕ್ಕದಲ್ಲಿರುವುದು ಬೀಟ್ರೂಟ್, ಕೇರೆಟ್, ಸುವರ್ಣ ಗೆಡ್ಡೆ ಹಾಗೂ ಮೂಲಂಗಿಯ ಸೂಪ್. ಇದೇನು ಇವ್ನ್ ದಿನಾ ಸೂಪ್ ಮಾಡ್ತಾನಲ್ಲಾ ಅಂತೀರಾ? ನೋಡಿ, ಕಳೆದ ಒಂದೂವರೆ ತಿಂಗಳಿಂದ ಸೂಪ್ ಕುಡಿತೇನೇ ಇದ್ದೆ. ನನಗೆ ಬಂದಂತಹ ವೈರಲ್ ಅರಿಥ್ರೈಟೀಸ್  ಅನ್ನುವುದು ಲ್ಲಿ ಓಡಿ ಹೋಯಿತೋ ಗೊತ್ತೇ ಇಲ್ಲಾ.       

ಪಿ.ಎಸ್.ಉಪಾಧ್ಯ
೨೯/೧೦/೨೦೧೬



೨.ನಮ್ಮ ಮನೆಯ ದೊಡ್ಣ

ದೋಸೆ ಅಕ್ಕಿಯನ್ನ ಕಡಿಮೆ ಎಂದರೆ 8 ಗಂಟೆಗಳ ಕಾಲ ಒಂದು ಮುಸ್ಟಿ ಕೊಚ್ಚಿಗೆ ಅಕ್ಕಿಯ ಜೊತೆ, ಇಂದು ಬೆಳಿಗ್ಗೆ ನಿಮಗೆ ದೊಡ್ಡಣ್ಣನನ್ನ ತಿನ್ನ ಬೇಕೆಂಬ ಆಸೆ ಏನಾದರೂ ಇದ್ದರೆ, ಅಥವಾ ಬಸ್ರೀ ಬಯಕೆ ಇದ್ದಲ್ಲಿ ನಿನ್ನೆ ಬೆಳಿಗ್ಗೆ ನೀರಿನಲ್ಲಿ ನೆನಸಿ, ಮನೆಯಲ್ಲಿ ಏನೂ ಕೆಲಸವನ್ನ ಮಾಡದಂತಹ ಹೆಣ್ಣು ಮಕ್ಕಳಿಗೆ ಆದನ್ನ ಚೆನ್ನಾಗಿ ನುಣ್ಣಗೆ ಅರೆಯಲು ಕೊಡಿ. ಅಕ್ಕಿಯನ್ನ ಹಿಂದಿನ ಸಾಯಂಕಾಲ ಸುಮಾರು 5 ಗಂಟೆಗೆ ಅರೆದಿದ್ದಲ್ಲಿ, ಇವತ್ತು ಬೆಳಿಗ್ಗೆ ನಿಮಗೆ ದೊಡ್ಣವನ್ನ ಮಾಡಲು ಬರುತ್ತೆ. ಆದರೆ ದೋಸೆ ಅಕ್ಕಿಯಲ್ಲಿ ಕಳಿ ಇಲ್ಲದಿದ್ದರೆ, ಅದು ಸರಿಯಾಗಿ ಬರುವುದಿಲ್ಲ.
ಆದರೆ, ನನಗೆ ಇಂದೇ  ದೊಡ್ಣ ತಿನ್ನುವ ಬಯಕೆ ಆಯಿತು. ನಾನು ನು ಮಾಡಿದೆ ಅಂದರೆ ಹಿಂದಿನ ದಿವಸವೇ ರಾತ್ರಿ ಒಂದು ಇಡೀ ಕಾಯಿಯ ಹಾಲಿನ ಜೊತೆಯಲ್ಲಿ ದೋಸೆ ಅಕ್ಕಿಯನ್ನ ಅರೆದು ಅದಕ್ಕೆ ಸ್ವಲ್ಪವೇ ಬಿಳೀ ಎಳ್ಳು ಹಾಕಿ ದೊಡ್ಣವನ್ನ ಮಾಡಿದೆ ಕಾಂಬೊ. ಇದನ್ನ  ಗುಂಬಳ ಕಾಯಿಯ ಚಟ್ನಿಯ ಜೊತೆಯಲ್ಲಿ ಈಗ ತಾನೇ ತಿಂದೆ ನೋಡಿ. ಬಹಳ ಚೆನ್ನಾಗಿದೆ ಎಂದು ಬೇರೆ ಹೇಳಬೇಕಾಗಿಲ್ಲ. ಇದನ್ನ ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತೇನೆ
ಅದರ ಜೊತೆಯಲ್ಲಿಯೇ, ಬೂಧಿ ಗುಂಬಳ ಕಾಯಿ, ಮೂಲಂಗಿ, ಕೇರೆಟ್ಟು, ಸ್ವಲ್ಪ ಕೊತ್ತುಂಬರಿ, ಸ್ವಲ್ಪ ಶುಂಠಿ, ಪೆಪ್ಪರ್ , ಲವಂಗದ ಪೌಡರ್ ಮತ್ತು ಚಕ್ಕೇ ಪೌಡರ್ ಹಾಕೆದಂತಹ ಬಿಸಿ ಬಿಸೀ ನ ಸೂಪ್, ಜೊತೆಯಲ್ಲಿ ಗುಂಬಳ ಕಾಯಿಯ ಸಿಪ್ಪೆ, ಹುಣಿಸೇ ಹಣ್ಣು, ಕೊತ್ತುಂಬರೀ ಬೀಜ, ಹಿಂಗ್ ಮತ್ತು ಉಪ್ಪನ್ನ ಹಾಕಿ ಬೇಸಿ ಕಾಯಿಯೊಂದಿಗೆ ಮಿಕ್ಸಿಯಲ್ಲಿ ಅರೆದು ತೆಂಗಿನೆಣ್ಣೆಯ ಒಗಗರಣೆಯನ್ನ ಕೊಟ್ಟಂತಹ ಬೂಧಿ ಗುಂಬಳ ಚಟ್ನಿ.
ಮಾಡಿದವರು
ಪಾರಂಪಳ್ಳೀ ಸುರೇಂದ್ರ ಉಪಾಧ್ಯ  ೨೮/೧೦/೨೦೧೬




೩. ಕೊಚ್ಚಕ್ಕಿ ಮತ್ತು ಹುರುಳಿಯ ಉಂಡೆ

ಕೊಚ್ಚಕ್ಕಿ ಮತ್ತು ಹುರುಳಿಯನ್ನ ಬೇರೆ ಬೇರೆಯಾಗಿ 8 ಗಂಟೆಗಳ ಕಾಲ ಬೆಳಿಗ್ಗೆ 8 ಗಂಟೆ ಯಲ್ಲಿ ನೆನಸಿಟ್ಟು ಸಾಯಂಕಾಲ 4 ಗಂಟೆಗೆ ಮಿಕ್ಸಿಯಲ್ಲಿ ಸ್ವಲ್ಪಾ ತರಿ ತರಿಯಾಗಿ ಅರೆ ಮುದ್ದೆಯಾಗಿ ಕಾಯಿಯೊಂದಿಗೆ ಅರೆಯಿರಿ. ದನ್ನ ಬೆಳಿಗ್ಗಿನಒರೆಗೆ ಫರ್ಮೆಂಟೇಷನ್ನಿಗೆ ಸುಮ್ಮನೆ ಹಿಟ್ಟನ್ನ ನಿದ್ದೆ ಮಾಡಲು ರಾತ್ರಿಯಲ್ಲಾ ಬಿಟ್ಟುಬಿಡಿ. ಹೇಗೆ ಕೆಲವು ಸೋಂಬೇರಿ ಮನುಷ್ಯರಿಗೂ 8 ಗಂಟೆಕಾಲ ನಿದ್ದೆ ಬೇಕಾಗುತ್ತೋ ಹಾಗೆಯೇ ನಮ್ಮ ಹಿಟ್ಟು ಕೂಡಾ 8 ಗಂಟೆ ಬೇಕೆನ್ನುತ್ತೆ. ಬೆಳಿಗ್ಗೆ ಅದಕ್ಕೆ ರುಚಿಗೆ ತಕ್ಕ ಉಪ್ಪು, ಸಾಸಿವೆ, ಕಡಲೇ ಬೀಜ, ಇಡೀ ಉದ್ದಿನ ಕಾಳು 2 ಚಮಚ, ಗೋಡಂಬಿ ಎಲ್ಲಾ ಹಾಕಿ ಒಗ್ಗರಣೆಯೊಂದಿಗೆ ನಮ್ಮ ಸೋಂಬೇರಿ ಪಾಪಣ್ಣೊಂದಿಗೆ(ಹಿಟ್ಟಿನ) ಮಿಕ್ಸ್ ಮಾಡಿ. ಅದಕ್ಕೆ ಕೊತ್ತುಂಬರಿ ಸೊಪ್ಪು, ಕರೀ ಪತ್ತ ಹಾಗೂ ಒಂದು ಕಡಿ ಕಾಯಿಯನ್ನ ಹೆರೆದು ಮಿಕ್ಸ್ ಮಾಡಿ. ಸಣ್ಣ ಉಂಡೆಯನ್ನ ಕಟ್ಟಿ, ಚಿತ್ರದಲ್ಲಿ ತೋರಿಸಿದ ಹಾಗೆ ನೀರಿನ ಹಬೆಯಲ್ಲಿ ಬೇಯಲು  ಒಂದರ್ಧ ಗಂಟೆ ಬಿಡೀ ಕಾಂಬೋ. ಬೇಕಾದರೆ ಹಸೀ ಮೆಣಸಿನ ಕಾಯಿಯನ್ನ ಕತ್ತರಿಸಿ ಹಿಟ್ಟಿನೊಂದಿಗೆ ಮಿಕ್ಸ್ ಮಾಡಲು ಮರೆಯದಿರಿ. ಮರೆತೆಯಾದರೆ ಅಯ್ಯೋ ಅಂತಾ ಬೊಬ್ಬೆಯನ್ನ ಹಾಕದಿರಿ ನನ್ನ ಗೆಳೆಯರೇ.
ಈಗ 4 ಉಂಡೆಯನ್ನ ತಿಂದು ನೋಡಿ. ಅದಕ್ಕೆ ನನ್ನ ಓಮದ ಚಟ್ನಿಯನ್ನಾದರೂ ಉಪಯೋಗಿಸಬಹುದು, ಇಲ್ಲಾ ನಿನ್ನಿನ ಸಾಂಬಾರ್ ಸ್ವಲ್ಪ ಬೆಚ್ಚಗೆ ಮಾಡಿ ತಿನ್ನಬಹುದು. ಉಪನಯನವಾದಲ್ಲಿ ಬಿಸೀ ಸಾಂಬಾರ್ ಮಾಡಿ ತಿನ್ನಿ. ಅಷ್ಟೇ.
 ಆಯ್ತಾ?
ಮಾಡಿ ಬರೆದವರು
ಪಿ ಎಸ್ ಉಪಾಧ್ಯ
25/10/2016



೪. ನವಣೆಯ ಪುಳಿಯೋಗರೆ

ಒಂದು ಸಣ್ಣ ಲೋಟ ನವಣೆಯನ್ನ ಮಿಕ್ರೋವೇವ್ ಓವನ್ನಿನಲ್ಲಿಡುವಂತಹ ಪಿಂಗಾಣಿ ಬೌಲ್ನಲ್ಲಿ ಹಾಕಿ, ಅದಕ್ಕೆ ಜೋಳದ ತೆನೆಯಿಂದ ತೆಗೆದಂತಹ ಕಾಳು, ಹೀರೇ ಕಾಯಿ (ಅರ್ಧ),ದೊಂಡೇ ಮೆಣಸಿನ ಕಾಯಿ (1), ಬದನೇ ಕಾಯಿ (1), ಹಸೀ ಶುಂಠಿ, ಒಂದೇ ಒಂದು ಹಸೀ ಮೆಣಸಿನ ಕಾಯಿ(ಬೇಕೆಂದರೆ ೨ ಹಾಕಿ) , ಒಂದೇ ಒಂದು ಟೊಮೇಟೋ ಎಲ್ಲವನ್ನೂ ನಾಲ್ಕು ತುಂಡುಗಳನ್ನಾಗಿ ಕತ್ತರಿಸಿ ಹಾಕಿ. ಅರ್ಧ ಚಮಚ ಉಪ್ಪು, ಎರಡು ಚಮಚ ಹುಣಿಸೇ ಹಣ್ಣಿನ ನೀರು, ಕಾಲು ಚಮಚ ಅರಸಿನ , ಒಂದು ಚಿಟಿಕೆ ಹಿಂಗ್ ಹಾಕಿ 2 ಲೋಟ ನೀರನ್ನ ಹಾಕಿ ಓವನ್ನಿನಲ್ಲಿ15 ನಿಮಿಷಗಳ ಕಾಲ ಇಡಿ. ಆಮೇಲೆ ಇಳಿಸಿದಮೇಲೆ ಪುಳಿಯೋಗರ ಪೌಡರನ್ನ 2 ಚಮಚ ಹಾಕಿ ಕಲಸಿ ಒಂದು ತುಪ್ಪದ ಒಗ್ಗರಣೆಯನ್ನ ಕೊಟ್ಟು, ಮೊಸರಿನೊಂದಿಗೆ ತಿಂದು ನೋಡಿ ಕಾಂಬೋ. ಬೇಕೆಂದರೆ ಕಾಯಿಯನ್ನ ಹೆರೆದು ಹಾಕಿ.
ಬಹಳ ಚೆನ್ನಾಗಿ ಬಂದಿದೆ ಎಂದು ನಾನು ತಿಂದಿದ್ದು, ಅದರ ರುಚಿಯನ್ನ ನಿಮಗೆ ಹೇಳುತ್ತೇನೆ.
ಮಾಡಿ ಬರೆದವರು
ಪಿ ಎಸ್ ಉಪಾಧ್ಯ
24/10/2016



೫.ಓಮದ ಗೊಜ್ಜು.

ಓಮ ಮತ್ತು ಕಾಳು ಮೆಣಸು ಎರಡೂ 50 ಗ್ರೇಮ್ ಒಂದು ಬಾಣಲೆಯಲ್ಲಿ ಸಣ್ಣ ಬೆಂಕಿಯಲ್ಲಿ ಹೊರಿಯುತ್ತಾ ಇರಿ. ಹಾಗೆ ಹೊರಿಯುವಾಗ ಒಂದು ಇಡೀ ಬೆಳ್ಳುಳಿಯನ್ನ ಒಡೆದು ಸಿಪ್ಪೆಯನ್ನ ತೆಗೆದುಕೊಳ್ಳಿ. ಬರೇ 10 ಎಸಳನ್ನ ಬಾಣ್ಲೆಗೆ ಹಾಕಿ. ಸ್ವಲ್ಪ ಹಿಂಗನ್ನೂ ಹಾಕಿ. ಮೇಲೆ ಒಂದು ಮಿಕ್ಸಿಗೆ ಹಾಕಿ, ಒಂದು ಇಡೀ ಕಡಿ ಕಾಯಿ ತುರಿ, 5 ದೊಡ್ಡ ಎಸಳು ಹುಣಿಸೇ ಹಣ್ಣು, ಸ್ವಲ್ಪ ರುಚಿಗೆ ತಕ್ಕಂತೆ ಉಪ್ಪನ್ನ ಹಾಕಿ ಸಣ್ಣಗೆ ಗ್ರೈಂಡ್ ಮಾಡಿ. ತೆಕ್ಕೊಳ್ಳಿ 15 ದಿನಕ್ಕೆ ಸ್ವಲ್ಪ ಸ್ವಲ್ಪವೇ ಬಟ್ಟಲಿಗೆ ಮೊದಲಿಗೇ ಹಾಕಿ 2 ಚಮಚ ತುಪ್ಪದೊಂದಿಗೆ,( ಅದೂ ದನದ ತುಪ್ಪವಾದರೆ ಬಹಳ ಒಳ್ಳೆಯದು) ಅನ್ನದ ಜೊತೆಯಲ್ಲಿ ಹೊಡೆದಿರೋ, ನಿಮ್ಮ ಹಸಿವು ಮುಂದಿನ ದಿನಗಳಲ್ಲಿ ಇಮ್ಮಡಿಯಾಗಿ ನಿಮ್ಮ ಮನೆಯ ಅಕ್ಕಿಯು ಹೇಗೆ ಖರ್ಚಾಗುತ್ತೇ ಅಂತ ನನಗೆ ಹೇಳಿ. ಇದು ಆರೋಹ್ಯಕ್ಕೂ ಬಹಳ ಒಳ್ಳೆಯದು.
ಇದನ್ನ ನಮಲ್ಲಿ ಬಾಣಂತೀ ಮದ್ದನ್ನಾಗಿ ಹೆತ್ತ 30 ದಿನಗಳ ಒರೆಗೆಹೆತ್ತ ಕರಳು ಗಟ್ಟಿಯಾಗಲು ಉಪಯೋಗಿಸುತ್ತಾರೆ.
ಪಿ ಎಸ್ ಉಪಾಧ್ಯ
೨೩/೧೦/೨೦೧೬




೬. ಡೈಯಾಬೆಟಿಸಿಗಾಗಿ ಒಂದು ಸೂಪ್

ಬೇಬಿ ಕೋರ್ನ್, 1 ನವಿಲ್ ಕೋಸು, ಅರ್ಧ ದೊಂಡೇ ಮೆಣಸಿನ ಕಾಯಿ, 1 ಮೂಲಂಗಿ, 2 ಹಣ್ಣು ಟೊಮೇಟೋ, ಪುದಿನಾ ಒಂದು ಹಿಡಿಯಸ್ಟು, ಸ್ವಲ್ಪ ಜೀರಿಗೆ, ಕಾಲು ಚಮಚ ಕೋರ್ನ್ ಪೌಡರ್, ಸ್ವಲ್ಪ ಶುಂಠಿ, ಒಂದು ಸಣ್ಣ ಉಂಡೆ ಬೆಲ್ಲ, ಒಂದು ಚಿಟಿಕೆ ಲವಂಗದ ಹಾಗೂ ಒಂದು ಚಿಟಿಕೆ ಚಕ್ಕೇ ಪೌಡರ್ ಎಲ್ಲವನ್ನೂ ಒಂದು ಬೋರಸಿಲ್ ಬೀಕರಿನಲ್ಲಿ ಹಾಕಿ, ಅದಕ್ಕೆ  5 ಲೋಟ ನೀರನ್ನ ಹಾಕಿ ಸಣ್ಣ ಬೆಂಕಿಯಲ್ಲಿ  ೩೦ ನಿಮಿಷಗಳ ಕಾಲ ಗುಳ್ಳೆಗಳು ಬರುವರೆ ಬೆಂಕಿಯ ಮೇಲೆ ಇಡಿ. ನಾನು ಸ್ವಲ್ಪ ಹೆಸರು ಬೇಳೆಯನ್ನೂ ಹಾಕಿದ ಕಾರಣ ಇದನ್ನ ಮುಕ್ಕಾಲು ಗಂಟೆ ಇಟ್ಟೆ. ಆಮೇಲೆ ನಿಮಗೆ ಗೊತ್ತೇ ಇದೆ. ಮಿಕ್ಸಿಯಲ್ಲಿ ಹಾಕಿ ಅರೆಯಬೇಕು.  ಆದರೆ ಇವತ್ತಿನ ಮಿಕ್ಸಿಯಲ್ಲಿ ಘನ ಪದಾರ್ಥವನ್ನ ಅರೆದು ಅದನ್ನೂ ಸೋಸಿದಂತಹ ನೀರಿನೊಂದಿಗೆ ಬೆರೆಸಿರುತ್ತೇನೆ. ನಮ್ಮ ಬೆಳಗ್ಗಿನ ತರಕಾರೀ ಸೂಪ್ ರೆಡಿ.

೭. ನವಣೆ, ಸಾಮೆ ಮತ್ತು ಅರ್ಕ ಅಥವಾ ಹಾರಕದ ಕಿಚಡೀ

ಈಗ ನವಣೆ 1/4 ಲೋಟ, ಸಾಮೆ ಮತ್ತು ಹಾರಕ ಒಟ್ಟೊಗೆ 1/4 ಲೋಟ ಒಂದು ಮೈಕ್ರೋವೇವ್ ಓವನ್ನಿನ್ನಲ್ಲಿಡುವ ಗಾಜಿನ ಬೌಲ್ನಲ್ಲಿ ಹಾಕಿ. ಅದಕ್ಕೂ ಸ್ವಲ್ಪ ಹೆಸರು ಬೇಳೆ (1/2 ಲೋಟಹಾಕಿ. ಇದಕ್ಕೇನಾದರೂ ನಿಮಗೆ ಬೇಕಾಗುವಂತಹ ಎಲ್ಲಾ (3 ರಿಂದ 4 ತರ )ತರಕಾರಿಯನ್ನ ಕತ್ತರಿಸಿ ಹಾಕಿ. 2 ಹಸೀ ಮೆಣಸನ್ನ ಸೀಳಿ ಹಾಕಿ. 1/2 ಚಮಚ ಉಪ್ಪು, ಸಣ್ಣ ಉಂಡೆ ಬೆಲ್ಲ, ಹಿಂಗ್, ಅರಸಿನ ಪೌಡರ್ ಹಾಕಿ ಮೈಕ್ರೋವೇವ್ ಓವನ್ನಿನಲ್ಲಿ 20 ನಿಮಿಷ ಇಡಿ. ಬೇಕಿದ್ದರೆ ಒಂದು ಜೀರಿಗೆಯ ಒಗ್ಗರಣೆ ಕೊಡಬಹುದು. ಮೊಸರಿನೊಂದಿಗೆ ತಿನ್ನುತ್ತಾ. ಎಸ್ಟು ರುಚಿ ಅಂತ ನನಗೆ ವರದಿ ಮಾಡಲು ಮರೆಯದಿರು.

ಇತೀ ನಿಮ್ಮವನೇ ಆದ
ಪಿ.ಎಸ್.ಉಪಾಧ್ಯ
೨೨/೧೦/೨೦೧೬




೮. ಕೆಸುವಿನ ಸೊಪ್ಪಿನ ದೋಸೇ ಕಲ್ಲಿನ ಪತ್ರೂಡಿ

ನವಣೆ,ಬಾರ್ನಯಾರ್ಡ್ ಮಿಲ್ಲೆಟ್ಸ್, ಕಡಲೇಬೇಳೆ, ಹಿಂಗ್, ೫-೬ ಎಸಳು ಹುಣಿಸೇ ಹಣ್ಣು, ಬ್ಯಾಡಗೀ ಮೆಣಸಿನ ಕಾಯಿ( 10), ಕುತ್ತುಂಬರೀ ಬೀಜ (೨ ಚಮಚ), ಜೀರಿಗೆ (೧ ಚಮಚ) , ಉಪ್ಪು ರುಚಿಗೆ ತಕ್ಕಂತೆ, ಮತ್ತು ಅರ್ಧ ಕಡಿ ಕಾಯಿ ಎಲ್ಲಾ ಹಾಕಿ ಅರೆದಂತಹ ಹಿಟ್ಟನ್ನ ಕೆಸುವಿನ ಸೊಪ್ಪಿನ ಮೈಗೆಲ್ಲಾ ನಿಧಾನವೇ ಪ್ರಧಾನವೆಂದು ಹಚ್ಚಿ ಉರುಟು ಗೋಲಾಕಾರವಾಗಿ ಸುತ್ತಿ , ಉರುಟು ಉರುಟಾಗಿ ಕತ್ತರಿಸಿ ತೆಂಗಿನ ಎಣ್ಣೆಯನ್ನ ಒಂದು ಮೂರು ಚಮಚಾ ಹಾಕಿದಂತಹ ದೋಸೇ ಕಲ್ಲಿನ ಮೇಲೆ ಸಣ್ಣ ಬೆಂಕಿಯಲ್ಲಿ ಈಗ ತಾನೇ ಮಾಡಿ ನಾನು ತಿನ್ನುತ್ತಿದ್ದೇನೆ. ಆಹಾ ಎಷ್ಟು ರುಚಿ ಅಂತ ನಿಮಗೆ ಹೇಗೆ ಹೇಳಲಿ? ಇದು ಡೈಯಾಬೆಟೀಸಿನವರಿಗೆ ರಾಮ ಬಾಣ. ನೀವು ಅಕ್ಕಿಅಯ್ನ್ನ ಬಿಟ್ಟು ಈ ಏಕದಳದ ಧಾನ್ಯಗಳನ್ನ ಹೆಚ್ಚು ಉಪಯೋಗಿಸಿದರೆ ಬಹಳ ಒಳ್ಳೆಯದು. ಅಕ್ಕಿಯನ್ನ ತಿಂದಲ್ಲಿ ಅರ್ಧ ಗಂಟೆಯಲ್ಲೇ ರಕ್ತಕ್ಕೆ ಸಕ್ಕರೆ ಸೇರುತ್ತದಂತೆ. ಅದೇ ಗೋಧಿ ಮತ್ತು ಅದರ ಹಿಟ್ಟೀನ ಚಪಾತಿ ಅಥವಾ ರೋಟಿಯನ್ನ ತಿಂದಲ್ಲಿ, ೪೫ ನಿಮಿಷಗಳ ಮೇಲೆ ರಕ್ತಕ್ಕೆ ಸಕ್ಕರೆ ಸೇರುತ್ತದಂತೆ. ಮತ್ತೆ ರಾಗಿಯ ಮುದ್ದೆ ಅಥವಾ ಗಂಜಿ, ಅಥವಾ ರೋಟಿಯನ್ನ ತಿಂದಲ್ಲಿ ರಕ್ತಕ್ಕೆ ೨ ಗಂಟೆಗಳ ಮೇಲೆ ಸಕ್ಕರೆ ಸೇರಿದರೆ, ಅದೇ ನೀವುಗಳು ಈ ಮಿಲ್ಲೆಟ್ಸ್ಗಳನ್ನ ಉಪಯೋಗಿಸಿದಲ್ಲಿ, ೫ ಗಂಟೆಗಳ ಮೇಲೆ ರಕ್ತಕ್ಕೆ ಸಕ್ಕರೆ ಸೇರುತ್ತದೆಂದಾದ ಮೇಲೆ, ಯಾವುದು ಒಳ್ಳೆಯದೆಂದಾಯಿತು? ನೀವೇ ಹೇಳಿ ನೋಡೋಣ!

ಪಾರಂಪಳ್ಳಿ ಸುರೇಂದ್ರ ಉಪಾಧ್ಯ
12102016
6.30 ಸಂಜೆ



೯. ಬೇರೆ ಬೇರೆ ಸೂಪ್ ಮತ್ತು ಜೂಸನ್ನ ಕುಡಿದ ಮೇಲಾಗುವ ಪರಿಣಾಮ!

These are the different Soups and Juices prepared for the last one month. Because of consumption of these I become normal from Viral Arthritis attack on August 15th, 2016. My weight reduced to 77 from 80 which is my Birth Number and Fate Number together!😁😁

ಬರೆದು ಪ್ರಸ್ತುತ ಪಡಿಸಿದವರು
ಪಾರಂಪಳ್ಳೀ ಸುರೇಂದ್ರ ಉಪಾಧ್ಯ
೧೧/೧೦/೨೦೧೬







೧೦. ಗೋಧಿ, ರಾಗಿ ಹಿಟ್ಟಿನ ರೊಟ್ಟಿ- ಬಸಳೆ ಸೊಪ್ಪು, ವಿಟಾಮಿನ್ ಸೊಪ್ಪು, ತುಳಸೀ ಸೊಪ್ಪಿನೊಂದಿಗೆ.

ಮೊತ್ತ ಮೊದಲಿಗೆ, ಗೋಧಿ ಹಿಟ್ಟು, 2 ಸಣ್ಣ ಲೋಟ, ಒಂದು ಲೋಟ ರಾಗಿ ಹಿಟ್ಟು, ಸ್ವಲ್ಪ ಉಪ್ಪು ಒಂದು ಅಗಲ ಮೂತಿಯ ಪಾತ್ರೆಯಲ್ಲಿ ತೆಗೆದುಕೊಂಡೆ. ಅದಕ್ಕೆ ಬಸಳೇ ಸೊಪ್ಪು, ವಿಟಾಮಿನ್ ಸೊಪ್ಪು ಮತ್ತು ತುಳಸೀ ಎಲೆಯನ್ನ ಹಾಕಿ  ಮಿಕ್ಸಿಯಲ್ಲಿ ಅರೆದು ಸೋಸಿದ ರಸವನ್ನ ಸ್ವಲ್ಪ ಬೆಂಕಿಯಲ್ಲಿ ಬಿಸೀ ಮಾಡಿ ಅದರಿಂದ ಪಾತ್ರೆಯಲ್ಲಿರುವ ಹಿಟ್ಟನ್ನ ಚೆನ್ನಾಗಿ ಕಲಸಿದೆ. ಕಲಸಿದಂತಹ  ಹಿಟ್ಟು ಹಂಚಿಗೆ ತಟ್ಟುವಸ್ಟು ಗಟ್ಟಿ ಇರಬೇಕೆನ್ನಿ. ಮೇಲೆ, ಒಂದು ಚಮಚ ತುಪ್ಪವನ್ನ ಹಂಚಿಗೆ ಹಚ್ಚಿ, ಮೇಲೆ ಒಂದು ಲೋಟದಲ್ಲಿ ತಣ್ಣೀರನ್ನ ತೆಗೆದುಕೊಂಡು ಕೈಯನ್ನ ಅದ್ದಿ ಅದ್ದಿ ಹಂಚಿಗೆ ತಟ್ಟುತ್ತಾ ಆದನ್ನ ಹಂಚಿನ ಅಗಲಕ್ಕೆ ಹದರಿಸಿದೆ.  ರುಚಿಯು ಬೇಕೆಂದಲ್ಲಿ ಒಂದು ಹಸೀ ಮೆಣಸಿನ ಕಾಯಿಯನ್ನ , ಹಾಗೂ ಶುಂಠಿಯನ್ನ ಕತ್ತರಿಸಿ ಆ ಹಿಟ್ಟಿನೊಂದಿಗೆ ಮಿಕ್ಸ್ ಮಾಡಿ. ಒಂದು ಅಗಲವಾದ ಬಾವುಡಿಯನ್ನ ಮುಚ್ಚಿದೆ. ಇಲ್ಲಾ ಬಟ್ಟಲನ್ನ ಮುಚ್ಚಿದೇ ಅನ್ನಿ. ಮೇಲೆ ಒಂದು ಹತ್ತು ನಿಮಿಷದ ಮೇಲೆ ಆದನ್ನ ಮಗುಚಿ ಮತ್ತೆ 5 ನಿಮಿಷ ಕಾಯಿಸಿ, ಮಾಡಿದಂತಹ ಕೆಸುವಿನ ಸೊಪ್ಪಿನ ಚಟ್ನಿಯ ಜೊತೆಯಲ್ಲಿರುವ ತಿಂದೇ ನೋಡೀ. ಆಹಾ. ಎಂಥಾ ರುಚೀ ಅಂತೀರಾ?😀😀😀
Before eating, I had soup prepared from Basale leaves, vitamin leaves and Tulasi leaves along with pepper powder, salt and after filtering lemon juice. Photos are attached herewith.
ಮಾಡಿದವರು
ಪಾರಂಪಳ್ಳಿ ಸುರೇಂದ್ರ ಉಪಾಧ್ಯ
೧೦/೧೦/೨೦೧೬


೧೨. ಏಕದಳ ಧಾನ್ಯ ಹಾಗೂ ದ್ವಿದಳ ಧಾನ್ಯದ ದೋಸೆ

ಇವತ್ತು ಅಂದರೆ ತಾರೀಕು 29/09/2016 ಗುರುವಾರದಂದು ನಮ್ಮ ಮನೆಯಲ್ಲಿ ಕೆಸುವಿನ ಸೊಪ್ಪಿನ ಚಟ್ನಿ, ನವಣೆ, ಸಾಮೆ,ಅರ್ಕ ಅಥವಾ ಹಾರಕ,ಹೆಸರು ಕಾಳು,ಉದ್ದಿನ ಕಾಳು ಅಥವಾ ಉದ್ದಿನ ಬೇಳೆ ಎಲ್ಲಾ 1 ಸಣ್ಣ ಲೋಟ, ಇವುಗಳನ್ನೆಲ್ಲಾ ಅರೆದು ಮಾಡಿದಂತಹ ದೋಸೆ ಮತ್ತು 1 ಹಾಗಲ ಕಾಯಿ, 1 ಮೂಲಂಗಿ, 1 ಕೇರೆಟ್ ಒಂದು ನವಿಲ್ ಕೋಸು, 5 ಬೆಳ್ಳುಳ್ಳಿ ಸ್ವಲ್ಪ ಜೀರಿಗೆ, 1 ಚಮಚ ಕುತ್ತುಂಬರಿ ಪೌಡರ್ ಎಲ್ಲಾ ಬೀಕರಿನಲ್ಲಿ ಹಾಕಿ ಸಣ್ಣ ಬೆಂಕಿಯಲ್ಲಿ ಕುದಿಸಿ ಸೋಸಿದಂತಹ ಸೂಪ್.
ಇನ್ನು ಕೆಸುವಿನ ಸೊಪ್ಪಿನ 1 ನ್ನ ಕತ್ತರಿಸಿ 1 ತಾಮ್ರದ ತಳದ ಪಾತ್ರೆಗೆ ಹಾಕಿ, 5 ದಳ ಹುಣಿಸೇ ಹಣ್ಣಿನ್ನ ಹಾಕಿ, 1/2 ಚಮಚ ಹಳದಿ ಪೌಡರ್ ಹಾಗೂ 1 ಲೋಟ ನೀರನ್ನ ಹಾಕಿ ಸಣ್ಣ ಬೆಂಕಿಯಲ್ಲಿ ಸುಮಾರು ನೀರು ಅರ್ಧ ಆಗಿತತೆ ಕುದುಸಿ ತಣ್ಣಗಾಗಲು ಬಿಡಿ.
ಒಂದು ಬಾಣಲೆಯನ್ನ ತೆಗೆದು ಒಲೆಯದು ಬೆಂಕಿಯ ಮೇಲೆ ಇಟ್ಟು, 2 ದೊಡ್ಡ ಚಮಚ ತೆಂಗಿನ ಎಣ್ಣೆಯನ್ನ ಹಾಕಿ, 2 ಕೆಂಪು ಮೆಂಅಸಿನ ಕಾಯಿಯನ್ನ ತುಂಡು ಮಾಡಿ ಎಣ್ಣೆಗೆ ಹಾಕಿ, 2 ಚಮಚ ಕುತ್ತುಂಬರಿ ಬೀಜ, 1 ಚಮಚ ಜೀರಿಗೆ, 2 ದೊಡ್ಡ ಕತ್ತರಿಸಿದಂತಹ ಈರುಳ್ಳಿ, 5 ಬೆಳ್ಳುಳ್ಳಿ ಎಲ್ಲವನ್ನೂ ಕೆಂಪು ಬಣ್ಣ ನತುರೆ ಹುರಿದು  ತಣ್ಣಗಾಗಲು ಬಿಡಿರಿ. ಮೇಲೆ ತೆಂಗಿನ ತುರಿ ಸುಮಾರು 3/4 ಕಡಿಯೊಂದಿಗೆ ಮಿಕ್ಸಿಗೆ ಹಾಕಿ ರುಚಿಗೆ ತಕ್ಕಂತೆ ಉಪ್ಪನ್ನ ಹಾಕಿ ಸಣ್ಣಕ್ಕೆ ಅರೆಯಿರಿ ಕಾಂಬೋ. ಮೇಲೆ ಬಾಣಲೆಯಲ್ಲಿನೊಂದು ಒಗ್ಗರಣೆ ಹಾಕಿ ಅರೆದಂತಹ ಚಟ್ನಿಯನ್ನ ಹಾಕಿ ನಾಲ್ಕೈದು ಬಾರಿ ಸಣ್ಣ ಸಟ್ಟುಗ ಇಲ್ಲಾ ದೊಡ್ಡ ಚಮಚದಿಂದ ಮಗುಚಿ ಬೆಂಕಿಯನ್ನ ಆರಿಸಿನ್ಗ್ ಕಾಂಬೊ.
ಮಾಡಿದಂತಹ 3 ದೋಸೆಯೊಂದಿಗೆ ಚಟ್ನಿಯೊಂದಿಗೆ ತೆಕ್ಕೊಂಡರೆ, ಮಧ್ಯಾಹ್ನ 1 ಗಂಟೆಯ ವರೆಗೆ ನಿಮ್ಮ ಜಠರಾಗ್ನಿ ಸುಮ್ಕೇ ಮನ್ಕಂತ್ನೇ ಇಲ್ಯೇ ನೀವೇ ನೋಡಿ.

ಇದನ್ನ ಮಾಡಿ, ರುಚಿ ಕಂಡು ನಿಮಗೇ ಫೋಟೋ ಸಮೇತ ಪ್ರಸ್ತುತ ಪಡಿಸಿದ ಮಹಾನು ಭಾವ
ಪಿ ಎಸ್.ಉಪಾಧ್ಯ
೨೯/೦೯/೨೦೧೬



೧೩. ಮಿಕ್ಸ್ಡ್ ವೆಜ್ ಸೂಪ್

ಅಲ್ಲಾ, ಉಪಾಧ್ಯಾಯರಿನ್ನೂ ಯಾತಕ್ಕೆ ಸೂಪೂ, ಜೂಸೂ ಅಥವಾ ಅದರ ಮಿಕ್ಸೂ, ತಿಂಡಿ, ಪಲ್ಯ ಹಾಕಲಿಲ್ಲಾ ಅಂತ ಕೊರಗದಿರಿ. ಇಕೋ ಬಂದೆ ಕಾಣಿ. ಇವ್ರ್ ದಿವ್ಸಾ ಸೂಪನ್ನ ಹಾಕಿ ನಮ್ಮ ತಲೆ ಯಾತಕ್ಕಪ್ಪಾ ತಿಂತಾರೇ ಅಂತ ತಿಳೀಬೇಡಿ ಕಣ್ರಿ. ಇದಕ್ಕೂ ಒಂದು ಕಾರಣವಿದೆ ಮತ್ತು ಅದಕ್ಕೂ ಒಂದು ಬೆಲೆ ಇದೆ. ಸುಮ್ ಸುಮ್ನೆ ಹಾಕಲಿಕ್ಕೆ ನನ್ನ ಮಂಡೀ ಇನ್ನು ಹಾಳಾಗ್ಲಿಲ್ಲಾ ನೋಡ್ರೀ. ಇದರ ಹಿಂದೊಂದು ಕಥೆ ಇದೆ ಕಾಣ್ರೀ.
ಇದೇ ಆಗಸ್ಟ್ ೧೫ ರಂದು ನಮ್ಮ ಸ್ವಾತಂತ್ರ್ಯ ದಿನಾಚರಣೆಯ ದಿವ್ಸಾ ಫ್ಲೇಗನ್ನ ಚನ್ನಮ್ಮನ ಕೆರೆ ಅಚ್ಚುಕಟ್ಟು ಪಾರ್ಕಿನಲ್ಲಿ ಹಾರಿಸುವ ಸಮಾರಂಭದಲ್ಲಿ ಭಾಗಿಯಾಗಿ, ಪುಕ್ಕಟೆ ಕೊಟ್ಟಂತಹ ಉಪ್ಪಿಟ್ಟೂ, ಕೇಸರೀ ಬಾತೂ, ಬಾದಾಮೀ ಬರ್ಫೀ, ಮತ್ತು ಕಾಫೀ ಎಲ್ಲಾ ಮುಗಿಸಿ ಮನೆ ಕಡೆ ಹೆಜ್ಜೆ ಹಾಕಿದವನಿಗೆ ಮನೆಯ ಮೆಟ್ಟಿಲನ್ನ ಹತ್ತಲು ಬಾರ!. ಯಪ್ಪೋ ಇದೆಂತಾ ಆಯ್ತು ನಂಗೇ ಅಂತ ತಿಳಿಯುದೊರೊಳಗೆ , ನಗೆ ರ್ಮಕ್ಕೆ ಬಂದ ಪತ್ನೀಗೂ ಅಲ್ಲಾ ಕ್ಷಮಿಸಿ, ನನ್ನ ಧರ್ಮ ಪತ್ನಿಗೂ ಅದೇ ರೀತಿ ನೋವು ಎಲ್ಲಾ ಕಡೆ ಶುರುವಾಯ್ತೇ. ಸರೀ, ದಿನ ಬಿಟ್ಟು, ಯೋಗಾನಂದ ಆಸ್ಪತ್ರೆಗೆ ಎಡ್ಮಿಟ್ ಆಗಿ ದಿವ್ಸಾ ಇದ್ದು ಒಂದೆಪ್ಪತ್ತೈದು ಸಾವಿರ ಅವರ ಕೈಗೆ ಹಾಕಿ ಮನೆಗೆ ಬಂದ್ವೀ ಕಾಣಿ. ಡಾಕ್ಟ್ರೂ ಪ್ರಕಾರ ಅದು ಡೆಂಗ್ಯೂನ್ ಅಲ್ಲಾ, ಚಿಕನ್ ಗುನಿಯಾನೂ ಅಲ್ಲಾ, ಅದು ವೈರಲ್ ಅರಿತ್ರಾಯಿಟೀಸ್ ಅಂತ ಹೊಸ ನಾಮಕರಣ ಮಾಡಿದ್ರೇ. ಸರಿ ದಿಸ್ಚಾರ್ಜ್ ಆಗಿ ಮನೆಗೆ ಬಂದವ್ರಿಗ್ ಏನಾದ್ರೂ ಮೇಲೋಗ್ರಾ ಸೇರುತ್ತಾ ಅಂದ್ರೇ ಊಹೂಂ, ಶತಾಯು ಗತಾಯು ಇಲ್ಲಾ. ಅದಕ್ಕಾಗಿ ನಾನು ಕಂಡುಕೊಂಡ ಮದ್ದು ಸೂಪ್ ಅಥವಾ ಸೂಪ್ ಕಮ್ ಜೂಸ್. ತೆಕ್ಕೊಳ್ಳೀ ಇವತ್ತಿನ ಒರೆಗೆ ಒಂದು ೧೫ ಬೀಕರ್ ಸೂಪ್/ಜೂಸ್ ಕುಡ್ದ್ನೇ. ಈಗ ನಾನು ಮತ್ತು ನನ್ನ ಪತ್ನಿ ಕರೆಕ್ಟ್ ಆದ್ವಿ. ಇದಪ್ಪಾ ಸೂಪ್ ಮತ್ತು ಜೂಸಿನ ಕಥೆ.
ಇವತ್ತು ಏನ್ ಮಾಡಿದೆ ಅಂದ್ರೇ, ಬೀಟ್ರೂಟ್ ಮತ್ತು ಟೋಮೇಟೋ ಕತ್ತರಿಸಿ ಹಸಿಯೇ ಮಿಕ್ಸಿಯಲ್ಲಿ ಹಾಕಿ ನೀರನ್ನ ಹಿಂಡಿದೆ ಅಥವಾ ಸೋಸಿದೇ ಅನ್ನಿ. ಬೀಕರಿನಲ್ಲಿ ಮತ್ತೊಂದು ಟೋಮೇಟೋ, ಒಂದು ದೊಡ್ಡ ಕೇಪ್ಸಿಕಮ್, ಅರ್ಧ ಕೇಬೇಜ್, ಒಂದು ಹಸೀ ಜೋಳದ ತೆನೆಯಿಂದ ತೆಗೆದಂತಹ ಜೋಳದ ಕಾಳು, ಒಂದು ಚಿಟಿಕೆ ಲವಂಗದ ಪೌಡರ್, ಒಂದು ಚಿಟಿಕೆ ಚಕ್ಕೇ ಪೌಡರ್ ಮತ್ತು ಅರ್ಧ ಚಮಚ ಉಪ್ಪನ್ನ ಹಾಕಿ ಬೀಕರಿನಲ್ಲಿ ಲೋಟ ನೀರು ಹಾಕಿ ಣ್ಣಬೆಂಕಿಯಲ್ಲಿ ಬೇಯಲು ಇಟ್ಟೆ. ಒಂದು / ಗಂಟೆಯ ಮೇಲೆ ತೆಗೆದು ಅದನ್ನ ಸೋಸಿ ನೀರು ಮತ್ತು ಮೊದಲಿನ ಹಸೀ ನೀರನ್ನ ಮಿಕ್ಸ್ ಮಾಡಿ ಬೀಕರಿನಲ್ಲಿ ತುಂಬಿಸಿ ಇಟ್ಟೆ. ಮುಂದೆ ಪ್ರತೀ ಗಂಟೆಗೊಮ್ಮೆ ಗಂಟಲೊಳಗೆ ಒಂದು ಲೋಟ ಹಾಕುತ್ತಾ ಬರಬೇಕು ಕಾಣಿ.
ಬೇಸಿದಂತಹ ತರಕಾರಿಯನ್ನ ಒಗ್ಗರಿಸಿ, ಕಾಯಿಯನ್ನ ಹಾಕಿದೆ. ಒಗ್ಗರಿಸುವ ಮುಂಚೆ ಒಗ್ಗರಣೆ ಮಾಡಿ, ನೀರುಳ್ಳಿಯನ್ನ ಕತ್ತರಿಸಿ ಅದನ್ನ ಕೆಂಪು ಬರುವ ಹಾಗೆ ಬಾಡಿಸಿ ಎಲ್ಲಾ ಬೇಸಿದ ತರಕಾರಿಯನ್ನ ಹಾಕಿದೇ ಅಂತಿಟ್ಟುಕೊಳ್ಳಿ. ಇದರಲ್ಲೆಲ್ಲಾ ನೀವುಗಳು ಬಹಳ ಎಕ್ಸ್ಪರ್ಟ್. ತೆಕ್ಕೊಳ್ಳಿ ನಮ್ಮ ಇಂದಿನ ತರಕಾರೀ ಮಿಕ್ಸ್ ಪಲ್ಯ ರೆಡಿ.
ಮಿಕ್ಸ್ ಪಲ್ಯವನ್ನಕೇಬೇಜ್, ಈರುಳ್ಳಿ, ಬಸಳೇ ಸೊಪ್ಪನ್ನ ಕತ್ತರಿಸಿ ಹೀರೇಕಾಯಿ ಚಟ್ಟೀ ಮಾಡುವ ಹಿಟ್ಟಿನಲ್ಲಿ ಬೆರಸಿ ಚಟ್ಟಿಯನ್ನ ಮಾಡಿ ಈಗ ತಾನೇ ಹೊಡೆದೆ ಕಾಣಿ. ನಿಮಗೆ ಫೋಟೋ ಕೂಡಾ ಲಗತ್ತಿಸಿದ್ದೇನೆ.
ಬರೆದು ಪ್ರಸ್ತುತ ಪಡಿಸಿದವರು
೨೫/೦೮/೨೦೧೬

೧೪. ಬ್ರೋಕ್ಲೀ, ಸಲಾಡ್ ಸೊಪ್ಪು, ಬೇಬೀ ಕೋರ್ನ್ಗಳ ಸೂಪ್

ನಿಮಗೆಲ್ಲಿಯಾದರೂ ಮಲ ಬಧ್ಧತೆಯ ದೋಷವಿದೆಯೋ? ಹಾಗಿದ್ದರೆ ನಾನು ಹೇಳಿದಂತಹ ಕೆಳಗಿನ ಸೂಪನ್ನ ಒಂದು ವಾರ ಮಾಡಿ ಗಂಟೆಗೊಮ್ಮೆ ಒಂದು ಲೋಟ ಕುಡಿಯುತ್ತಾ ಬನ್ನಿ. ಆಗ ನೀವೇ ಹೇಳುತ್ತೀರ ಅಯ್ಯಬ್ಬಾ ಒಳಗಿನ ಶನಿ ತೊಲಗಿತೂ ಎಂದು.
 ಹೆಚ್ಚಿಗೆ ಫೈಬರ್ಯುಕ್ತವಾದ ತರಕಾರಿಗಳನ್ನ ಉಪಯೋಗಿಸಬೇಕು. ಅಂದರೆ ಮೂಲಂಗಿ, ಕೇರೆಟ್ ಇತ್ಯಾದಿ. ಇದರ ಜೊತೆಯಲ್ಲಿರುವ ಸೊಪ್ಪುಗಳನ್ನ ಹೆಚ್ಚಿಗೆ ಸೇವಿಸಬೇಕು. ಆದರೆ ಇದು 60 ವರುಷದ ಮೇಲೆ ಸಾಧ್ಯವಾಗಲಿಕ್ಕಿಲ್ಲ. ಅದಕ್ಕೆ ಏನನ್ನ ಮಾಡಬೇಕೆಂತೀರಾ?
ನಾನು ಮಾಡಿದಂತಹ ಸೂಪ್ ಅಥವಾ ಜೂಸನ್ನ ಕೊಡಬೇಕು. ಹೇಗೆ.? ಈಗ ತಾನೆ ನಾನೊಂದು ಸೂಪ್ ಮಾಡಿದೆ. ಅದು ಏನಂತೀರಾ?
ಬ್ರೂಕ್ಲಿ, ಸಲಾಡ್ ಸೊಪ್ಪು, ಬೇಬಿ ಕೋರ್ನ್, ಬೇಕೆಂದರೆ ( ಬಸಳೆ ಸೊಪ್ಪು, ಕೊತ್ತುಂಬರೀ ಸೊಪ್ಪು, ಇನ್ನಿತರ ಸೊಪ್ಪು ಕೂಡಾ ಹಾಕಬಹುದು. ನವಿಲ್ ಕೋಸು ಕೂಡಾ ಹಾಕಬಹುದು) ಆದರೆ ನಾನು ಇವತ್ತು ಇದ್ಯಾವುದೂ ಹಾಕಲಿಲ್ಲ. ಇದರ ಜೊತೆಗೆ ಉಪ್ಪು , 3 ಚಿಟಿಕೆ ಕಾಳು ಮೆಣಸಿನ ಪುಡಿ ಹಾಕಿ ಸಣ್ಣ ಬೆಂಕಿಯಲ್ಲಿ ಒಂದರ್ಧ ಗಂಟೆ ಇಡಿ. ಸ್ವಲ್ಪಾ ತಣ್ಣಗಾದ ಮೇಲೆ, ನೀರನ್ನ ಸೋಸಿ, ಉಳಿದಂತಹ ಘನ ಪದಾರ್ಥವನ್ನ ಮಿಕ್ಸಿಯಲ್ಲಿ  ಹಾಕಿ ಅರೆಯಿರಿ. ಇದನ್ನ ಕೊನೆಗೆ ಸೋಸಿದಂತಹ ನೀರಿನೊಂದಿಗೆ ಮಿಕ್ಸ್ ಮಾಡಿ ಗಂಟೆ ಅಥವಾ 2 ಗಂಟೆಗೊಮ್ಮೆ ಕುಡಿಯುತ್ತಾ ಬರಲಿ. ನಿಮ್ಮ ಮಲಬಧ್ಧತೆ ಮಂಗಮಾಯ!😀😀😀

೧೫.  ಹಸಿರು ಏಪಲ್ಲಿನ ಗೊಜ್ಜು

ಇವತ್ತಿನ ಗೊಜ್ಜು ಹಸಿರು ಏಪಲ್ಲಿನದ್ದು. ಮೊದಲಿಗೆ ಏಪಲ್ಲನ್ನ ಕತ್ತರಿಸಿ 2ಚಮಚ ರುಪದಲ್ಲಿ ಹೊರಿಯಿರಿ. ಜೊತೆಗೆ 5 ಒಣ ಮೆಣಸಿನ ಕಾಯಿ, ಕೊತ್ತುಂಬರಿ ಬೀಜ ಅಥವಾ ಪೌಡರ್, ಹಿಂಗ್ ಒಂದು ಸಣ್ಣ ಚಿಟಿಕೆ ಇದೆಲ್ಲವುದನ್ನೂ ಅದರ ಜೊತೆಗೆ ಹಾಕಿಯೇ ಹೊರಿಯಿರಿ. ಆಮೇಲೆ ತುರಿದಂತಹ ಕಾಯಿ ಮತ್ತು 1/2 ತೆಅ ಸ್ಪೂನ್ ಉಪ್ಪಿನೊಂದಿಗೆ ಮಿಕ್ಸಿಯಲ್ಲಿ ಹಾಕಿ ಅರೆಯಿರಿ. ನಿಮ್ಮ ಹುಳಿ ಮತ್ತು ಸಿಹಿ ಏಪ್ಪಲ್ ಗೊಜ್ಜು ತಿಂಡಿಗೂ, ಊಟಕ್ಕೂ ರೆಡಿ

ಬರೆದು ಪ್ರಸ್ತುತ ಪಡಿಸಿದವರು

ಪಿ. ಎಸ್. ಉಪಾಧ್ಯ
೨೭/೦೮/೨೦೧೬



೧೬. ಇದು ಮಂಟಪ ರಾಮಣ್ಣನ ಪಲ್ಯ

ಇದನ್ನ ಹೇಳುತ್ತಿದ್ದರು ನಮ್ಮ ಅಪ್ಪಯ್ಯ. ಹೇಳಿದಂತೆಯೇ ಅಮ್ಮ ಮಾಡುತ್ತಿದ್ದರು ಕೂಡ.
ಇದನ್ನ ಹೇಳಿದವರೂ ಕೂಡ ಮಂಟಪ ರಾಮಣ್ಣ, ನನಗೆ ಅವರು ರಾಮ ದೊಡ್ಡಪ್ಪಯ್ಯ ಆಗಬೇಕೆನ್ನಿ.

ದು ಹೀಗಿತ್ತು ನೋಡಿ. ಉಡುಪೀ ಮಟ್ಟೀ ಗುಳ್ಳ, ಒಂದನ್ನ ತೆಗೆದುಕೊಂಡು ಇದನ್ನ ಸಣ್ಣಕ್ಕಾದರೂ ಕತ್ತರಿಸಬಹುದು ಇಲ್ಲಾ ಉದ್ದಕ್ಕಾದರೂ ಕತ್ತರಿಸಬಹುದು. ನೀವು ,ಮಾಡಬೇಕಾದದ್ದು ಇಸ್ಟೇನೆ. ಒಂದು, ಬಾಣಲೆಯನ್ನಾದರೂ ತೆಗೆದುಕೊಳ್ಳಿ, ಇಲ್ಲಾ ಪಾನನ್ನಾದರೂ ತೆಗೆದುಕೊಳ್ಳಿ.  ಇದನ್ನ, ಒಲೆಯ ಮೇಲಿಟ್ಟು, 3 ಚಿಪ್ಪು ತೆಂಗಿನ ಎಣ್ಣೆಯನ್ನ ಮಾಡಿ. ಒಗ್ಗರಣೆಯನ್ನ ಹಾಕಿ. ಅದಕ್ಕೆ ಕತ್ತರಿಸಿದಂತಹ ಬದನೇ ಕಾಯಿ, ಸೀಳಿದಂತಹ 3 ಹಸೀ ಮೆಣಸಿನ ಕಾಯಿ, ಸ್ವಲ್ಪ ಹುಣಿಸೇ ಹಣ್ಣಿನ ನೀರನ್ನ ಅವುಗಳ ಮೇಲೆ ಚಿಮುಕಿಸಿ. ಇಲ್ಲಿ ನಾನು ಹುಣಿಸೇ ಹಣ್ಣನ್ನ ಸಣ್ಣಕ್ಕೆ ಕತ್ತರಿಸಿದ್ದೇನೆ. ಮೇಲೆ ಅವುಗಳ ಮೇಲೆ ಒಂದೇ ಒಂದು ಚಿಪ್ಪು ಎಣ್ಣೆಯನ್ನ ಹರಡಿ. ರುಚಿಗೆ ತಕ್ಕಂತೆ ಉಪ್ಪನ್ನ ಹಾಕಿ.ಬಾವಡಿಯಿಂದ ಮುಚ್ಚಿರಿ. 10 ನಿಮಿಷದ ಮೇಲೆ ( ಇದು ನಿಮ್ಮ ಬದನೇ ಕಾಯಿಯ ಪ್ರಮಾಣದ ಮೇಲೆ ಅವಲಂಬಿಸಿದೆ) ನಿಮ್ಮ ಬದನೇ ಕಾಯಿ ಸರಿಯಾಗಿ ಬೆಂದಿರುತ್ತದೆ. ಮೇಲೆ ಒಂದು ಚಮಚಾ ಸಾರಿನ ಪೌಡರನ್ನ ಅವುಗಳ ಮೇಲೆ ಹಾಕಿ. ಸ್ವಲ್ಪ ತೆಂಗಿನ ಕಾಯಿಯ ತುರಿಯನ್ನೂ ಸಿಂಪಡಿಸಿ. ಸಟ್ಟುಗದಿಂದ ಮಗುಚಿ.

 ತೆಕ್ಕೊಳ್ಳಿ ಮಹಾರಾಯರೆ ಹತ್ತೇ ನಿಮಿಷದಲ್ಲಿ ನಮ್ಮ ಅಪ್ಪಯ್ಯ ಪ್ರಕಾರ , ಮಂಟಪ ರಾಮಣ್ಣನ ಪಲ್ಯ ತಯ್ಯಾರ್! ತಿನ್ನಲೂ ಬಹಳ ರುಚಿ. ಒಂದು ಬಟ್ಟಲು ಅನ್ನವನ್ನ ಅದು ಗೋರುತ್ತೆ.☺☺☺☺
ನಮ್ಮ ಅಮ್ಮನಿಗೆಲ್ಲಿಯಾದರೂ ದಿವ್ಸಾ ಅಡುಗೆ ಮಾಡಿ ಬೇಜಾರಾಗಿದ್ದರೆ, ನಮ್ಮ ಅಪ್ಪಯ್ಯ ಹೇಳುವುದು ಈ ಪಲ್ಯವನ್ನೇ.

 ಪಲ್ಯವನ್ನ ಮಾಡಿ, ನಿಮ್ಮ ಮುಂದೆ
ಫೋಟೋದೊಂದಿಗೆ ಪ್ರಸ್ತುತ ಪಡಿಸಿದವರು
ಪಾರಂಪಳ್ಳೀ ಸುರೇಂದ್ರ ಉಪಾಧ್ಯ.
೨೯/೦೮/೨೦೧೬






೧೭.ಇವತ್ತಿನ ತಿಂಡಿ , ನವಣೆ, ಸಾಮೆ, ಹಾರಕದ ಮಿಕ್ಸಿನ ದೋಸೆ ಮತ್ತು ಅಂಡ್ ಸುಟ್ಟ ಸೌತೇ ಕಾಯಿ ಹುಳಿ ಇದು ನಮ್ಮ  ಮುದ್ದು ಮಡದಿಗೆ ಪ್ರೀತಿಯ ಕೊಡುಗೆ. ಏನಂತೀರಾ?

ನವಣೆ (2 ಸಣ್ಣ ಲೋಟ), ಸಾಮೆ 1 ಲೋಟ ಹಾಗೂ ಆರ್ಕಾ  1ಲೋಟ ಎಲ್ಲಾಏಕ ದಳ ಧಾನ್ಯಗಳನ್ನ ೨ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. (ಸತ್ಯ ಹೇಳಬೇಕೆಂದರೆ ಬರೇ ಅರ್ಧ ಗಂಟೆಯೂ ಸಾಕು)  ಆ ಮೇಲೆ ಇದನ್ನ ಮಿಕ್ಸಿಯಲ್ಲಿ ನೀರಿನ ರೂಪದಲ್ಲಿ ಅರೆಯಿರಿ. ಆ ಮೇಲೆ ದೋಸೆಯ ಪಾನಿನಲ್ಲಿ ದೋಸೆಯಂತೆ ತೆಳ್ಳಗೆ ಹರಡಿ. ಒಂದು ಚಮಚ ತುಪ್ಪವನ್ನ ಹಿಟ್ಟನ್ನ ಹರಡುವ ಮೊದಲೇ ಹಂಚಿಗೆ ಹಚ್ಚಬಹುದು. ಇಲ್ಲಾ ಆಮೇಲೆಯೂ ದೋಸೆಯ ಮೇಲೆ ಹಾಕಬಹುದು. ವ್ಹಾರೆ ವಾಹ್, ಎಂಥಾ ರುಚಿ ಅಂತೀರಾ? ಇದನ್ನ ಧಿಡೀರ್ ದೋಸೆ ಅಂತಲೂ ನೀವು ನಾಮಕರಣ ಮಾಡಬಹುದು.

೧೮. ಅಂಡ್ ಸುಟ್ಟ್ ಸೌತೇ ಕಾಯಿ ಹುಳಿಯನ್ನ ಮಾಡುವ ವಿಧಾನ

ಸೊತೇ ಕಾಯಿಯನ್ನ ಚೆನ್ನಾಗಿ, ಕಾವೇರಿ ನೀರಿನಲ್ಲಿ ತೊಳೆದು, ಕೃಷ್ಣ ಮಠದಲ್ಲಿ ನಡೆಯುತ್ತಿರುವ ಪರ್ಯಾಯದಲ್ಲಿ ಊಟಕ್ಕೆ ಕೃಷ್ಣ ಭಟ್ಟರು ಕತ್ತರಿಸಿದ ಹಾಗೆ ದೊಡ್ಡ ಹೋಳನ್ನ ಸಿಪ್ಪೇ ಸಮೇತವಾಗಿ ಕತ್ತರಿಸಿ ಇದನ್ನ ಒಂದು ಚಪ್ಪಟೆಯಾದ ಬಾಣಲೆಯಲ್ಲಿ ಅಥವಾ ಪಾನಿನಲ್ಲಿ ಸಣ್ಣ ಬೆಂಕಿಯಲ್ಲಿ ಸುಡಲು ಬಿಡಿ. ಸುಡುವ ಮೊದಲು ಖಾಂಡವನ್ನ ಚೂರಿಯಲ್ಲಿ ಉತ್ತರ-ದಕ್ಷಿಣಕ್ಕೆ ಹಾಗೂ ಪೂರ್ವ-ಪಸ್ಚಿಮಕ್ಕೆ ೨ ಗೀಟನ್ನ ಹಾಕಿ, ಅರ್ಥಾತ್ ಚೂರಿಯಲ್ಲಿ ಸೀಳಿ. ಸಿಪ್ಪೆ ಹರಿಯದಿರಿ. ಜೋಕೆ.ಇದನ್ನ ಒಂದು ಬಾವಡಿಯಲ್ಲಿ ಮುಚ್ಚಲು ಮಾತ್ರ ಮರೆಯದಿರಿ.
ಈಗ ಅದಕ್ಕೆ ಮಸಾಲೆಯನ್ನ ಅರೆಯೋಣವೇ?
ಉದ್ದಿನ ಬೇಳೆ ಒಂದು ದೊಡ್ಡ ಚಮಚ, ಒಂದು ದೊಡ್ಡ ಚಮಚ ಬಿಳೀ ಎಳ್ಳು,ಒಂದು ಚಮಚ ಕಡ್ಲೇ ಬೇಳೆ, ಹಿಂಗ್, ಸ್ವಲ್ಪ ಹುಣಿಸೇ ಹಣ್ಣು, 8 ಬ್ಯಾಗಡೀ ಮೆಣಸಿನ ಕಾಯಿ, ಸ್ವಲ್ಪ ಉಪ್ಪು, ಮತ್ತು ತುರಿದಂತಹ ಒಂದು ಕಡಿ ತೆಂಗಿನ ಕಾಯಿ ಎಲ್ಲಾ ಮಿಕ್ಸಿಯಲ್ಲಿ ಸಣ್ಣಗೆ ಅರೆಯಿರಿ. ಅರೆದಂತಹ ಮಸಾಲೆಯನ್ನ ಅಂಡು ಸುಡುತ್ತಿರುವಂತಹ ಪಾನ್ ಅಥವಾ ಬಾಣಲೆಗೆ ಹಾಕಿ, 3 ಲೋಟ ನೀರನ್ನ ಹಾಕಿ ಕುದಿಸಿ. ನಿಮಗೆಲ್ಲಯಾದರೂ ಸಿಹಿ ಬೇಕೆಂದಲ್ಲಿ ಒಂದು ಸಣ್ಣ ಉಂಡೆ ಬೆಲ್ಲವನ್ನ ಹಾಕಿ
ನಿಮ್ಮ ಅಂಡ್ ಸುಟ್ಟ ಸೌತೇ ಕಾಯಿ ಹುಳಿ ತಿನ್ನಲು ರೆಡಿ ಆಯುತು ನೋಡಿ ಈಗ.

ಬೇಕೆಂದರೆ ದನಿಯ(ಕೊತ್ತುಂಬರಿ)  ಪೌಡರನ್ನ ಅರೆಯಲು ಹಾಕಿ. ಆದರೆ, ಅದರ ಅಗತ್ಯತೆ ಬೇಕೆಂತಿಲ್ಲ.ಆಹಾ ಇದನ್ನ ತಿಂದರೆ ಸ್ವರ್ಗಕ್ಕೆ ಬರೇ ಮೂರೇ ಮೂರು ಗೇಣು ನೋಡಿ.
ಪಾರಂಪಳ್ಳೀ ಸುರೇಂದ್ರ ಉಪಾಧ್ಯ
೩೧/೦೮/೨೦೧೬                                                         



೧೯. ನವಣೆ, ಅರ್ಕಾ ಮತ್ತು ಸಾಮೆಯ ಊತಪ್ಪ ಅಥವಾ ಚಟ್ಟಿ

ಇವತ್ತಿನ ತಿಂಡಿ , ಅಂದರೆ ದುರ್ಮುಖಿ ನಾಮ ಸಂವತ್ಸರದ ಭಾದ್ರಪದ ಮಾಸದ ಕೃಷ್ಣ ಪಕ್ಷದ ದ್ವಿತೀಯಾಂಧಿತೌ,ಭಾನಿವಾರದಂದು ನಮ್ಮ ಮುದ್ದು ಮಡದಿಗೆ ಪ್ರೀತಿಯ ಕೊಡುಗೆ. ಏನಂತೀರಾ?
ನವಣೆ, (1 ಸಣ್ಣ ಲೋಟ), ಸಾಮೆ, 1 1/2 ಲೋಟ ಹಾಗೂ ಆರ್ಕಾ 11/2 ಲೋಟ ಎಲ್ಲಾ ಒಟ್ಟಿಗೆ ಬೆಳಿಗ್ಗೆ 4.00 ಗಂಟೆಗೆ. ನೀರಿನಲ್ಲಿಯೇ ನೆನಸಿ, ಮೇಲೆ 1 ಗಂಟೆಯ ಮೇಲೆ ಎಲ್ಲಾ ನೀರನ್ನ ಸೋಸಿ, ಮಿಕ್ಸಿಗೆ ಹಾಕಿ, 5 ಹಸೀ ಮೆಣಸಿನ ಕಾಯಿ, ಒಂದು ಚೂರು ಶುಂಠಿ, ಹಾಗೂ ಕೊತ್ತುಂಬರೀ ಸೊಪ್ಪಿನ ಜೊತೆಯಲ್ಲಿ ಅರೆದು ಮಾಡಿದ ಹಿಟ್ಟನ್ನ ಹಂಚಿನ ಮೇಲೆ 1 ಚಮಚ ತುಪ್ಪವನ್ನ ಹರಡಿದ ಮೇಲೆ ಹಾಕಿದಂತಹ ಹಿಟ್ಟಿನ ಮೇಲೆ ಸಣ್ಣಗೆ ಕೊಯಿದು ಹಾಕಿದಂತಹ ಈರುಳ್ಳಿಯ ಚಟ್ಟಿಯೋ ಅಥವಾ ಊತಪ್ಪನೋ ಅಥವಾ ಚಟ್ಟಿಯೋ ತೈಯ್ಯಾರ್ ಆಯಿತು ತಿನ್ನಲು ನೋಡಿ.
ಆದರ ಜೊತೆಯಲ್ಲಿ ಗುಂಬಳ ಕಾಯಿ, ದೊಂಡೇ ಮೆಣಸಿನ ಕಾಯಿ, ನವಿಲ್  ಕೋಸು ಹಾಗೂ ಕೊತ್ತುಂಬರೀ ಸೊಪ್ಪು ಮತ್ತು 4 ಹಸೀ ಮೆಣಸಿನ ಕಾಯಿಯನ್ನು ಮೊದಲೇ ಮಿಕ್ಸಿಗೆ ಹಾಕಿ ನಜ್ಜು ಗುಜ್ಜು ಅರೆದು ಮೇಲೆ ಗಾಜಿನ ಬೀಕರ್ನಲ್ಲಿ ಹಾಕಿ 2 ಲೋಟ ನೀರನ್ನು ಮತ್ತು ಉಪ್ಪನ್ನ ಹಾಕಿ ಕುದಿಸಿ ಸೋಸಿದಂತಹ ಹೈಜೀನಿಕ್ ಸೂಪ್.

ಹೇಗಿದೆ ಸಂಡೆಯ ಆವಾಂತರನಮ್ಮ ಹೆಂಡತಿಗೇನಾದರೂ ಜೀವನದಲ್ಲಿ ದುಃಖವಿದೆಯೋ? ಅವಳನ್ನೇ ಕೇಳಿ
ಪಾರಂಪಳ್ಳೀ ಸುರೇಂದ್ರ ಉಪಾಧ್ಯ
೦೧/೧೦/೨೦೧೬

೨೦. ಹೀರೇಕಾಯಿ ಚಟ್ಟಿ

This special item is called "Heerekayi chatti" prepared from Ridge Guard. What you have to do is bring fresh ridge guards (2 sufficient) for a family of four members and remove the husk from that with the help of a peeler.Then cut them into round pieces and put it in the "Hittu" in Kannada or atta prepared from rice, chana dal, tamrind, dry mirchi, hing, red chilly powder and if required green chillies. Then put a Pan on the gas stove and put two or three spoons of oil ( here I mixed Coconut oil and refined oil) and after slight heating the pan, put them as I have shown in the photos. Cover the same by a vessel so that it should be cooked to the brown coloured one which I show in the photo also. Then turn it on other side and keep it for five minutes. Now it is ready for eating.
This is our today's Breakfast.








21. CHATNEY FROM THE HUSK OF RIDGE GUARD
The husk I had taken out is to be used to prepare a chutney by boiling them with tamrind,hing, green mirchi, coriander powder or coriander seeds. Once it is boiled fully well, grind it in a mixi with grated cocunut with salt for the taste. Fantastic chatney is ready for taste.



22. LOTA KADUBU ( ANOTHER LONG FORM OF IDLY)

This is today's breakfast just now I have kept on the gas stove to be baked or cooked. You can see the technique I used is bring some Jack fruit leaves and wash it well in water and dry it with the help of a cloth. Then take four leaves and keep in steel or a copper or aluminium tumbler. Then pour the idly atta prepared by grinding soaked ulad dal for min Six hours over night and grind well to a semi thick paste in the morning. Then double quantity of idli rava soaked in water for half an hour you take it. Squeeze it and remove the water and mix it with the grinded ulad dal paste. Add  3/4th tea spoon of salt and mix well and pour the paste in your ready tumbler. Keep the same either in a cooker or the vessel which I have shown above. Bake it for half an hour and then open it and see whether it is fully baked? All steps I have taken photos for your reference.
Our Bengaly friends, Jack fruit leaves are available at your place plenty. Use it and remember my name for ever or at the time of eating idli ka bada bhai!😎😎😎



23.ಇವತ್ತಿನ ಜೂಸ್ ಕಾಮಾಕ್ಯ ತರಕಾರೀ ಸೂಪ್

ಬೇಕೇ ಎಸ್ಟು ಹೇಳಿ?
ಕೇವಲ ₹500.00 ಒಂದು ಜಾರಕ್ಕೆ.
ಬೇಕಾಗುವ ಸಾಮುಗ್ರಿಗಳು:-

2 ಸಣ್ಣ ದೊಂಡೇ ಮೆಣಸು,ಸೋರೇ ಕಾಯಿ,
1/4 ಕೇಜಿ ಕೇಬೇಜ್, 1/4 ಕೇಜಿ ಹುರುಳೀ ಕೋಡು, ಸಣ್ಣಕ್ಕೆ ಕೊಚ್ಚಿರುವ ಶುಂಠಿ, ಇದ್ದರೆ, 4 ತುಳ್ಸೀ ದಳ, 4 ಹಣ್ಣಗಿರುವ ಟೊಮೇಟೋ,
ಎಲ್ಲವನ್ನೂ  ಚಿತ್ರದಲ್ಲಿ ತೋರಿಸುವ ಗ್ಲಾಸ್ ಜಾರಿನಲ್ಲಿ ಹಾಕಿ ಅದಕ್ಕೆ 6 ಗ್ಲಾಸ್ ತಣ್ಣೀರನ್ನ ಹಾಕಿ ಸಣ್ಣಗಿನ ಬೆಂಕಿಯಲ್ಲಿ ಒಂದರ್ಧ ಗಂಟೆಯ ವರೆಗೆ ಇಟ್ಟಿರಿ. ಇದು ಪ್ರಧಾನ ಭಾಗ.
ಎರಡನೇ ಭಾಗದಲ್ಲಿ, ಒಂದು ಅರ್ಧ ದಾಳಿಂಬ್ರೇ ಹಣ್ಣಿನ ಬೀಜವನ್ನ ಕಡಗೋಲಿನಿಂದ ಆದರ ಕುಂಡಿಯ ಮೇಲೆ ಕುಟ್ಟೀ ಕುಟ್ಟೀ ಬೀಜ ಮಾತ್ರ ತೆಗೆಯಿರಿ. ಒಂದು ಏಪಲ್ಲನ್ನ ತೆಗೆದುಕೊಂಡು ಕತ್ತರಿಸಿ ಮಿಕ್ಸಿಯಲ್ಲಿ ಹಾಕಿ. ಆದರ ಜೊತೆಯಲ್ಲಿ 2 ಕಿವಿ ಹಣ್ಣನ್ನ ಸಿಪ್ಪೇ ತೆಗೆದು ಹಾಕಿ. ಅದಕ್ಕೆ ಒಂದು ಚೇಪೇ ಹಣ್ಣನ್ನೂ ಹಾಕಿ. ಮಿಕ್ಸಿಯಲ್ಲಿ ಹಾಕಿ ಎಲ್ಲಾ ಒಟ್ಟಿಗೆ ಮಿಶ್ರಣವನ್ನ ಮಾಡಿದ್ದು ಬರೇ ಜೂಸಿನ ಭಾಗವನ್ನ ಒಂದು ಪಾತ್ರೆಗೆ ಸೋಸಿ.
ಇದೇ ಮಿಶ್ರಣಕ್ಕೆ, ಬೆಂದಂತಹ ತರಕಾರಿಗಳನ್ನೂ ಮಿಕ್ಸಿಯಲ್ಲಿ ಮಿಶ್ರಣ ಮಾಡಿದ್ದು, ಎರಡನ್ನೂ ಒಟ್ತಿಗೆ ಸೇರಿಸಿದ್ದು, ಮಿಶ್ರಣಕ್ಕೆ ಸಣ್ಣ ಚಿಟಿಕೆ ಕಾಳು ಮೆಣಸಿನ ಪೌಡರ್, ಒಂದು ಕಾಲು ಚಿಟಿಕೆ ಪಲಾವ್ ಏಲೆಯ ಪೌಡರ್ ಹಾಗೂ ರುಚಿಗೆ ತಕ್ಕಂತೆ ಉಪ್ಪನ್ನ ಹಾಕಿ ಸವಿದು ನೋಡಿ!☺☺☺☺
ನೀವೆಲ್ಲಾ ಮನೆಯವರೆಲ್ಲಾ ಸೇರಿ ಯಾನಾರ ತೊಟ್ಟಂಬಿ ಗುರಿಖಾರ ಪೋಂಕೇ ಅಂತ ಸುತ್ತ ಮನೆಯಲ್ಲಿ ಕುಣಿಯದೇ ಹೋದರೆ ನಾನು ಪಾರಂಪಳ್ಳಿ ಸುರೇಂದ್ರ ಉಪಾಧ್ಯನೇ ಅಲ್ಲಾ ಅಂತ ತಿಳಿಯಿರಿ.
ಇನ್ನು ಇದನ್ನ ಕುಡಿದಲ್ಲಿ ನೀವು ಆನ್ನ, ತರಕಾರಿ ಎಲ್ಲಾ ಊಟವನ್ನ ಮಾಡುವ ಅಗತ್ಯವೇ ಅಲ್ಲಾ. ಇಲ್ಲಿ ಖರ್ಚಾದಂತಹ 500.00 ರೂಪಾಯಿಯನ್ನ ಉಳಿಸಬಹುದು. ಹೇಗಿದೆ ನನ್ನ ಉಳಿತಾಯದ ಯೋಜನೆ? ಆದರೆ ಹಣವನ್ನ ದೇನಾ ಬೇಂಕಿನಲ್ಲಿ ಠೇವಣಿಯನ್ನ ಇಡಲು ಮಾತ್ರ ಮರೆಯದಿರಿ.

೨೪. ಗೌರಿ ಹಬ್ಬದಂದು ಬರೇ ತರಕಾರಿಯ ಸೂಪ್.

ಇದರಲ್ಲಿ ಬಸಳೆ ಸೊಪ್ಪು,ಈರುಳ್ಳಿ ಸೊಪ್ಪು, ಪುದಿನಾ ಸೊಪ್ಪು,ಶುಂಠಿ, ಟೊಮೇಟೊ, ಹೀರೇ ಕಾಯಿ, ದೊಂಡೆ ಮೆಣಸು, ಒಂದು ಚಿಟಿಕೆ ಒಣಮೆಣಸಿನ ಪೌಡರ್, ಒಂದು ಚಿಟಿಕೆ ಪಲಾವ್ ಏಲೆಯ ಪೌಡರ್ಹಾಗೂ ಒಂದು ದಾಳಿಂಬ್ರೆ ಹಣ್ಣನ್ನ ಹಾಕಿ ಇವುಗಳನ್ನೆಲ್ಲಾ ಮಿಕ್ಸಿಯಲ್ಲಿ ಹಾಕಿ ಅರೆದು ಆದರ ಎಕ್ಸ್ಟ್ರಾಕ್ಟನ್ನ ಒಂದು ಗ್ಲಾಸ್ ಜಾರಿನಲ್ಲಿ ಹಾಕಿ ದಿನವಿಡೀ ಕುಡಿಯಿರಿ. ನಿಮಗೆ ಗೌರಿ ಇಡೀ ವರ್ಷ ತಾಕತ್ತನ್ನ ಕೊಡುವುದರಲ್ಲಿ ಸಂದೇಹವೇ ಅಲ್ಲಾ.
Final part of vej. Soup in liquid form and other one is wastage.You may use both also. But here I am using only liquid portion for drinking and using waste for making fertilisers. ಈ ಘನ ಪದಾರ್ಥವನ್ನ ಗೋದಿ ಅಥವಾ ರಾಗಿ ಹಿಟ್ಟಿಗೆ ಮಿಕ್ಸ್ ಮಾಡಿ, ರೋಟಿ ಅಥವಾ ಪರೋಟವನ್ನೂ ತೈಯ್ಯಾರ್ ಮಾಡಬಹುದು.

೨೫. ಕುಸುಬಲಕ್ಕಿ ಅಥವಾ ಕೊಚ್ಚಿಗೆ ಅಕ್ಕಿ ಅಥವಾ ಕೊಚ್ಚಿಲಕ್ಕಿಉಂಡೆ.

ಹೋಯ್ ನಿಮಗೆಲ್ಲಾ ಕೊಚ್ಚಕ್ಕಿ ಉಂಡೆ, ಬರೇ ಬಾಣಲೆಯಲ್ಲಿಯೇ ಮಾಡಲಿಕ್ಕೆ ಈಗ ತಾನೆ ಮೂರು ಸಣ್ಣ ಲೋಟ ಕೊಚ್ಚಕ್ಕಿ ನೆನಸಿ ನಾನೀಗ ಕಾಫಿ ಮಾಡಿ 8 ಬಾದಾಮಿಯನ್ನ ತಿನ್ನುತ್ತಾ ಇದ್ದೆ. ನಾಳೆ ಬೆಳಿಗ್ಗೆಯೇ ನಿಮಗೆಲ್ಲಾ ಉಂಟು ಕೊಚ್ಚಕ್ಕಿ ಉಂಡ್ಲಕ್.
ಮಾಡೂದ್ ಬಹಳ ಸಿಂಪಲ್. ಈಗ ನೆನಸಿದಂತಹ ಅಕ್ಕಿಯನ್ನ ಬೆಳಿಗ್ಗೆ 8 ಗಂಟೆಗೆ ಕಾಯಿ ಹಾಕಿ ಮಿಕ್ಸಿಯಲ್ಲಿ ಸ್ವಲ್ಪ ಝರಿ ಝರಿಯಾಗಿ  ರುಬ್ಬಿರಿ. ಅದಕ್ಕೆ ಸಣ್ಣಗೆ ಕತ್ತರಿಸಿದಂತಹ ಹಸೀ ಮೆಣಸು, ಶುಂಠಿ, ಕರ್ವೇರು ಸೊಪ್ಪು, ಬೇಕಿದ್ದರೆ ಸ್ವಲ್ಪ ಕೊತ್ತುಂಬ್ರಿ ಸೊಪ್ಪು ಹಾಕಿ  ರುಚಿಗೆ ತಕ್ಕಂತೆ ಉಪ್ಪನ್ನ ಹಾಕಿ ಸಣ್ಣ, ಸಣ್ಣಕ್ಕೆ ಕೈಯಲ್ಲಿಯೇ  ಉಂಡೆ ಮಾಡಿ ಬಿಸಿಯಾದಂತಹ, ಬಾಣಲೆಗೆ ನಾಲ್ಕೈದು ಚಿಪ್ಪು ತೆಂಗಿನ ಎಣ್ಣೇ ಹಾಕಿಸಣ್ಣ. ಬೆಂಕಿಯಲ್ಲಿ ಹಾಗೆಯೇ ಒಂದರ್ಧ ಗಂಟೆ ಬಿಡಿರಿ. ಮಧ್ಯ, ಮಧ್ಯ ಬಂದು ಸಟ್ಕದಲ್ಲಿ ಮೌಚಿ ಉಂಡೆಯೆಲ್ಲಾ ಕೆಂಪಗೆ ಗರಿ, ಗರಿಯಾಗಿ ಬರಬೇಕುಆಮೇಲೆ, ಈ ಉಂಡೆಗಳ ಜೊತೆಯಲ್ಲಿ, ಬಿಸೀ  ಡೆಕಾಕ್ಷನ್  ಕಾಫಿಯನ್ನ ಜೊತೆಯಲ್ಲಿ ಕುಡಿದು ನೋಡಿರಿ. ಒಬ್ಬೊಬ್ಬ್ರು  ಕಡಿಮೆಯೆಂದರೆ ಇಪ್ಪತ್ತು ಉಂಡ್ಲಕ್ ಹೊಡಿದೇ ಇದ್ದೆ, ನಾನ್ ಸದೀ ಮಾಸ್ಟ್ರು ಮಗನೇ ಅಲ್ಲಾ ಅಂತ ತಿಳ್ಕೊಂತ್ನೆ. ಹ್ವೋಯ್ ಈಗ ರಾತ್ರಿ ಗಂಟೆ ಒಂದೂ ಐವತ್ತು ಆಯ್ತೇ. ಸಾಕೀಗ. ಬೆಳಿಗ್ಗೆ ನಿಮ್ಗೆಲ್ಲಾ ಆದರ್ ಪೋಟೋ ಸಾಕ್ಸಿಗಾಗಿ ಹಾಕ್ತೇ, ಅಡ್ಡಿಲ್ಯಾ?☺☺☺ನೀವ್ ಈಗ ಅಕ್ಕು ಅಂದ್ರೆ ಇಲ್ಲಿಗೇ ಬಿಟ್ಟು ಇನ್ನೊಂದು ಸಣ್ಣ ನಿದ್ದೇ ಮಾಡ್ತ್ನೆ. ಎಲ್ಲರಿಗೂ ನಮಸ್ಕಾರ.
This item is prepared from boiled rice soaked for at least 6 hours. Then you know all the ingredients as per your taste you put wile grinding the mix. Add salt, 2 teaspoons rice powder to make it round balls, and then put 2 tea spoons of coconut oil in tabs and put all the made balls into it and in slow flame cook it well for half an hour. You can eat with pickle or coconut chutney or tour dal chutney also. Taste it. Definitely you like the work of 90 percent retiree persons irrespective of GMs, Dy.G. Ms, IAS Officers or any staff, clerks or for that matter any business man. The reason being there will be no body to cook and everybody's house is becoming a mini special ward with attached bath room!😊😊😊3
ಬರೆದವರು
ಪಾರಂಪಳ್ಳಿ ಸುರೇಂದ್ರ ಉಪಾಧ್ಯ



೨೬. ಸ್ವರ್ಗಕ್ಕೆ ಕೊಂಡೊಯ್ಯುವಂತಹ ಮೊಸರನ್ನವೈಯ್ಯಾ

ಇದು ಸ್ವರ್ಗಕ್ಕೆ ಕೊಡೊಯ್ಯುವಂತಹ ಮೊಸರನ್ನವಯ್ಯಾ. ಹೋಯ್ ಬೆಳಿಗ್ಗೆ ಬೆಳಿಗ್ಗೆ ಪಾರಂಪಳ್ಳೀ ಸುರೇಂದ್ರ ಉಪಾಧ್ಯರಿಗೆ ಮಂಡೆ ಸರಿ ಇಲ್ವೋ ಅಂತ ನೀವೆಲ್ಲಾ ನಮ್ಮನ್ನ ,ಇಲ್ಲಾ ಕ್ವಾಟದ ಅಡುಗೆ ವಾಟ್ಸ್ಯಾಪ್ ಕಲಂನ್ನ ಸ್ಥಾಪನೆ ಮಾಡಿದಂತಹ  ಶ್ರೀಮಾನ್  ನಟರಾಜ ಉಪಾಧ್ಯರಿಗೂ ಸ್ಚಲ್ಪ ಖಾರದ ಮಾತನ್ನ ಹೇಳುತ್ತೀರಾ ಅಂತ,  ಅಲ್ಲಾ, ಹೇಳಬಹುದೂ ಅಂತ ಮನದಲ್ಲೊಂದು ಸಣ್ಣ ಸಂಷಯ ಷ್ಟೆ. ಇರಲಿ , ಈಗ ವಿಷಯಕ್ಕೆ ಬರೋಣ.
ಬೆಳಿಗ್ಗೆ ಬೆಳಿಗ್ಗೆ ತಿಂಡಿಗೆ ಮೊಸರನ್ನ ಮಾಡಿದ್ನೆ. ಆದರೆ ಇದನ್ನ ತಿಂದ ಮೇಲೆ ಗೊತ್ತಾಯ್ತು ನನಗೆ ಸಣ್ಣ ಪ್ರಾಯದಲ್ಲಿ ಮೊಸರನ್ನವನ್ನೇ ಯಾಕೆ ತಿನ್ನಿಸುತ್ತಿದ್ರೂ ಅಂತ!☺☺ನೀವುಗಳು ಮಾಡಬೇಕಾದದ್ದು ಇಸ್ಟೆ. ತಿಂಗಾಳು ತಿಂದ  ಅನ್ನ, ತಂಗಳನ್ನ ಅಂತ ನಿಮ್ಮನೆಯಲ್ಲಿ ಇದ್ದರೆ ಬಹಳ ಒಳ್ಳೆಯದು . ಇದನ್ನ ಒಂದು ಸಣ್ಣ ಪಾತ್ರೆಗೆ ಹಾಕಿ, ಅರ್ಧ ಲೀಟರ್ ಮೊಸರು ಹಾಕಿ. ಅದಕ್ಕೆ ಒಂದರ್ಧ ದಾಳಿಂಬರೆ ಹಣ್ಣನ್ನ ಕಡಗೋಲಿನಲ್ಲಿ ಕುಟ್ಟಿ , ಕುಟ್ಟೀ ಬರೇ ದಾಳಿಂಬರ ಹಣ್ಣನ್ನೇ ಹಾಕಿ.ಒಂದು ಚಿಟಿಕೆ ಹಿಂಗನ್ನ ಹಾಕಿ. ಒಂದು ಬಾಣಲೆಯನ್ನ ಒಲೆಯಲ್ಲಿ ಮೇಲಿಟ್ಟು ಅದನ್ನ ಗ್ಯಾಸಿನಲ್ಲಿ ಉರಿಯುವಂತಹ ಬೆಂಕಿಯಲ್ಲಿ ಕಾಸಿ, ಅದಕ್ಕೆ 2 ಚಮಚ ತುಪ್ಪವನ್ನ ಹಾಕಿ. ಬೇಕಿದ್ದರೆ 1 ಚಮಚ ತೆಂಗಿನ ಎಣ್ಣೆಯನ್ನೂ ಹಾಕಿ . ಇದಕ್ಕೆ ಸ್ಚಲ್ಪ್ಸ್ ಕರ್ವೇರು ಸೊಪ್ಪನ್ನ ಹರಿದು ಹರಿದು ಹಾಕಿ. ಹಾಗೆ ಹರಿಯುವಾಗ, ಹರಿ ನಾರಾಯಣ ಹರಿ ನಾರಾಯಣ ಅಂತ ದೇವರ ನಾಮ ಸ್ಮರಣೆಯನ್ನೂ ಹೇಳಿ. ಪುಣ್ಯ ಸಿಗುತ್ತೆ ಹಾಗೂ ಮಾಡಿದಂತಹ ಮೊಸರನ್ನವು ಬಹಳ ರುಚಿಕರವೂ ಆಗುತ್ತೆ. ಇದು ಟ್ರೇಡ್ ಸೀಕ್ರೆಟ್ಇದಕ್ಕೆ ಸಾಸಿವೆ, ಕುಟುಂ ಕುಟುಂ ಅನ್ನಲು   ಸ್ವಲ್ಪ ಉದ್ದಿನ ಬೇಳೆ ಹಾಗೂ ಕಡಲೆ ಬೇಳೆಯನ್ನೂ ಹಾಕಿ. ಒಂದು ಒಣಾ ಮೆಣಸಿನ ಕಾಯಿಯನ್ನ ಚೂರು ಚೂರು ಮಾಡಿ ಹಾಕಿ. ಇದಕ್ಕೆ ಸಣ್ಣದಾಗಿ ತುಂಡರಿಸಿದಂತಹ ಕೇಬೇಜ್, ದೊಂಡೇ ಮೆಣಸಿನ ಕಾಯಿ, ನೀರುಳ್ಳಿ  ಹಾಗೂ ಶುಂಠಿಯನ್ನ ಹಾಕಿ ಸ್ವಲ್ಪ ಸಟ್ಟುಕದಿಂದ ಆಚೆ ಈಚೆ ಮಾಡಿ. ಗೊತ್ತಲ್ಲಾ. ಹಾಗೆ ಮಾಡುವಾಗ ರಾ್ಮಾ ರಾಮಾ ಅನ್ನಿ. ಇದನ್ನ ನೀವು ಮಾಡಿಟ್ಟಂತಹ ಮೊಸರನ್ನವು ಮೊಸರನ್ನದ   ಮಿಶ್ರಣಕ್ಕೆ ಹಾಕಿ ಮೇಲೆ ಕೆಳಗೆ ಮಾಡಿ. ಮೇಲೆ ಬೆಳ್ಳೀ ತಟ್ಟೆಯಲ್ಲಿ ಹಾಕಿ ತಿಂದು ನೋಡಿ. ನೀವೇ ನನಗೆ ಹೇಳ್ತೀರಾ, ಹೋಯ್ ಉಪಾಯ್ದ್ರೇ ಸತ್ತಿಕೂ ಹೌದೆ. ಮೊಸರನ್ನವನ್ನ  ತಿಂದರೆ ಬೇರೆ ಸ್ವರ್ಗ ಸುಖವೇ ಇಲ್ಲಾ ಮಹಾರಾಯರೇ😊😊😊😊 ಇದು ನಮ್ಮನ್ನ ಸ್ವರ್ಗಕ್ಕೇ ಕೊಂಡೊಯ್ಯುವ ಮೊಸರನ್ನವೈಯ್ಯಾ. ಇದನ್ನ ಮಾತ್ರ ಅಸಡ್ದೆ ಮಾಡದಿರು ನನ್ನಾ ಮಂಕು ತಿಮ್ಮಾ. ಈನ್ನು ಬೆಳ್ಳೀ ತಟ್ಟೆಯಲ್ಲಿಯೇ ಯಾಕೇ ಅಂತೀರಾ? ಎಸ್ಟೊಂದು ಜನರಿಗೆ ಬೆಳ್ಳೀ ಪಾತ್ರೆಯನ್ನ ಬರೇ ದುಡ್ಡು ಕೊಟ್ಟು ಬೇಂಕಿನ ಲಾಕರಿನಲ್ಲಿಡುವುದೊಂದೇ ಗೊತ್ತೇ ವಿನಹ, ಅದರ ಪ್ರಾಮುಖ್ಯತೆ ಗೊತ್ತಿಲ್ಲ. ಬೆಳ್ಳಿ ಎನ್ನುವುದು ಶುಕ್ರನಿಗೆ ಹೇಳೆಸಿದಂತಹ ಲೋಹ. ಅದರಲ್ಲಿ ತಿಂದರೆ ನಿಮಗೆ ಸಿಗುವಂತಹ ಆನಂದ, ಉತ್ಸಾಹ ಹಾಗೂ ನಿಮ್ಮಲ್ಲಿರುವ ಧನ, ಕನಕ  ಇನ್ನಸ್ಟು ಹೆಚ್ಚುತ್ತೆ ಅಂತ ಗೊತ್ತೇ ಇಲ್ಲ ಬಿಡಿ. ಆದರೆ. ಇದನ್ನ ಮಾತ್ರ ಬೇರವರ ಎದಿರಿನಲ್ಲಿ ತಿನ್ನಲಿಕ್ಕೆ ಹೋಗಬೇಡಿ. ಕಾರಣ ಎಲ್ಲರ ದೃಸ್ಟಿಯೂ ಒಂದೇ ರೀತಿ ಇರೋದಿಲ್ಲ. ಒಂದು ವೇಳೆ ಅವರ ಕೆಟ್ಟ ದೃಸ್ಟಿ ಏನಾದರೂ ನಿಮ್ಮ ಮೇಲೆ ಬಿತ್ತೆಂದರೆ, ನಿಮ್ಮಲ್ಲಿರುವ ಬೆಳ್ಳಿ ಹೋಗಿ ಕಬ್ಬಿಣ ಬಂದೀತು! ಜೋಕೆ. ಆವಾಗ ನನ್ನನ್ನ ಮಾತ್ರ ಹಳಿಯಬೇಡಿ. ಇದಕ್ಕೂ ನಿಮ್ಮ ನಿಮ್ಮ ಜಾತಕದಲ್ಲಿರುವ ಫಲಾಫಲಗಳನ್ನ ನೋಡಿಯೇ ನೀವು ನಿರ್ಧಾರವನ್ನ ತೆಗೆದುಕೊಳ್ಳಬೇಕು. ಪಧ್ಧತಿಯು ಅಯ್ಯಂಗಾರರಲ್ಲಿ ಈವಾಗಲೂ ಇದೆ.

ಬರೆದವರು

ಪಾರಂಪಳ್ಳಿ ಸುರೇಂದ್ರ ಉಪಾಧ್ಯ





1 comment: