Friday, 9 December 2016

ಪಾಸುಕಿಚನ್-ಭಾಗ ೨

ಪಾಸುಕಿಚನ್- ಭಾಗ-೨


















(೧) ನವಣೆ ಹಿಟ್ಟು (೨ ಲೋಟ), ಗೋಧಿ ಹಿಟ್ಟು (೧ ಲೋಟ), ಕೋರ್ನ್ ಫ್ಲವರ್ (೨ ದೊಡ್ಡ ಚಮಚ) , ಅರ್ಧ ಲೀಟರ್ ಬೆಂಗಳೂರು ಡೈರಿಯ ಗಟ್ಟಿ ಮೊಸರಿನ  ಮಿಶ್ರಣದ ದೋಸೆ,

(೨)) ೨ ಹಸಿರು ಸೇಬು, ೨ ಕಿವಿ ಹಣ್ಣು, ೫ ಬಾಳೇ ಹಣ್ಣು ಮತ್ತು ೧೦೦ ಗ್ರೇಮ್ ಕಾಲೆ ಯಾ ಬ್ರೋಕಾಲೆಗಳ ಮಿಶ್ರಣದ ಜೂಸ್,
ಹಸಿರು ಸೇಬಿನ ಸಿಪ್ಪೆಯ, ಕೆಂಪು ಘಾಟೀ ಮೆಣಸು (೬), ಹಿಂಗ, ಕೊತ್ತುಂಬರಿ, ಕಾಯಿ, ಹಿಂಗ್, ಉಪ್ಪು ಹಾಕಿ ಅರೆದಂತಹ ರುಚಿಕರ ಚಟ್ನೆ, ದೋಸೆಯನ್ನ ನೆಂಚಿ ತಿನ್ನಲು.

ಹಸಿರು ಸೇಬುವಿನ ಸಿಪ್ಪೆಯೇ, ಹೋಯ್ , ಬರೇ ಅದರ ಸಿಪ್ಪೇ ಕಾಣಿಯೇ, ಅದರಿಂದ ಅಂದರೆ ನಿಮ್ಮ ಮನೆಯ ಹಸಿರು ಗೊಬ್ಬರದ  ಡಬ್ಬಕ್ಕೆ ಬೀಳುವಂತಹ ಸಿಪ್ಪೆಯ ಸುಂದರ, ರುಚಿಕರವಾದ, ಹುಳಿ ಮತ್ತು ಸಿಹಿ ಮಿಶ್ರಣದ ಒಂದು ತರಾ ರುಚಿಯಾದ ಚಟ್ನಿ. ನೀವು ಅದರ ಕೆಂಪು ಬಣ್ಣವನ್ನೂ ಕೂಡ, ನಾನು ಹಾಕಿದಂತಹ ಫೋಟೋದಲ್ಲಿ ನೋಡಿ ಇನ್ಸ್ಪೆಕ್ಷನ್ ಮಾಡುವಿರಂತೆ.
ಇನ್ನೊಂದು ಅದೇ  ಹಸಿರು ಸೇಬು, ಕಿವಿ, ಬಾಳೇ ಹಣ್ಣು ಮತ್ತು ಬ್ರೋಕಲೆ ಯಾ ಕಾಲೆ ಹಾಕಿ ಮಾಡಿದಂತಹ ಜೂಸ್.
ಮತ್ತೊಂದು ಐಟೆಮ್, ನವಣೆ ಹಿಟ್ಟು, ಗೋಧಿ ಹಿಟ್ಟು, ಕೋರ್ನ್ ಹಿಟ್ಟು ಬರೇ 2 ಚಮಚ,ಹಸೀ  ಶುಂಠಿ, ಹಸೀ ಮೆಣಸು 2, ಕೊತ್ತುಂಬರೀ ಸೊಪ್ಪು ಮತ್ತು ಉಪ್ಪು ಇವುಗಳನ್ನೆಲ್ಲಾ ಅರ್ಧ ಲೀಟರ್ ಮೊಸರಿನೊಂದಿಗೆ ಚೆನ್ನಾಗಿ ಕಲಸಿ ಮಾಡಿದಂತಹ ದೋಸೆ.  ಮಾಡಿದಂತಹ ದೋಸೆಯನ್ನ ಈ ಸೇಬಿನ ಚ್ಜಟ್ನಿಯೊಡನೆ ಹೆಂಚಿಕೊಂಡು ತಿಂದು, ಒಂದು ಪಂಜಾಬಿ ಲೋಟದಲ್ಲಿ ಜೂಸನ್ನ ಕುಡಿದರೇ ಆಹಾ, ಈ ಶನಿವಾರ ಹೇಗೆ ನಿಮಗೆ ಕಳೆಯುತ್ತದೆಂದು  ನನಗೆ ಎಸ್ ಎಮ್ ಎಸ್ ನ್ನ ನೀವು ಮಾಡಿ ಡಿಜಿಟಲ್ ಇಂಡಿಯಾಕ್ಕೆ ಸಪ್ಪೋರ್ಟ್ ಮಾಡಿ ಕಾಣಿ ಕಾಂಬೊ?









ಪಿ.ಎಸ್. ಉಪಾಧ್ಯ
10/12/2016

ಇವತ್ತಿನ ಊಟಕ್ಕೆ, ಅಂದರೆ ನೋಟ್ ಬಂದಿ ಬರಾಬ್ಬರ್ 1 ತಿಂಗಳು ಮುಗಿದು, ಡಿಸೆಂಬರ್ 14 ರವರೆಗೆ ಪಾರ್ಲಿಮೆಂಟ್ ಮುಚ್ಚಿದಂತಹ ಕಾರಣಕ್ಕೆ, ನಮ್ಮ ವಿರೋಧ ಪಕ್ಷದವರ ಉದ್ಧಟ ಧೋರಣೆಯಿಂದಾಗಿ, ಸುಮಾರು ೧೯ ದಿನಗಳ ಕಾಲ ಪಾರ್ಲಿಮೆಂಟಿನಲ್ಲಿ ನಡೆಯುವಂತಹ ಜನಸಾಮಾನ್ಯರ ಹಿತಕ್ಕಾಗಿ ಮಾಡುವಂತಹ ಕೆಲಸಗಳು ಟಪ್ಪ್ ಆದ ಕಾರಣಕ್ಕೆ, ನಮ್ಮಲ್ಲಿ ಮಧ್ಯಾಹ್ನ ಊಟಕ್ಕೆ ಈ ಕೆಳಗಿನ ಐಟೆಮ್ಸ್ನೆಲ್ಲಾ ಮಾಡಿರುತ್ತೇನೆ. ಇದೊಂದು ಖುಷಿ ಊಟಾ ಅನ್ನಿ.


1. ಏಪಲ್,ಕಿವಿ,ಬಾಳೇ ಹಣ್ಣು ಹಾಗೂ ಕಾಲೆ ಹಾಕಿ ಮಾಡಿದಂತಹ  ತಣ್ಣಗಿನ ಜೂಸ್.







2. ಕುಂಬಳ ಕಾಯಿ, ಸೋರೇ ಕಾಯಿ, ಮೂಲಿ, ಹಾಗೂ ಕೇರೆಟ್ ಹಾಕಿ ಮಾಡಿದಂತಹ ಬಿಸೀ  ಸೂಪ್.



3.ಸೀಮೇಬದನೇಕಾಯಿ, ಪಾಲಕ್ ಹಾಕಿ ಮಾಡಿದ ಸಾಂಬಾರ್


4. ಬಿಗ್ ಬಜಾರಿನ ನೀಲಿ ಮತ್ತು ಬಿಳೀ ಕೊಟ್ಟೆಯ ಮೊಸರನ್ನೇ ಹಾಕಿ ಮಾಡಿದಂತಹ ಬೇಂಗನ್ ಭರ್ತಾ ಅತವಾ ಮೊಸರಿನ ಗೊಜ್ಜು ಅಥವಾ  ಬದನೇಕಾಯಿ ಸಾಸಿವೆ.
ಸುರೇಂದ್ರ ಉಪಾಧ್ಯ
9/12/2016





ಇವತ್ತು ನಮ್ಮ ಮನೆಯಲ್ಲಿ ಶಾಮಿಗೆ ಗಮ್ಮತ್ತು


5 ಲೋಟ ಬೆಳ್ತಿಗೆ ಅಕ್ಕಿ, 1 ಲೋಟ ಕೊಚ್ಚಕ್ಕಿ ನಿನ್ನೆ ಬೆಳಿಗ್ಗೆ ನೆನೆಸಿ ಇಂದು ಬೆಳಿಗ್ಗೆ ಅರೆದು ಸ್ವಲ್ಪವೇ ಸ್ವಲ್ಪ ಉಪ್ಪನ್ನ ಹಾಕಿ ಮಾಡಿದಂತಹ ಶಾವಿಗೆ. ಎಷ್ಟೊಂದು ಉದುರು ಉದುರಾಗಿ ಬಂದಿತೆಂದರೆ ಆದನ್ನ ಬಣ್ಣಿಸಲು ನನ್ನ ಈ ಬಾಯಿ, ಬೊಂಬಾಯಿ ಸಾಲದು. ಇನ್ಯಾರದ್ದಾದರೂ ಬಾಯಿಯನ್ನ ಹೊಗಳಲು ಕಡ ತೆಗೆದುಕೊಳ್ಳಬೇಕೂ ಅಂತ ಅನ್ನಿಸುತ್ತೆ.
ನಿಮಗೆ ಹೆಂಗಸರ ಸಹಾಯವೇ ಇಲ್ಲದೆ ಹೇಗೆ ಶಾವಿಗೆ ಒತ್ತುವುದೂ ಅಂತ ಈ ನನ್ನ ವೀಡಿಯೋದಲ್ಲಿ ತೆಗೆದು ತೋರಿಸಿದ್ದೇನೆ.
ಆಮೇಲೆ ಬಂದಳೈಯ್ಯಾ ನನ್ನ ಪ್ರಿಯೆ ಮಡದಿ ಜಾನಕಮ್ಮ. ಆಮೇಲೆ ನನಗೆ ಕೆಲಸ ಹಗೂರಾಯ್ತು ನೋಡಿ. ಆದರೆ ಶಾಮಿಗೆ ಒತ್ತಿ ಒತ್ತಿ ಅವಳ ಬೆನ್ನು ನೋವಾಯಿತಂತೆ ಎಂದು ಆಮೇಲೆ ನನಗೆ ಗೊತ್ತಾತು..
ಮಾಡಿದಂತಹ ಶಾಮಿಗೆಯನ್ನ  ನೆಂಚಲು ತೊಗರೀ ಬೇಳೆ ಗೊಜ್ಜು. ಕಾಯಿ ಹಾಲು.
ಆದರೆ, ನಾನು ಏಪಲ್, ಕಿವಿ, ಬಾಳೇ ಹಣ್ಣಿನ ಜೂಸ್ ಮಾಡಿದ್ದರಿಂದ ಕಾಯಿ ಹಾಲನ್ನ ಮಾಡಿಲ್ಲಾ ಅನ್ನಿ.
ನಿಮಗೆ ಬೇಕಾದರೆ ಬರೇ 15 ನಿಮಿಷದಲ್ಲಿ ಮಾಡಿ ಹಾಕುವೆ.
ಏನಂತೀರಾ?
ಬರೆದು ನಿಮ್ಮ ಮುಂದೆ ಪ್ರಸ್ತುತ ಪಡಿಸಿದಂತಹ ಮಹಾನುಭಾವ,
ಸದೀ ಮಾಸ್ಟ್ರ ಕಿರೀ ಮಗ




ಸುರೇಂದ್ರ ಉಪಾಧ್ಯ
6/12/2016

ಇವತ್ತು ಶನಿವಾರ. ನಮ್ಮ ಮನೆಯ ಬೆಳಿಗ್ಗಿನ  ವ್ಯವಹಾರವನ್ನ ನೋಡಿ ಸ್ವಲ್ಪ ಖುಷಿಯಾಗಿರಿ. ಆಯ್ತಾ.

1. ಕೇರೆಟ್ ಮತ್ತು ಮೂಲಂಗಿಯ , ಸ್ವಲ್ಪವೇ ಸ್ವಲ್ಪ ಹೆಸರು ಬೇಳೆಯನ್ನ ಹಾಕಿದಂತಹ ಕೋಸುಂಬರಿ.

2. ಸೋರೇಕಾಯಿ,ನವಿಲ್ ಕೋಸು ಮತ್ತು ಮೂಲಿಯ ನಮ್ಮ ಪ್ರತೀ ದಿನದ ಸೂಪ್




3. ಅಲಸಂಡೆ ಕಾಯಿಯನ್ನ ಕತ್ತರಿಸಿ, ಕಾಯಿ ಸಾಸಿಮೆ ಹಾಕಿ ಒಗ್ಗರಿಸಿದ ಪಲ್ಯ


4. 2 ಅಕ್ಕಿ,1 ಕೊಚ್ಚಕ್ಕಿ, 1 ಉದ್ದಿನ ಬೇಳೆ, ಸ್ವಲ್ಪ ಮುಂಡಕ್ಕಿ ಹಾಕಿ ಅರೆದು ಮಾಡಿದಂತಹ ಒಂದೇ ಒಂದು ದೋಸೆ. ಅದು ಈ ಚಿತ್ರ ಪಟದಲ್ಲಿಲ್ಲ
5. ನಾನು ಸೂಪಿಗೆ ಅಂತ ಬೇಸಿದನಲ್ಲಾ, ಆ ಹೋಳನ್ನೆಲ್ಲಾ ಹಾಕಿ , ಬೇಸಿದ 1 ಲೋಟ ಕಡಲೇ ಹಾಕಿ, ಕಾಯಿ ಸಾಸಿಮೆ,ದನಿಯ,ಜೀರಿಗೆ ಮತ್ತು ಹಿಂಗ್ ಹಾಗೂ ಟೊಮೇಟೋ ಹಾಕಿ ಮಿಕ್ಷಿಯಲ್ಲಿ ಅರೆದಂತಹ ಮಸಾಲೆ ಹಾಕಿ ಕುದಿಸಿ ಮಾಡಿದಂತಹ ಸಾಂಬಾರಿಗೆ,  1 ನಿಂಬೇ ಹಣ್ಣನ್ನ ಹಿಂಡಿ, ಬೆಳಿಗ್ಗಿನ ತಿಂಡಿಗೂ ಮತ್ತು ಮಧ್ಯಾಹ್ನದ  ಊಟಕ್ಕೆ ತೈಯ್ಯಾರು ಮಾಡಿದಂತಹ ರುಚಿ ರುಚಿಯಾದ ಹುಳಿ.
ಇವಿಸ್ಟೂ ಬೆಳಿಗ್ಗೇನೇ 1/2 ಗಂಟೆಯಲ್ಲಿ ಮಾಡಿ ಇನ್ನುಳಿದ ಹತ್ತೇ ನಿಮಿಷದಲ್ಲಿ ಒಂದು ದೋಸೆಯನ್ನ ಗಮ್ಮತ್ತಾಗಿ ಹೊಡೆದು ನಿಮ್ಮಗಳಿಗೆ ಇದನ್ನ ಪೋಸ್ಟ್ ಮಾಡಿರುವೆ ಎಂದರೆ ನಂಬುವಿರಾ?
ಇದೆಲ್ಲಾ ನಮ್ಮ ಮನೆಗೆ ಬರುವಂತಹ  ಅತಿಥಿಗಳಿಗಾಗಿ ಮಾಡಿದ್ದೆನ್ನಿ. ಅವರುಗಳು ಎಸ್ಟು ತಿನ್ನುತ್ತಾರೋ ಗೊತ್ತಿಲ್ಲ. ಆದರೆ ಇದೇ  ರೀತಿ ನಾನು ಮಾಡುವಂತಹ  ಅಥಿತಿ ಸತ್ಕಾರ. ಇದರಲ್ಲಿ ಒಂದು ರೀತಿಯ ಸಂತೋಷ  ನನಗೆ ಸಿಗುತ್ತೇ  ಅನ್ನಿ. ಇದು ನಮ್ಮ ತಂದೆ ಮತ್ತು ತಾಯಿಯವರಿಂದ ಬಂದಂತಹ ಬಳುವಳಿ.
ಪಾರಂಪಳ್ಳಿ ಸುರೇಂದ್ರ ಊಪಾಧ್ಯ
3/12/2016




ಇವತ್ತಿನ ತಿಂಡಿ ಹೀರೇಕಾಯಿ ಚಟ್ಟಿ.

ಬೇಕಾಗುವ ಸಾಮುಗ್ರಿಗಳು, 8 ಗಂಟೆಯ ಕಾಲ ಅಕ್ಕಿ, ಕಡಲೇ ಬೇಳೆ, ಒಂದು ಹಿಡಿ ಉದ್ದಿನ ಬೇಳೆ, 1 ದೊಡ್ಡ ಚಮಚ ಜೀರಿಗೆ, ಸ್ವಲ್ಪ ಹುಣಿಸೇ ಹಣ್ಣು, ದನಿಯಾ 2 ಚಮಚ, 8 ಬ್ಯಾಡಗಿ, ಮೆಣಸಿನ ಕಾಯಿ,
ಇದೆಲ್ಲವನ್ನೂ ಮಿಕ್ಷಿ ಅಥವಾ ಗ್ರೈಂಡರಿನಲ್ಲಿ ಬೆಳಿಗ್ಗೆ 6 ಗಂಟೆಗೆ ಅರೆದು ಸ್ವಲ್ಪ ಉಪ್ಪು ಹಾಕಿ, ಹೀರೇ ಕಾಯಿಯನ್ನ ಸಿಪ್ಪೆ ಹಗೂರ ತೆಗೆದು ಕತ್ತರಿಸಿ ಹಿಟ್ಟಿನಲ್ಲಿ ಅದ್ದಿ , ಅದ್ದಿ ದೋಸೆಯಾಕಾರದಲ್ಲಿ ಬಿಡಿ. ಎರಡು ಚಿಪ್ಪು ಗಟ್ಟಿ ತೆಂಗಿನ ಎಣ್ಣೆ ಹಾಕಿ ಸಣ್ಣ ಬೆಂಕಿಯಲ್ಲಿ ಕಾಯಲು ಬಿಡಿ.
ಹಾಂಗೆ ಬಾಯಿಗೆ ಹಾಕಿ ಎಬ್ಬಿದರೆ, ಆಹಾ ಅದರಷ್ಟು ಸುಖ, ಅದರಸ್ಟು ರುಚೀ ಇನ್ಯಾವುದೂ ಇಲ್ಲಿಯೇ?


ಇನ್ನೊಂದು ಐಟೆಮ್, ಮಾಮೂಲು ಏಪಲ್,ಕಿವಿ,ಬಾಳೇ ಹಣ್ಣು ಮತ್ತು ಕರಬೂಜದ ಜೂಸ್




ಬರೆದು ಪ್ರಸ್ತುತ ಪಡಿಸಿದವರು
ಪಾರಂಪಳ್ಳಿ ಸುರೇಂದ್ರ ಉಪಾಧ್ಯ
These two items are for today's lunch.
One is from Muly and other is Beans Curry.
20/11/2016

ಈ ಕೆಳಗಿನದ್ದು ತಾರೀಕು ೧೮/೧೧/೨೦೧೬ ಕ್ಕೆ.

One is kerela curry and other is green salad prepared from cabbage, muly, kEreT. Half lemon is used for curry and other half is used for salad. 18/11/2016


ಅಂಡು ಸುಟ್ಟ ಉಡುಪೀ ಸೌತೇ ಕಾಯಿ ಹುಳಿಗೆ

ನನ್ನ ರೆಸಿಪೆ:-

ಕೊತ್ತುಂಬರಿ ಬೀಜ ೧ ದೊಡ್ಡ ಚಮಚ, ೧೦ ಒಣ ಮೆಣಸಿನ ಕಾಯಿ (ಬೇಕೆಂದರೆ ನೀವು ೧೫ ಹಾಕಬಹುದು, ಇನ್ನೂ ಖಾರ ಬೇಕೆಂದರೆ!), ಅರ್ಧ ಚಮಚ ಉದ್ದಿನ ಬೇಳೇ, ಅರ್ಧ ಚಮಚ ಜೀರಿಗೆ, ಇಂಗು, ತೆಂಗಿನ ಎಣ್ಣೆ ಹಾಕಿ, ಉದ್ದಿನ ಬೇಳೆ ಕೆಂಪಾಗುವವರೆಗೆ ಹುರಿಯಬೇಕು. ಆಮೇಲೆ ಅದನ್ನ ಕಾಯಿಯನ್ನು(೧ ಕಡಿ) ಹಾಕಿ ಮಿಕ್ಷಿಯಲ್ಲಿ ಸಣ್ಣಗೆ ರುಬ್ಬಿ. ನಿಮ್ಮ ಮಸಾಲೆ ರೆಡಿ.
ಒಂದು ಪಾನಿನಲ್ಲಿ ೪ ಚಮಚ ತೆಂಗಿನ ಎಣ್ಣೆ ಹಾಕಿ,ಸೌತೇ ಕಾಯಿಯನ್ನ ಕತ್ತರಿಸಿ, ೧೦ ಹೋಳುಗಳನ್ನ ಮಾಡಿ, ಅದನ್ನ ಅಡ್ಡ, ದಿಡ್ಡ ಮತ್ತು ಸರ್ತ ಸೀಳಿ, ಅದಕ್ಕೆ ಒಂದು ಲೋಟದಲ್ಲಿ ಸ್ವಲ್ಪ ನೀರನ್ನ ತೆಗೆದುಕೊಂಡು ಅರ್ಧ ಚಮಚ ಅರಶಿನ, ಸ್ವಲ್ಪ ಉಪ್ಪು, ಮತ್ತು ಸ್ವಲ್ಪ ಬೆಲ್ಲವನ್ನ ಕರಡಿ ಈ ಹೋಳುಗಳ ಮೇಲೆ ಹಾಕಿ, ಒಂದು ಬಾವಡಿಯಿಂದ ಮುಚ್ಚಿ, ಅಂಡು ಕರಟುವ ವರೆಗೆ ಬೇಯಲಿ. ಬೆಂಕಿ ಸಣ್ಣಗಿರಲಿ.
ಬೆಂದಾದಮೇಲೆ ಮಿಕ್ಷಿಯಲ್ಲಿ ಅರೆದಂತಹ ಮಸಾಲೆಯನ್ನು ಹಾಕಿ ಒಂದು ಪಾತ್ರೆಯಲ್ಲಿ , ಸ್ವಲ್ಪ ಹುಣಿಸೇ ಹಣ್ಣನ್ನ (ನೆಲ್ಲಿ ಕಾಯಿ ಗಾತ್ರದ್ದು) ಬೆಲ್ಲ ಹಾಕಿ ಕುದಿಸಿ. ಕೊನೆಯಲ್ಲಿ ಒಂದು ಒಗ್ಗರಣೆಯನ್ನ (ತುಪ್ಪದ್ದೋ ಅಥವಾ ತೆಂಗಿನ ಎಣ್ಣೇಯದ್ದೋ) ಕೊಟ್ಟು ಇಳಿಸಿ. ಸ್ವಲ್ಪ ಕೊಟ್ಟುಂಬರೀ ಸೊಪ್ಪನ್ನ ಕತ್ತರಿಸಿ ಹುಳಿಯ ಮೇಲೆ ಹರಡಬಹುದು.

ನಿಮ್ಮ, ಅಂಡು ಸುಟ್ಟ ಉಡುಪೀ ಸೌತೇ ಕಾಯಿಯ ಹುಳಿ ತೈಯ್ಯಾರಾಯ್ತು ನೋಡಿ




ಬರೆದವರು
ಪಾರಂಪಳ್ಳೀ ಸುರೇಂದ್ರ ಉಪಾಧ್ಯ
೧೧/೧೧/೨೦೧೬

ತುಳಸೀ ಪೂಜೆಯ ದಿನ

ಇವತ್ತು ೧೦/೧೧/೨೦೧೬, ದಶಮಿ ತಿಥಿ, ರಾಘವೇಂದ್ರ ವಾರ


ಇವತ್ತು ಏನಪ್ಪಾ ಅಂದರೆ, ನಮ್ಮ ಮಂಟಪ ರಾಮಣ್ಣನ ಪಲ್ಯ ಹಾಗೂ ಮಟ್ಟೀ ಗುಳ್ಳದ ,ಬಿಗ್ ಬಜಾರಿನಿಂದ ತಂದಿರುವಂತಹ ಅರ್ಧ ಲೀಟರ್ ದಪ್ಪ ಬಿಳೀ ಮತ್ತು ನೀಲಿ ಕೊಟ್ಟೆಯ ಮೊಸರಿನಿಂದ ಮಾಡಿದಂತಹ ಮೊಸರು ಗೊಜ್ಜು ಅಥವಾ ಸಾಸಿವೆ.
ಇದೇನು, ಇಷ್ಟೆಲ್ಲಾ ಮೊಸರಿಗಾಗಿ ವಿವರಣೆ ಕೊಡ್ತಾ ಇದ್ರಲ್ಲಾ, ಇವರು, ಬರೇ ಮೊಸರು ಗೊಜ್ಜೂ ಅಂದರೆ ಸಾಕಿತ್ತಲ್ಲಾ ಅಂತ ಕೇಳಬೇಡಿ. ಯಾತಕ್ಕೆ, ಹೀಗೆ ಹೇಳಿದೆ ಅಂದರೆ, ಆ ಮೊಸರು ಗೊಜ್ಜನ್ನ ಉಂಡಂತಹ ನಾನು , ತಕ್ಷಣ ೨ ಗಂಟೆ ನಿದ್ದೆ ಹೋದೇ ಅಂದರೆ, ನೀವು ಕೂಡಾ ಅಲ್ಲಿಂದ ತಂದಂತಹ ಅದೇ ಮೊಸರಿನಿಂದಲೇ  ಮಾಡ್ತೀರಾ ಅಂತ ನನಗೆ ಭರವಸೆಯಿದೆ.  ಹಾಗಂತ ನಾನು ಇಲ್ಲಿ  ಹೇಳಿದೆ ಅಷ್ಟೆ. ಇರಲಿ ಬಿಡಿ. ಈಗ ಮಾಡುವ ವಿಧಾನಕ್ಕೆ ಬರೋಣಾ:-


೧ ಮಟ್ಟೀ ಗುಳ್ಳದ , ಗಟ್ಟೀ ಮೊಸರಿನ ಗೊಜ್ಜು

ಒಂದು ಮಟ್ಟೀ ಉಡುಪಿ ಗುಳ್ಳವನ್ನ ತೆಗೆದುಕೊಂದು ಬಂದು, ಅದನ್ನ ಚೆನ್ನಾಗಿ ನೀರಿನಿಂದ ತೊಳೆದು(ಕಾವೇರಿ) ಆ ಮೇಲೆ ಅದರ ಸುತ್ತ ಒಂದು ಚಮಚ ತೆಂಗಿನೆಣ್ಣೆಯನ್ನ ನಿಧಾನವಾಗಿ ಸವರಿ, ಸಣ್ಣ ಬೆಂಕಿಯ ಮೇಲೆ ಇಡಿ ಕಾಂಬೋ. ನೋಡ್ತಾ ನೋಡ್ತಾ ಅದನ್ನ ತಿರುಗಿಸುತ್ತಾ ಇರಿ.
ಆ ಮೇಲೆ ಎಲ್ಲಾ ಸಿಪ್ಪೆ ಕರಟಿದ ಮೇಲೆ, ಅದನ್ನ ಬೆಂಕಿಯಿಂದ ಕೆಳಗಿಳಿಸಿ, ಒಂದು ಪಾತ್ರೆಯನ್ನ ಆ ಬೆಂದಂತಹ ಬದನೇ ಕಾಯಿಗೆ ಮುಚ್ಚಿ ಕಾಂಬೊ.
ಆ ಮೇಲೆ ಅದರ ಮೇಲಿನ ಸಿಪ್ಪೆ ತೆಗೆದು, ಅದನ್ನ ಒಂದು ಮಿಕ್ಷಿಯಲ್ಲಿ ಹಾಕಿ ಕಾಯಿ ತುರಿ, ಸುಮಾರು ಅರ್ಧ ಕಡಿಯನ್ನ ಅದರೊಂದಿಗೆ ಹಾಕಿ ಸಣ್ಣಕ್ಕೆ ಅರೆದು, ಮತ್ತೆ ಒಂದು ಪಾತ್ರೆಗೆ ಹಾಕಿ. ಬಿಗ್ಬಜಾರಿನಿಂದ ತಂದಂತಹ ಮೊಸರನ್ನ ಹಾಗೆಯೇ ಈ ಮಿಶ್ರಣಕ್ಕೆ ಹಾಕಿ. ಸಣ್ಣ ಸಣ್ಣಾದಾಗಿ ತುಂಡರಿಸಿದಂತಹ ಹಸೀ ಮೆಣಸು (೧) ಮತ್ತು ಸ್ವಲ್ಪ ಶುಂಠಿ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಒಂದು ಸೌಂಟಿನಿಂದಲೋ ಅಥವಾ ಚಮಚದಿಂದಲೋ ಮೊಗಚಿ. ಅದಕ್ಕೆ ಒಂದು ತೆಂಗಿನೆಣ್ಣೆಯ ಸಾಸಿವೆ ಒಗ್ಗರಣೆಯನ್ನ ಕೊಟ್ಟು ಊಟಕ್ಕೆ ರೆಡಿಯಾಗಿ ಇಟ್ಟೂಬಿಡಿ ಕಾಂಬೊ.



೨. ಮಂಟಪ ರಾಮಣ್ಣನ ಮಟ್ಟೀ ಗುಳ್ಳದ ಪಲ್ಯ.


ಇದನ್ನ ಮಾಡೋದು ಬಹಳ ಸುಲಭ. ಒಂದು ಮಟ್ಟಿಗುಳ್ಳವನ್ನ  ತೆಗೆದುಕೊಂಡು, ನೀರಿನಿಂದ ತೊಳೆದು ಸಣ್ಣಕೆ, ಕೀತು,  ಕೀತಾಗಿ ಉದ್ದನೆ ಕತ್ತರಿಸಿ. ಹಾಗೆಯೇ ೨ ಹಸೀ ಮೆಣಸಿನ ಕಾಯಿಯ ಹೊಟ್ಟೆಯನ್ನೂ ಉದ್ದಕೆ ಸೀಳಿರಿ. (ಜಾಸ್ತಿ ಖಾರ ಬೇಕೆಂದವರು ಜಾಸ್ತಿ ಮೆಣಸಿನ ಕಾಯಿಯನ್ನ ಹಾಕಬಹುದು. ಆದರೆ ನನ್ನ ಹತ್ತಿರ ನಾಳೆ ಬೆಳಿಗ್ಗೆ ಹೋಯ್ ಉಪಾಧ್ಯರ ಮಟ್ಟೀ ಗುಳ್ಳದ ಪಲ್ಯ ತಿಂದು ನಮಗೆ ಹೊರಕಡೆ ಹೋಗುವಾಗ ಅಬ್ಬಾ ಉರಿ, ಉರಿ ಅಂತ ಬೊಬ್ಬೆ ಮಾತ್ರ ಇಡಬೇಡಿ. ಆಮೇಲೆ ಇದಕ್ಖೇನಾದರೂ ನಿಮ್ಮಲ್ಲಿ ಔಷಧವಿದೆಯೋ ಅಂತ ಆರೋಗ್ಯಭಾಗ್ಯದ ಕಲಂನಲ್ಲಿ ಪ್ರಶ್ನೆ ಮಾತ್ರ ಕೇಳಬೇಡಿ. ಹೀಗೆ ಕತ್ತರಿಸಿದಂತಹ ಈ ಎರಡೂ ಐಟೆಮ್ಸನ್ನ ಒಲೆಯ ಹತ್ತಿರ ತೆಗೆದುಕೊಂಡು ಹೋಗಿ, ಒಂದು ಬಾಣಲೆಗೆ ೪ ಚಿಪ್ಪು ತೆಂಗಿನೆಣ್ಣೆ, ೧ದು ಚಮಚ ಕಡಲೇ ಬೇಳೆ, ಒಂದು ಚಮಚ ಉದ್ದಿನ ಬೇಳೆ, ಇಂಗು, ಅರ್ಧ ಚಮಚ ಸಾಸಿವೆ ಮತ್ತು ೨ ಒಣ ಘಾಟಿ ಮೆಣಸು ಎಲ್ಲಾ ಹಾಕಿ ಒಗ್ಗರಣೆಯನ್ನ ಮಾಡಿದಂತಹ ಬಾಣಲೆಗೆ ಆ ಕತ್ತರಿಸಿದಂತಹ ಬದನೇ ಕಾಯಿ ಮತ್ತು ಹಸಿಮೆಣಸಿನಕಾಯಿಯನ್ನೆಲ್ಲಾ ಹಾಕಿ ೧ ಲೋಟ ನೀರನ್ನೂ ಹಾಕಿ, ಸಣ್ಣ ಬೆಂಕಿಯಲ್ಲಿ ಒಂದು ಬಾವಡಿಯನ್ನು ಮುಚ್ಚಿಡಿ. ಬೆಂದಾದಮೇಲೆ ನೀವು ಒಂದು ಚಮಚ ಖಾರದ ಪುಡಿ ಹಾಕಿ ಮೊಗಚಿ, ಬೆಂಕಿಯನ್ನ ಆರಿಸಿ ಒಂದು ನಿಂಬೇ ಹಣ್ಣನ್ನ ಹಿಂಡೀ ಕಾಂಬೊ.
ಆ ಮೇಲೆ ತಿಂದು ಹೇಳಿ, ನಮ್ಮ ಮಂಟಪ ರಾಮಣ್ಣನ ಮಟ್ಟೀ ಗುಳ್ಳದ ಪಲ್ಯ ಹೇಂಗ್ ಬಂತೂ ಅಂತ? ಇದನ್ನೇ ಕೆಲವರು, ಹೊಡಿಪುಡಿ ಪಲ್ಯಾ ಅಂತಲೂ ಹೇಳುತ್ತಾರೆ. ಆದರೆ ಈ ಪದವನ್ನ ಉಪಯೋಗಿಸಿದವರು ಮಾತ್ರ ನಮ್ಮ ಅಪ್ಪ ಸದೀ ಮಾಸ್ಟ್ರು, ಕಾರಣ ಅವರು ಮತ್ತು ನಮ್ಮ ಮಂಟಪ ರಾಮಣ್ಣ (ನನಗೆ  ಅವರು ರಾಮ ದೊಡ್ಡಪ್ಪಯ್ಯ ಆಗಬೇಕು, ಅವರು ಈಗ ಇಲ್ಲ ಅಂತ ಮಾಡಿ. ಅವರು ಸ್ವರ್ಗಸ್ಥರಾಗಿದ್ದಾರನ್ನಿ) ಬಹಳ ಅನ್ಯೋನ್ಯರಾಗಿದ್ದರು.
ನಿಮಗಾಗಿ ಒಂದು ಫೋಟೋ ಸ್ನೇಪ್ ತೆಗೆದು ಗತ್ತಿಸಿದ್ದೇನೆ.



ಇತೀ ನಿಮ್ಮವನೇ ಆದ,
ಪಾರಂಪಳ್ಳೀ ಸುರೇಂದ್ರ್ ಉಪಾಧ್ಯ


ಇವತ್ತು ೯/೧೧/೨೦೧೬, ನವಮಿ ತಿಥಿ
ಇವತ್ತಿನ ಸ್ಪೆಷಲ್ ಅಡುಗೆ ಏನಪ್ಪಾ ಅಂದರೆ:-

1. ಜೀರಿಗೆ, ಶುಂಠಿ, ಒಂದಲಗದ ಸೊಪ್ಪು (ಇದನ್ನ ನಮ್ಮ ಉಡುಪಿ ಜಿಲ್ಲೆಯಲ್ಲಿ) ಉರುಗನ ಸೊಪ್ಪು ಅಂತ ಕರೆಯುತ್ತಾರೆ) ಇವೆಲ್ಲವುದರ , ಮೊಸರನ್ನ ಹಾಕಿ ಮಾಡಿದಂತಹ ನನ್ನ ಪ್ರೀತಿಯ ತಂಬುಳಿ.

a. ಇದಕ್ಕೆ ಬೇಕಾಗುವ ಸಾಮುಗ್ರಿಗಳು ಮತ್ತು ಮಾಡುವ ವಿಧಾನ:-

i. ಒಂದು ಹಿಡಿಯಷ್ಟು ಉರುಗನ ಸೊಪ್ಪು. ಚೆನ್ನಾಗಿ ತೊಳೆದು, ಬುಡವನ್ನ ಕತ್ತರಿಸಿ ಒಂದು ಚಮಚ ದನದ ತುಪ್ಪದಲ್ಲಿ ಹೊರಿಯಿರಿ. ಹೊರಿದಾದ ಮೇಲೆ ಅದನ್ನ ನಿಮ್ಮ ಮಿಕ್ಷಿಗೆ ವರ್ಗಾವಣೆ ಮಾಡಿ. ಇದಕ್ಕೆ ನಿಮಗೆ ಮಾತ್ರ ಹಕ್ಕಿದೆ.

ii. ಅದೇ ಬಿಸೀ ಬಾಣಲೆಗೆ, ಒಂದು ಚಮಚ ಜೀರಿಗೆ (ಹೆಚ್ಚಾಗಿ ಹಾಕಿದರೆ ತಂಬುಳಿ ಕೈಂಯೀ ಬಂದೀತು, ಜಾಗ್ರತೆ), ಒಂದು ಚಮಚ ತುಪ್ಪ, ೪-೫ ಒಣಾ ಘಾಟೀ ಮೆಣಸು, ಒಂದು ಚಿಟಿಕೆ ಇಂಗು, ಸ್ವಲ್ಪ ಶುಂಠಿ, ೧೦ ಬೀಜ ಕಾಳು ಮೆಣಸು ಎಲ್ಲಾ ಹಾಕಿ ಹೊರಿಯಿರಿ. ಅದಕ್ಕೇ ಒಂದು ೧೫-೨೦ ಗೋಡಂಬಿಯನ್ನೂ ಹಾಕಿ ಹೊರಿದು ಗೋಡಂಬಿಯನ್ನ ಎತ್ತಿಡಿರಿ. ಅದು ನಮಗೆ ಪಲ್ಯಕ್ಕೆ ಬೇಕಾಗುತ್ತೆ.


iii. ಗೋಡಂಬೀ ರಹಿತ ಮಿಶ್ರಣವನ್ನ ಉರುಗದ ಸೊಪ್ಪನ್ನ ಹೊರಿದಂತಹ ಮಿಕ್ಷಿಗೇ ವರ್ಗಾವಣೆಯನ್ನ ಮಾಡಿ. ಆಮೇಲೆ ಕಾಯಿಯನ್ನ ತುರಿದು ಅದಕ್ಕೇ ಹಾಕಿ, ಒಂದರ್ಧ ಚಮಚ ಉಪ್ಪನ್ನು ಹಾಕಿ, ಅರ್ಧ ಲೋಟ ಮೊಸರನ್ನ ಹಾಕಿ ಚೆನ್ನಾಗಿ ನುಣ್ಣಗೆ ಅರೆಯಿರಿ.
iv. ನಿಮ್ಮ ತಂಬುಳಿ ರೆಡಿ ಆಯ್ತು ನೋಡಿ. ಬೇಕೆಂದರೆ ಒಂದು ಒಗ್ಗರಣೆಯನ್ನ ಕೊಡಬಹುದು. ಕೆಲವು ಕಡೆ ಒಗ್ಗರಣೆ ಕೊಡುವುದಿಲ್ಲ.




2. ೨ನೆಯದಾಗಿ ಅಲಸಂಡೆ, ಮತ್ತು ತೊಂಡೇ ಕಾಯಿ ಹಾಗೂ ಗೋಡಂಬಿ ಹಾಕಿ ಮಾಡಿದಂತಹ ಪ್ರೀತಿಯ ಪಲ್ಯ

a. ಇದಕ್ಕೆ ಬೇಕಾಗುವ ಸಾಮುಗ್ರಿಗಳು ಮತ್ತು ಮಾಡುವಂತಹ ವಿಧಾನ:-

i. ಅಲಸಂಡೆಯನ್ನ ಚೆನ್ನಾಗಿ ತೊಳೆದು, ಸಣ್ಣಗೆ ಕತ್ತರಿಸಿ. ಅದಕ್ಕೆ ತೊಂಡೇ ಕಾಯಿಯನ್ನೂ ತೊಳೆದು ೮ ಭಾಗ ಮಾಡಿ ಸಣ್ಣದಾಗಿ ಕತ್ತರಿಸಿ.

ii. ಒಂದು ಬಾಣಲೆಯನ್ನ ತೆಗೆದುಕೊಂಡು, ಒಂದು ಚಿಪ್ಪು ತೆಂಗಿನೆಣ್ಣೆಯನ್ನ ತೆಗೆದುಕೊಂಡು ಆ ಬಾಣಲೆಗೆ ಹಾಕಿ ಕಾಂಬೊ. ಒಂದು ಚಮಚ ಜೀರಿಗೆ, ಒಂದು ಚಮಚ ಉದ್ದಿನ ಕಾಳು, ಒಂದು ಚಮಚ ಕಡಲೇ ಬೇಳೆ, ಒಂದು ಚಿಟಿಕೆ ಇಂಗು ಹಾಕಿ ಒಗ್ಗರಣೆಯನ್ನ ಮಾಡಿ ಅದಕ್ಕೆ ಕತ್ತರಿಸಿದಂತಹ ಅಲಸಂಡೆ ಮತ್ತು ತೊಂಡೇ ಕಾಯಿಯನ್ನ ಹಾಕಿ, ಒಂದು ಅರ್ಧ ಚಮಚ ಅರಶಿನ, ಅರ್ಧ ಚಮಚ ಉಪ್ಪು ಹಾಕಿ ಒಂದು ಲೋಟ ನೀರನ್ನೂ ಹಾಕಿ ಒಂದು ಬಾವಡಿಯನ್ನ ಮುಚ್ಚಿ, ಸಣ್ಣ ಬೆಂಕಿಯಲ್ಲಿ ಬೇಯಲು ಬಿಡಿ. ಬೆಂದಾದ ಮೇಲೆ ಕಾಯಿ ಮತ್ತು ಸಾಸಿಮೆ ಮತ್ತು ಒಂದು ಚಮಚ ಖಾರದ ಪುಡಿಯನ್ನು ಕಾಯಿ ತುರಿಯೊಂದಿಗೆ ಮಿಕ್ಷಿಯಲ್ಲಿ ಅರೆಯಿರಿ.

iii. ಅರೆದಂತಹ ಕಾಯಿ ಸಾಸಿಮೆಯನ್ನ ಪಲ್ಯಕ್ಕೆ ಹಾಕಿ , ಅದಕ್ಕೆ ಹುರಿದಂತಹ ಗೋಡಂಬಿಯನ್ನೂ ಹಾಕಿ ಸ್ವಲ ಹೊತ್ತು ಆಚೆ ಈಚೆ ಮೊಗಚುತ್ತಾ ಒಂದು ೫ ನಿಮಿಷ ಬೆಂಕಿಯಲ್ಲಿ ಕಾಯಿ ಸಾಸಿಮೆ ಭಾಗ ಹೊರಿಯಲು ಬಿಡಿ. ಆಮೇಲೆ ಬೆಂಕಿಯನ್ನ ಆರಿಸಿ.
iv. ಈಗೋ ನಿಮ್ಮಯ ಪ್ರೀತಿಯ ಪಲ್ಯ ರೆಡಿ.



3. ಇನ್ನು ಒಂದು ಸಣ್ಣ ಹೆಸರು ಬೇಳೆಯ ಪಾಯಸ:

a. ಇದು ಎಲ್ಲರಿಗೂ ಗೊತ್ತಿದ್ದದ್ದೇ. ಇವತ್ತು ನಾನು ಒಬ್ಬನೇ ಇರುವ ಕಾರಣ ಸ್ವಲ್ಪ ಗಮ್ಮತ್ತು ಮಾಡೋದು. ಏನೆಂದರೆ ಹೆಸರು ಬೇಳೆಯನ್ನ ತುಪ್ಪದಲ್ಲಿ ಕೆಂಪಗೆ ಹುರಿದು ಅದನ್ನ ಮೈಕ್ರೋವೇವ್ ಓವನ್ನಿನಲ್ಲಿ ೧೫ ರಿಂದ ೨೦ ನಿಮಿಷ ಬೇಯಲು ೨ ಲೋಟ ನೀರನ್ನ ಹಾಕಿ ಇಟ್ಟೆ. ಬೆಂದ ನಂತರ ಒಂದು ಪಾತ್ರೆಯಲ್ಲಿ ಗೋಡಂಬಿ ಮತ್ತು ದ್ರಾಕ್ಷಿಯನ್ನ ದನದ ತುಪ್ಪದಲ್ಲಿ ಹುರಿದು ಹಾಕಿದಂತಹ ಕಾಯಿ ಹಾಲಿಗೆ ವರ್ಗಾವಣೆ ಮಾಡಿ ಸ್ವಲ್ಪ ಹೊತ್ತು ಕುದಿಸಲು ಬಿಟ್ಟೇ. ಹೋಯ್ ,ಮ್ಮಹೆಸರು ಬೇಳೆಯ ಪಾಯಸ ರೆಡೀ ಆತು ಕಾಣಿ.

4. ಈ ಊಟ ಉಂಡು ಒಂದು ಸಣ್ಣ ನಿದ್ರೆ ಮಾಡಿದಲ್ಲಿ ಯಾವ ಕಾಹಿಲೆಯೂ ನಮ್ಮ ಬಳಿ ಸುಳಿಯುವುದಿಲ್ಲಾ ಮಹಾರಾಯರೇ. ನಿಮಗೆ ಸಾಕ್ಷಿಯಾಗಿ ಎರಡು ಫೋಟೋವನ್ನ ನಿಮ್ಮ ಮುಂದೆ ಪ್ರದರ್ಷನಕ್ಕೆ ಇಟ್ಟಿದ್ದೇನೆ ನೋಡಿ. ಆಮೇಲೆ ನಮಗೆ ತಿಳಿಸಿ. ಆಯ್ತಾ? ಬೇಜಾರು ಮಾಡಬೇಡಿ. ನಮ್ಮ ಹೆಸರನ್ನೂ ವಾಟ್ಸೇಪಿನಲ್ಲಿ  ಹೊಡೆದು ಹಾಕಬೇಡಿ ಮಹಾರಾಯರೇ. ಹಾಗೆ ಮಾಡಿದ್ರೇ ಬಹಳ ಬೇಜಾರು ಆಗುತ್ತೆ ನೋಡಿ.

ಇತೀ ನಿಮ್ಮವನೇ ಆದ

ಪಾರಂಪಳ್ಳೀ ಸುರೇಂದ್ರ ಉಪಾಧ್ಯ.
ರೇವಿನ್ಯೂ ಸ್ಟೇಂಪಿನ ಮೇಲೆ ನಾನು ಸೈನ್ ಮಾಡಿದ್ದೆ ಕಾಣಿ. ಕಾಣ್ಸುತ್ತಾ?
೯/೧೧/೨೦೧೬

ತೊಂಡೇಕಾಯಿ ಪಲ್ಯ ಯಾರಿಗೆ ಗೊತ್ತುಂಟು, ಯಾರಿಗೆ ಗೊತ್ತಿಲ್ಲಾ ಹೇಳಿ? ಆದರೂ ನನ್ನ ಈ ಪಲ್ಯ ಒಂದು ವಿಶೇಷವೇ ಸರಿ.
ಅದೇನೆಂದು ಕೇಳ್ತೀರಾ? ಕೇಳಿ. ಹೇಳ್ತೇನೆ.
ಭಲ್ಲಿರೇನಯ್ಯಾ, ಇರುವಂತಹ ಸ್ಥಳ, ಕಾಮಾಕ್ಯದ ಹಿಂಭಾಗ. ದೇನಾಬ್ಯಾಂಕಿನ ಕೋಲನಿಯ ಹೆಸರನ್ನ ಯಾರಾದರೂ ಕೇಳಿದ್ದೀರಾ? ಅಥವಾ ಈ ಹಿಂದೆ ಕೇಳಿದಂತಹ ನೆನೆಪಾದರೂ ನಿಮಗುಂಟೇ?
ಹೌದು. ಹೌದು. ಅದಕ್ಕೇನಂತೆ?
ಏನಿಲ್ಲಾ, ನೀವೊಂದು ಬಾಣಲೆಯನ್ನ ತೆಗೊಳ್ಳಿ. ಆದನ್ನ ಗ್ಯಾಸ್ ಒಲೆಯ ಮೇಲಿಡಿ. ಬೆಂಕಿ ಹಚ್ಚಿ. ಎರಡು ಚಿಪ್ಪು ತೆಂಗಿನ ಎಣ್ಣೆಯನ್ನ ಹಾಕಿ, ಅದಕ್ಕೆ ಅರ್ಧ ಚಮಚ ಸಾಸಿವೆ, ಅರ್ಧ ಚಮಚ ಜೀರಿಗೆ, ಅರ್ಧ ಚಮಚ ಉದ್ದಿನ ಬೇಳೆ, ಒಂದು ಘಾಟಿ ಮೆಣಸಿನ ಕಾಯಿ ತುಂಡು ತುಂಡು ಮಾಡಿ ಹಾಕಿಯೇ.
ಒಗ್ಗರಣೆ ನಿಮಗೆ, ಹೋಯ್ ಆಯ್ತೋ ಇಲ್ವೋ ಅಂತ ಹೇಗೆ  ಗೊತ್ತಾಪುದು ಹೇಳಿ?
ಓ ಅದಾ. ಬಹಳ ಸುಲಭಾ ಕಾಣಿ. ಸಾಸಿವೆ ಹೊಟ್ತಾ, ಒಗ್ಗರಣೆ ಆಯ್ತೂ ಅಂತ ಇಟ್ಕೊಳ್ಲಿ.
ಇದಕ್ಕೆ ನಾಲ್ಕು ತುಂಡರಿಸಿದಂತಹ, ಇನ್ನೂ ಕೆಲವು ಹೆಂಗಸರು ಎಂಟು ತುಂಡನ್ನೂ ಮಾಡ್ತಾರನ್ನಿ.
ಹೌದೇ?
ಹೌದೇ ಮಹಾರಾಯರೇ.
ಹೋಗ್ಲಿ ಬಿಡಿ, ಈಗ ನೀವು, ತುಂಡರಿಸಿದಂತಹ ತೊಂಡೇಕಾಯಿಯನ್ನ ಬಾಣಲೆಗೆ ಹಾಕಿ, ಅದಕ್ಕೆ ಅರ್ಧ ಚಮಚ ಅರಶಿನ, ಅರ್ಧ ಚಮಚ ಉಪ್ಪು, ಸ್ವಲ್ಪ ಇಂಗು ಹಾಕಿ ಮೊಗಚಿ. ಇದಕ್ಕೆ ನೀವು ಸ್ವಲ್ಪ ಗೋಡಂಬಿ ಹಾಗೂ ಬೇಸಿದ ಕಡಲೇ ಕಾಳು ಮತ್ತು ಅಲಸಂಡೆ ಕಾಳನ್ನೂ ಹಾಕಿಯೇ. ಒಂದು ಲೋಟ ನೀರನ್ನ ಹಾಕಿ ಬಾವಡಿಯನ್ನ ಮುಚ್ಚಿಯೇ.
ಇಪ್ಪತ್ತು ನಿಮಿಷವಾದಮೇಲೆ ಮೇಲೆ ಕೆಳಗೆ ಮೊಗಚಿಯೇ.ಎಲ್ಲಾ ತೊಂಡೇಕಾಯಿ ಬೇಯಲಿ ಬಿಡಿ.
ಆಮೇಲೆ ಏನು ಮಾಡಬೇಕಂತೀರಾ?
ಹೌದೇ, ನಾನೇನು ಮಾಡಬೇಕೆಂದು ಅಪ್ಪಣೆಯನ್ನ ಕೊಡಿ. ಈಗಲೆ ಮುಂದುವರಿಯುತ್ತೇನೆ. ಕೊಡಿನೀ ಸಟ್ಟುಗವನ್ನೋಒಒಒ
ಹೋಯ್ ಸ್ವಲ್ಪ ತಡೀನಿ ಮಹಾರಾಯ್ರೇ. ನೀವು ಇಷ್ಟೊಂದು ಅವಸರ ಮಾಡಿದರೆ ಹೇಗೆ? ನೀವೇನಾದರೂ, ನಿಮ್ಮ ಅಮ್ಮನ ಹೊಟ್ಟೆಯಿಂದ ಏಳೇ ತಿಂಗಳಿಗೆ ಈ ಭೂಮಿಗೆ ಬಂದವ್ರಾ? ಆನು ಇಷ್ಟೊಂದು ಗಡಿ-ಬಿಡಿ ಮಾಡ್ತೀರಲ್ಲಾ?. ಹಾಗೆ ಮಾಡಿದರೆ ಪಲ್ಯವೆಲ್ಲಾ ಕೆಟ್ಟು ಹೋಗುತ್ತೇ ಮಹಾರಾಯರೇ? ಆಯ್ತಾ?.
ಆಗಲೀ, ನಿಮ್ಮ ಅಪ್ಪಣೆಯಮೇರೆಗೆ ನಾನು ಬಾಯಿಯನ್ನ ಮುಚ್ಚಿಕೊಂಡೂ ಸುಮ್ಕಿರುತ್ತೇನೆ.
ಆಗಲಿ. ಈಗ ನಾನು ಹೇಳುವುದನ್ನ ಕೀಳಿ ನೋಡುವಾ?
ಕಾಯಿಯನ್ನ ಹೆರೆದು, ಅದಕ್ಕೆ ಒಂದು ಚಮಚ ಚಟ್ನೀಪುಡಿ, ಒಂದು ಚಮಚ ಸಾರಿನ ಪುಡಿಯನ್ನ ಹಾಕಿ ಚೆನ್ನಾಗಿ ಮಿಕ್ಷಿಯಲ್ಲಿ ರುಬ್ಬಿ, ಈ ಮಿಶ್ರಣವನ್ನ ನೀವು ಮಾಡಿದಂತಹ ತೊಂಡೇಕಾಯಿ ಪಲ್ಯಕ್ಕೆ ಹಾಕಿ ಸ್ವಲ್ಪ ಹೊತ್ತು ಆಚೆ ಈಚೆ
ಧಿಮಿ ಕಿಟ ಧಿಮಿ ಕಿಟ,
ತಾ ಹತ್ತ ದಿಂದಗಿಡ್ಕ
ತಾ ಕಿಟ ಕಿಟತಕ, ತೊದಿನಕ ದಿಕತಕ
ಅಂತ ಸಟ್ಟುಗದಲ್ಲಿ ಮೊಗಚಿ, ಅದರ ಮೇಲೆ ಬೇಕಿದ್ದರೆ ಕೊತ್ತುಂಬರಿ ಸೊಪ್ಪನ್ನ ಉದಿರಿಸಿ. ಒತ್ತಾಯವಿಲ್ಲ.
ಹೋಯ್ , ಈಗ ನಾನು ಹೇಳಿದಂತೆ ಸ್ಪೆಷಲ್ ತಾಳ್ಳು ಊಟಕ್ಕೆ ರೆಡೀ ಆಯ್ತು ಕಂಡ್ರ್ಯಾ?
ಬೇಕಿದ್ದರೆ, ಹವ್ಯಕ ಅಡುಗೆಗೆ, ನಿಮ್ಮನ್ನ ಒಂದು ವೇಳೆ, ಕ್ವಾಟದ್ ಅಡುಗೆಗೂ ಸದಸ್ಯರನ್ನಾಗಿ ಮಾಡಿದ್ದರೆ, ಅದಕ್ಕೂ ಹಾಕಿಯೇ.  ಇಲ್ಳಾ ಅಂದ್ರೆ ಅದರ ಯಜ್ಮಾನ ಯಾರೂ ಅಂತ ಕೇಳಿ ನಿಮ್ಮ ಹೆಸರನ್ನ ಹಾಕ್ಲಿಕ್ ಹೇಳಿ ಕಾಂಬೊ.
ಜನಗಳು ಪಲ್ಯದ ರುಚೀ ವಾಟ್ಸ್ ಏಪ್ನ ಹಾಗೂ ಫ಼ೇಸ್ಬುಕ್ನಲ್ಲಿ ನೋಡಲಿ ಬಿಡಿರಿ.
ಈಗ ನಾನು ಚೌಕಿಯತ್ತ ಹೆಜ್ಜೆ ನಿಮ್ಮ ಒಪ್ಪಿಗೆ ಇದ್ದರೆ ಹಾಕ್ತೇನೆ? ನಿಮ್ಮ ಅಪ್ಪಣೆ ಇದೆಯೋ?
ತೈತ ತೈತ ತೋಂ, ತೈತ ತೈತ್ ತೋಂ ಅಂತ ಚೌಕಿಯತ್ತ ಹೆಜ್ಜೆಯನ್ನ ಹಾಕಿದರೆನ್ನಿ.





ಪಾ. ಎಸ್. ಉಪಾಧ್ಯ


Another is soup prepared from Cylone harive, muly,caret , Basale
ನೀವು ನೋಡುತ್ತಿರುವುದು ಇಲ್ಲಿ ನಾನು ಬೆಳಿಗ್ಗೆ 6ಗಂಟೆಗೇ ಮಾಡಿದಂತಹ

1. ಎರಡು ಲೋಟ ನವಣೆ, ಉದ್ದು ಸ್ವಲ್ಪ,(1/2ಲೋಟ), ಹೆಸರು ಸ್ವಲ್ಪ,(1/2ಲೋಟ) ಇವುಗಳ್ನೆಲ್ಲಾ ನೀರಿನಲ್ಲಿಒಟ್ಟಿಗೆ  ಬೆಳಿಗ್ಗೆ 4 ಗಂಟೆಗೇ ನೆನಸಿ ಅರೆದು, ಈರುಳ್ಳಿ, ಶುಂಠಿ, 2 ಹಸಿಮೆಣಸು, ಸಬ್ಬಕ್ಕೀ ಸೊಪ್ಪು ಕತ್ತರಿಸಿ ತೆಳ್ಳಗಿನ ದೋಸೆಗಾಗಿ ಅರೆದು ತಿಯ್ಯಾರು ಮಾಡಿದಂತಹ ಹಿಟ್ಟು.

2. ಗುಂಬಳ ಕಾಯಿ, ಸೋರೇಕಾಯಿ, 2 ಮೂಲಂಗಿ, ಮತ್ತು ಅರ್ಧ ಕಟ್ಟು ಸಬ್ಬಕ್ಕೀ ಸೊಪ್ಪನ್ನ ಒಂದು ಚಿಟಿಕೆ ಲವಂಗದ ಪುಡಿ, ಒಂದು ಚಿಟಿಕೆ ಗರಂ ಮಸಾಲದ ಪುಡಿ, ಅರ್ಧ ಚಮಚ ಪೆಪ್ಪರ್ ಪುಡಿ, ಹಾಗೂ 1 ಚಮಚ ಓಮದ ಚಟ್ನೀ ಪುಡಿ ಮತ್ತು ಉಪ್ಪು ಹಾಕಿ ಬೇಯಿಸಲು ತೈಯ್ಯಾರಾದಂತಹ ಸೂಪಿಗೆ ರೆಡಿಯಾಗೀ ಇದ್ದಂತಹ ಘನ ಮತ್ತು ದ್ರವ ಪದಾರ್ಥ
3. ಗುಂಬಳ ಕಾಯಿಯ ಅಜ್ಜಿಯ ಮತ್ತು ಬೀಜದ ತಂಬುಳಿ ಮತ್ತು ಅದಕ್ಕೆ ಒಗ್ಗರಣೆಯನ್ನ ಹಾಕಿ ಊಟಕ್ಕೆ ತೈಯಾರಾಗಿ ಬಳಿಸಲು ರೆಡೀ ಇದ್ದಂತಹದ್ದು

4. ಗುಂಬಳಖಾಯಿಯ ಸಿಪ್ಪೆ, ಹುಣಸೇ ಹಣ್ಣು, ಉಪ್ಪು, ಇಂಗು, 2 ಹಸೀ ಮೆಣಸಿನ ಕಾಯಿ ಈ ಎಲ್ಲಾ ಮಿಶ್ರಣವನ್ನು ಒಂದು ಲೋಟ ನೀರನ್ನ ಹಾಕಿ ಬೇಯಿಸಿ ತಣ್ಣಗೆ ಮಾಡಿ, ಕಾಯಿ ತುರಿಯೊಂದಿಗೆ ಮಿಕ್ಷಿಯಲ್ಲಿ ಅರೆದು ಗೊಜ್ಜನ್ನ ಮಾಡಿ, ಒಗ್ಗರಣೆ ಎಲ್ಲಾ ಕೊಟ್ಟು ತಿಂಡಿ ಹಾಗೂ ಮಧ್ಯಾಹ್ನ, ರಾತ್ರಿಯ ಊಟಕ್ಕೆ ತೈಯ್ಯಾರಾಗಿ ಕುಳಿತಂತಹ ಗುಂಬಳ ಕಾಯಿ ಅಜ್ಜಿ ಗೊಜ್ಜು.
ನೋಡಿ ಇದೆಲ್ಲಾ ಮಾಡಿದ ಮೇಲೆ ಮನೆಯ ಹೆಂಗಸರು, 60 ದಾಟಿದವರಿಗೆ ಏನೂ ಕೆಲಸಾ?  ಅಂತ ನಾನು ಕೇಳುತ್ತೇನೆ.
ಬರೇ ತಿಂದು ಗಟ್ಟಿಯಾಗಿ ರೋಗದಿಂದ ನರಳುವ ಬದಲು, ಮೊದಲಿಗೆ ಅರ್ಧ ಗಂಟೆ ವಾಕಿಂಗ್, ಆಮೇಲೆ ಅರ್ಧ ಗಂಟೆ ಪ್ರಾಣಾಯಾಮ, ಆಮೇಲೆ ಮಿತವಾದ, ಹಿತವಾದ ತಿಂಡಿ ಹಾಗೂ ಊಟ ತಿಂದಲ್ಲಿ, ನಿಮಗೂ ಮಜವಾಗಿರುತ್ತೆ, ನಮಗೂ ಗಮ್ಮತ್ತು ಆಗಿರುತ್ತೆ. ದೇಹವೂ ಆರೋಗ್ಯದಿಂದ ಇರುತ್ತೆ.
ಏನಂತೀರ?
ಪಾರಂಪಳ್ಳಿ ಸುರೇಂದ್ರ ಉಪಾಧ್ಯ
7/11/2016




ಇವತ್ತು ಬೆಳಿಗ್ಗೆಯೇ 7 ಗಂಟೆಗೆ ನಮ್ಮ ಮನೆಯಲ್ಲಿ, ಹಲಸಿನ ಎಲೆಯ ಕೊಟ್ಟೆ ಕಡುಬು, ತೊಗರೀ ಬೇಳೆಯ ಗೊಜ್ಜು, ಹಾಗೂ ಸೋರೇಕಾಯಿಯ ದಿಢೀರ್ ಹುಳಿ.
ಇಲ್ಲಿ ನಾನು ದಿಢೀರ್ ಸೋರೆಕಾಯಿಯ ಹುಳಿಯನ್ನು ಮಾಡಲು ನಿಮಗೆ ಹೇಳುತ್ತೇನೆ.

ಬೇಕಾಗುವ ಸಾಮುಗ್ರಿಗಳು:-

ಕಾಲು ಕೇಜಿ ಸೋರೇ ಕಾಯಿ, ಸಿಪ್ಪೆ ತೆಗೆದು, ಸಣ್ಣಕೆ ಕತ್ತರಿಸಿ, ಒಂದೂವರೆ ಲೋಟ ನೀರನ್ನ ಹಾಕಿ ಮಕ್ರೋ ವೇವ್ ಓವನ್ನಿನಲ್ಲಿ ಇಟ್ಟು ಸ್ವಲ್ಪ ಅರಶಿನ ಮತ್ತು ಉಪ್ಪು ಹಾಕಿ 10 ನಿಮಿಷ ಬೇಯಿಸಿ ಪಕ್ಕಕ್ಕೆ ಇಟ್ಟ್ಕೊಳ್ಳಿ.
2ಈರುಳ್ಳಿ, ಒಂದು ಬೆಳ್ಳುಳಿಯನ್ನು ಕತ್ತರಿಸಿ ಇಟ್ಟುಕೊಳ್ಳಿ.
2 ಟೊಮ್ಯಾಟೊ ಕತ್ತರಿಸಿ ಪಕ್ಕಕ್ಕೆ ಇಟ್ಟುಕೊಳ್ಳಿ.
ಈಗ ನಿಮಗೆ ಮಾಡುವ ವಿಧಾನವನ್ನ ಹೇಳುತ್ತೇನೆ.

ಒಂದು ಬಾಣಲೆಯನ್ನ ತೆಗೆದುಕೊಂಡು, ಒಲೆಯ ಮೇಲಿಟ್ಟು, 2 ಚಮಚ ತುಪ್ಪವಮ್ನ ಹಾಕಿ. ಅದಕ್ಕೆ ಒಂದು ಅಥವಾ 2 ದಾಲ್ಚೀನಿ ಎಲೆಯನ್ನ ಹಾಕಿ ಮೊಗಚುತ್ತಾ ಇರಿ. ಅದಕ್ಕೆ, 1 ದೊಡ್ಡ ಚಮಚ ಜೀರಿಗೆ, ಒಂದು ಚಮಚ ಖಾರದ ಪುಡಿ, ಒಂದು ಅರ್ಧ ಚಮಚ ಅರಶಿನ ಹಾಕಿ ಮೊಗಚಿ. ಆ ಮಿಶ್ರಣಕ್ಕೆ ಒಂದು ಕಾಲು ಲೋಟ ನೀರನ್ನೂ ಹಾಕಿ ಹಾಗೆಯೇ ಸಣ್ಣ ಬೆಂಕಿಯಲ್ಲಿ ಬಿಟ್ಟು ಬಿಡಿ. ಮಿಕ್ಷಿಯಲ್ಲಿ ನೀವು ಬದಿಗಿಟ್ಟಂತಹ ಈರುಳ್ಳಿ. ಟೊಮ್ಯಾಟೊ ಹಾಗೂ ಬೆಳ್ಳ್ಲುಳ್ಳಿ ಮಿಶ್ರಣವನ್ನು ಗ್ರೈಂಡ್ ಮಾಡಿದ್ದನ್ನ ಈ ಬಾಣಲೆಗೆ ಸುರಿಯಿರಿ. ಹಾಗೆ ಕುದಿಯುತ್ತಿರುವಾಗ 2 ಚಮಚ ಮೊಸರು, ಒಂದು ಸಣ್ಣ ಬೆಲ್ಲದ ಉಂಡೆ, ಸ್ವಲ್ಪ ಉಪ್ಪು ರುಚಿಗೆ ತಕ್ಕಂತೆ, ಕಸ್ತೂರಿ ಮ್ಹೇತಿ, ಓವನ್ನಿನಲ್ಲಿಟ್ಟಂತಹ ಬೇಸಿದಂತಹ ಸೋರೇಕಾಯಿ ಹಾಕಿ ಕುದಿಸಲು ಒಂದು 2 ನಿಮಿಷ ಬಿಟ್ಟು  ಬಿಡಿ.  ಬೆಂಕಿಯನ್ನ ಆರಿಸಿದ ಮೇಲೆ ಒಂದು ನಿಂಬೇ ಹಣ್ಣನ್ನ ಹಿಂಡಿ, ಕೊತ್ತುಂಬರೀಸೊಪ್ಪನ್ನ ಅದರ ಮೇಲೆ ತೆಳ್ಳಗೆ ಹಾಕಿ. ನಿಂಬೇ ಹಣ್ಣನ್ನ ಹಿಂಡಿದ ಮೇಲೆ ಕುದಿದರೆ, ಅದು ಕೈ ಆಗುತ್ತೆ. ಅದಕ್ಕಾಗಿ, ಬೆಂಕಿ ಆರಿಸಿದಮೇಲ್ಯೇ ನಿಂಬೇ ಹಣ್ಣನ್ನ ಹಿಂಡೀ ಅಂತ ನಿಮಗೆಲ್ಲಾ ನಾನು ಹೇಳುವುದು.


ನಿಮ್ಮ ಹುಳಿ ಹಲಸಿನ ಎಲೆಯ ಕಡುಬಿನೊಂದಿಗೆ ತೈಯ್ಯಾರು.
ಲಗಾತಾರ್ ಐದು ದಿನವಿಡೀ, ಹಸಿರು ಸೇಬು (2), ಕಿವಿ ಹಣ್ಣು(2), 5 ಬಾಳೇ ಹಣ್ಣು ಹಾಗೂ 100ಗ್ರಾಂ ಕಾಲೆ (ಬ್ರೋಕಲೆ)ಯ ಜೂಸನ್ನು ದಿನವಿಡೀ ನಮ್ಮ ನೋರ್ಮಲ್ ಆಹಾರದ ಜೊತೆಗೆ (ಸ್ವಲ್ಪ ಕಂಟ್ರೋಲ್ ಇರಲಿಷ್ಠೆ. ಕುಡಿದ ಮೇಲೆ, ಈ ಎಲ್ಲಾ ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ನವಣೆಯೋ, ಸಾಮ್ನೆಯೋ ಅಥವಾ ಅರ್ಕದ ಯಾ ರಾಗಿಯ ರೊಟ್ಟಿಯನ್ನ ತಿಂದ ಮೇಲೆ ( ಆದರೆ ನಿಮ್ಮ ಲಿಮಿಟ್ ನಿಮ್ಮ ಕೈಯಲ್ಲಿರಲಿ. ) ನನ್ನ ಸಕ್ಕರೇ ಲವೆಲ್ ಉಪವಾಸದಲ್ಲಿ ಇವತ್ತು 113, ಹಾಗೂ ತಿಂಡಿಯನ್ನು ತಿಂದ 2 ಗಂಯೆಯ ಮೇಲೆ 136 ಇದೆ ಎಂದರೆ ನಂಬುವಿರಾ?

ನನ್ನ ತೂಕ 76.5 ಕೇಜಿ. ಇವುಗಳನ್ನ ಯಾತಕ್ಕೆ ನಿಮ್ಮಲ್ಲಿ ಶೇರ್ ಮಾಡುತ್ತಿದ್ದೇನೆಂದರೆ, ನೀವೂ ಮಾಡಿ ನಿಮ್ಮ ಆರೋಗ್ಯವನ್ನ ಸುಧಾರಿಸಿಕೊಳ್ಳೀ ಅಂತ ಕಳಕಳಿಯಿಂದ ವಿಜ್ನಾಪನೆಯನ್ನ ಮಾಡುತ್ತಿದ್ದೇನಷ್ಠೆ. ಇದರ ಮೇಲೆ ನಿಮಗೆ ಬಿಟ್ಟದ್ದು.
ಹೇಗಿದೆ ನನ್ನ ಸೂಪಿನ  ಮತ್ತು ಜೂಸಿನ ಕಮಾಲ್?😁😂😁😂

ಪಿ.ಎಸ್.ಉಪಾಧ್ಯ

No comments:

Post a Comment